700 ಅಡಿಕೆ ಮರಗಳನ್ನು ಕಡಿದು ಹಾಕಿದ್ದ ಆರೋಪಿಯನ್ನ 5 ಗಂಟೆಗಳಲ್ಲಿ ಬಂಧಿಸಿದ ಪೊಲೀಸ್

700 ಅಡಿಕೆ ಮರಗಳನ್ನು ಕಡಿದು ಹಾಕಿದ್ದ ಆರೋಪಿಯನ್ನ 5 ಗಂಟೆಗಳಲ್ಲಿ ಬಂಧಿಸಿದ ಪೊಲೀಸ್

ಹಾವೇರಿ: ತಾಲೂಕಿನ ಬಾಳಂಬೀಡ ಗ್ರಾಮದಲ್ಲಿ ಬರೋಬ್ಬರಿ 700 ಅಡಿಕೆ ಮರಗಳನ್ನು ಕತ್ತರಿಸಿದ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದ ಐದು ಗಂಟೆಯಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ರೈತ ಸಹೋದರರ ಮನೆಯಲ್ಲಿ ಬಾಡಿಗೆ ಇದ್ದವನೇ ಗಿಡಗಳನ್ನು ಕಡಿದಿರುವ ಆರೋಪಿ ಎನ್ನಲಾಗಿದೆ. ರಾಜಾಸಬ ಹೊಸಮನಿ ಎಂಬಾತನನ್ನು ಬಂಧಿಸಲಾಗಿದ್ದು ಈತ ತೋಟದಲ್ಲಿ ಬಂದ ಫಸಲಲ್ಲಿ ಶೇರ್ ಕೊಡುವಂತೆ ಕೇಳಿದ್ದನಂತೆ. ಈ ವಿಚಾರಕ್ಕೆ ರೈತರು ಹಾಗೂ ಆರೋಪಿ ನಡುವೆ ಜಗಳವಾಗಿತ್ತು.. ಈ ಹಿನ್ನಲೆ ರಾಜಾಸಾಬ ಹೊಸಮನಿಯನ್ನ ಮನೆ ಖಾಲಿ ಮಾಡಿಸಿ ರೈತ ಕಲೀಲ್ ಹಾಗೂ ಮೊಹಮ್ಮದ ರಫೀಕ್.. ಹೊರಗೆ ಹಾಕಿದ್ದರು ಎನ್ನಲಾಗಿದೆ.

ಅವಮಾನ ಮಾಡಿದ್ದಕ್ಕೆ ಕೆಲಸ ಮಾಡಿದ ದುಡ್ಡು ಕೊಡದಿದ್ದಕ್ಕೆ ಈ ಕೃತ್ಯ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನಂತೆ. ಚೂಪಾದ ಮಚ್ಚು ಹಿಡಿದು ರಾಜಾಸಾಬ ಹೊಸಮನಿ ನಿನ್ನೆ ರಾತ್ರಿ ಮರಗಳನ್ನು ಕತ್ತರಿಸಿ ಹಾಕಿದ್ದಾನೆ ಎನ್ನಲಾಗಿದೆ. ಆಡೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Source: newsfirstlive.com Source link