ಶಿವಮೊಗ್ಗ ಸ್ಫೋಟ ಪ್ರಕರಣ: ಪೊಲೀಸರ ಕೈ ಸೇರಿದ ಮೃತದೇಹದ ಭಾಗಗಳ FSL ವರದಿ

ಶಿವಮೊಗ್ಗ ಸ್ಫೋಟ ಪ್ರಕರಣ: ಪೊಲೀಸರ ಕೈ ಸೇರಿದ ಮೃತದೇಹದ ಭಾಗಗಳ FSL ವರದಿ

ಶಿವಮೊಗ್ಗ: ಕಳೆದ ಜನವರಿ 21 ರಂದು ನಗರ ಹೊರವಲಯದ ಹುಣಸೋಡು ಗ್ರಾಮದ ಬಳಿ ಸಂಭವಿಸಿದ ಭಾರೀ ಸ್ಫೋಟಕ್ಕೆ ಸಂಬಂಧಿಸಿದಂತೆ ಮತ್ತೊಂದು ಮಾಹಿತಿ ಹೊರಬಿದ್ದಿದೆ.

ಕಲ್ಲುಗಂಗೂರು ಗ್ರಾಮದ ಸರ್ವೆ ನಂಬರ್ 2 ರ ಜಮೀನಿನಲ್ಲಿರುವ ಎಸ್.ಎಸ್​. ಕ್ರಷರ್ ಬಳಿ ಸ್ಪೋಟಕಗಳು ಸ್ಪೋಟಗೊಂಡಿದ್ದು, ಈ ಬಗ್ಗೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್​ ದಾಖಲಾಗಿತ್ತು.ಈ ಪ್ರಕರಣದಲ್ಲಿ ಸಾವನ್ನಪ್ಪಿದ ಐದು ಜನರ ಮೃತದೇಹಗಳ ಗುರುತನ್ನು ಅವರ ಸಂಬಂಧಿಕರ ಮೂಲಕ ಪತ್ತೆ ಮಾಡಲಾಗಿತ್ತು. ಆದರೆ ಇತರೆ ಮೃತದೇಹದ ಗುರುತು ಪತ್ತೆಗಾಗಿ ಸ್ಪೋಟದ ಸ್ಥಳದಲ್ಲಿ ದೊರೆತ ದೇಹದ ಭಾಗಗಳನ್ನು ಬೆಂಗಳೂರು ಮಡಿವಾಳದ ಎಫ್ಎಸ್ಎಲ್ ಗೆ ಡಿಎನ್ಎ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿತ್ತು.

ಇದನ್ನೂ ಓದಿ:ಜಿಲೆಟಿನ್ ಬ್ಲಾಸ್ಟ್; ಶಿವಮೊಗ್ಗಕ್ಕೂ, ಭದ್ರಾವತಿಗೂ ಇರುವ ಸಂಬಂಧವೇನು..?

ಸದ್ಯ ಇದರ ವರದಿ ಪೊಲೀಸ್​ ಇಲಾಖೆ ಕೈ ಸೇರಿದೆ. ಡಿಎನ್ಎ ವರದಿ ಪ್ರಕಾರ ಮೃತದೇಹದ ಭಾಗಗಳು 34 ವರ್ಷದ ಶಶಿ @ ದೇವೇಂದ್ರ ಬಿನ್ ಬೋರೇಗೌಡ ನದ್ದು ಎಂದು ತಿಳಿದು ಬಂದಿದೆ. ಆಟೋ ಚಾಲಕನಾಗಿದ್ದ ಈತ ಭದ್ರಾವತಿ ಹೊರವಲಯದ ಕೆ.ಹೆಚ್. ನಗರದ ನಿವಾಸಿಯಾಗಿದ್ದ ಎಂದು ತಿಳಿದು ಬಂದಿದೆ. ಈ ಮೂಲಕ ಸ್ಫೋಟದಲ್ಲಿ ಒಟ್ಟಾರೆ ಆರು ಜನ ಸಾವನ್ನಪಿರುವುದಾಗಿ ಸ್ಪಷ್ಟವಾಗಿದೆ.

ಇದನ್ನೂ ಓದಿ:ಶಿವಮೊಗ್ಗ​ ಸ್ಫೋಟ ಪ್ರಕರಣ; ಸ್ಥಳದಲ್ಲಿ ಮತ್ತೆ 175 ಡಿಟೋನೇಟರ್​ಗಳು ಪತ್ತೆ

Source: newsfirstlive.com Source link