ಪಕ್ಷೇತರ ಅಭ್ಯರ್ಥಿಗೆ ಉಪಮೇಯರ್ ಸ್ಥಾನ- ಶೆಟ್ಟರ್ ಘೋಷಣೆ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಸ್ಥಾನ ಬಿಜೆಪಿಗೆ ಒಲಿಯುತ್ತಿದ್ದು, ಉಪಮೇಯರ್ ಸ್ಥಾನವನ್ನು ಪಕ್ಷೇತರ ಅಭ್ಯರ್ಥಿಗೆ ನೀಡುವುದಾಗಿ ಮಾಜಿ ಸಚಿವ ಜಗದೀಶ್ ಶೆಟ್ಟರ್ ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ನಡೆದ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 39 ಸ್ಥಾನಗಳನ್ನು ಗಳಿಸಿ ಮೇಯರ್ ಸ್ಥಾನದ ಗದ್ದುಗೆ ಎರುವಲ್ಲಿ ಯಶ್ವಸಿಯಾಗುತ್ತು. ಆದರೆ ಉಪಮೇಯರ್ ಸ್ಥಾನ ಪಕ್ಷೇತರ ಅಭ್ಯರ್ಥಿಯ ಪಾಲಾಗುತ್ತಿದೆ. ಬಿಜೆಪಿಯಿಂದ ಗೆಲುವು ಸಾಧಿಸಿದ ಸದಸ್ಯರ ಪೈಕಿ ಯಾರೂ ಪರಿಶಿಷ್ಟ ಜಾತಿಯ ಮಹಿಳಾ ಸದಸ್ಯರು ಇಲ್ಲದ ಪರಿಣಾಮ ಪಕ್ಷೇತರ ಅಭ್ಯರ್ಥಿಯನ್ನು ಉಪಮೇಯರ್ ಮಾಡುವುದಾಗಿ ಜಗದೀಶ್ ಶೆಟ್ಟರ್ ಘೋಷಿಸಿದ್ದಾರೆ.

ಚುನಾವಣೆ ವೇಳೆ ಬಿಜೆಪಿ ಟಿಕೆಟ್ ಆಕ್ಷಾಂಕಿಯಾಗಿದ್ದರು. ಆದರೆ ಪಕ್ಷದ ಟಿಕೆಟ್ ಸಿಗದ ಪರಿಣಾಮ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಗೆಲುವು ಸಾಧಿಸಿದ 69ನೇ ವಾರ್ಡ್ ನ ದುರ್ಗಮ್ಮ ಬಿಜವಾಡ್ ಗೆ ಒಲಿದ ಅದೃಷ್ಟ ಒಲಿದಿದೆ. ಬಿಜೆಪಿ ನಾಯಕರ ಜೊತೆಗಿನ ಮಾತುಕತೆ ಸಕ್ಸಸ್ ಆಗಿದೆ. ಇದನ್ನೂ ಓದಿ: ಭೂಪೇಂದ್ರ ಪಟೇಲ್ ಯಾರು? ಹಿನ್ನೆಲೆ ಏನು?

ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪರಿಣಾಮ ದುರ್ಗಮ್ಮ ಬಿಜವಾಡರ ಪತಿ ಶಶಿಕಾಂತರನ್ನ ಬಿಜೆಪಿ ಪಕ್ಷದಿಂದ ಉಚ್ಛಾಟನೆ ಮಾಡಿ ಹೊರಡಿಸಿದ್ದ ಆದೇಶವನ್ನು ಸಹ ಹಿಂಪಡೆಯುವುದಾಗಿ ಘೋಷಿಸಲಾಗಿದೆ. ಪರಿಣಾಮ ದುರ್ಗಮ್ಮ ಬಿಜವಾಡರ ಪತಿ ಶಶಿಕಾಂತ ಬಿಜವಾಡ ಮರಳಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇನ್ನೆರಡೂ ದಿನದಲ್ಲಿ ಪಕ್ಷೇತರ ಅಭ್ಯರ್ಥಿ ದುರ್ಗಮ್ಮ ಬಿಜವಾಡ್ ಸಹ ಬಿಜೆಪಿ ಸೇರ್ಪಡೆಯಾಗಲಿದ್ದು, ಇವರನ್ನು ಬಿಜೆಪಿ ನಾಯಕರು ಪಕ್ಷದ ಪರವಾಗಿ ಉಪಮೇಯರ್ ಮಾಡಲಿದ್ದಾರೆ.

ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವ ಜಗದೀಶ್ ಶೆಟ್ಟರ್, ಟಿಕೆಟ್ ಹಂಚಿಕೆಯಲ್ಲಿ ಕೆಲ ಗೊಂದಲ ಉಂಟಾಗಿತ್ತು. ಈಗ ಪಕ್ಷೇತರರು ಸಹ ನಮ್ಮ ಪರವಾಗಿದ್ದಾರೆ. 69ನೇ ವಾರ್ಡ್ ನ ಶಶಿ ಬಿಜವಾಡ ಅವರ ಪತ್ನಿಯನ್ನು ನಾವು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದೇವೆ. ಹುಬ್ಬಳ್ಳಿ-ಧಾರವಾಡ ಸೇರಿದಂತೆ ಬೆಳಗಾವಿ ಪಾಲಿಕೆಯಲ್ಲೂ ಬಿಜೆಪಿ ಅಧಿಕಾರ ವಹಿಸಿಕೊಳ್ಳಲಿದೆ. ಕಲಬುರಗಿ ಪಾಲಿಕೆಯಲ್ಲಿ ಜೆಡಿಎಸ್ ಬೆಂಬಲಕ್ಕಾಗಿ ನಾವು ಪ್ರಯತ್ನ ಮಾಡುತ್ತಿದ್ದೇವೆ. ಅಲ್ಲಿಯೂ ಮೇಯರ್, ಉಪ ಮೇಯರ್ ನಾವೇ ಆಗುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Source: publictv.in Source link