ರೈತನ ಮನೆಯಲ್ಲಿ ರಾಸುಗಳ ನಿಗೂಢ ಸರಣಿ ಸಾವು.. 29 ರಾಸು ಕಳೆದುಕೊಂಡ ಕುಟುಂಬ ಕಂಗಾಲು

ರೈತನ ಮನೆಯಲ್ಲಿ ರಾಸುಗಳ ನಿಗೂಢ ಸರಣಿ ಸಾವು.. 29 ರಾಸು ಕಳೆದುಕೊಂಡ ಕುಟುಂಬ ಕಂಗಾಲು

ಮಂಡ್ಯ: ಮಂಡ್ಯ ತಾಲೂಕಿನ ಕೀಲಾರ ಗ್ರಾಮದ ಸಿದ್ದರಾಮೇಗೌಡ ಎಂಬ ರೈತನ ಮನೆಯಲ್ಲಿ ದುರ್ಘಟನೆ ನಡೆದಿದೆ. ಇವರ ಮನೆಯಲ್ಲಿ ನಿಗೂಢವಾಗಿ ರಾಸುಗಳು ಸರಣಿ ಸಾವನ್ನಪ್ಪುತ್ತಿವೆ ಎನ್ನಲಾಗಿದೆ.

ಕಳೆದ 3 ವರ್ಷಗಳಿಂದ ನಿರಂತರವಾಗಿ ರಾಸುಗಳು ಸರಣಿ ಸಾವನ್ನಪ್ಪುತ್ತಿದ್ದು ಇದುವರೆಗೂ ಹಸು, ಎಮ್ಮೆ, ಮೇಕೆ ಕುರಿ, ಎತ್ತು ಸೇರಿದಂತೆ 29 ರಾಸುಗಳ ಸಾವನ್ನಪ್ಪಿವೆಯಂತೆ.

ಎರಡು‌ ದಿನದ ಹಿಂದೆ ಕೂಡ ಒಂದು ಎತ್ತು ಸಾವನಪ್ಪಿತ್ತು.. ನಿಗೂಢ ಸಾವಿನ ಕಾರಣ ತಿಳಿಯದೆ ಇಡೀ ಕುಟುಂಬ ಚಿಂತೆಯಲ್ಲಿ ಮುಳುಗಿದೆ. ನಾಳೆ ರೈತ ಸಿದ್ದರಾಮೇಗೌಡರ ಮನೆಗೆ ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ.

Source: newsfirstlive.com Source link