ಪ. ಬಂಗಾಳ ಚುನಾವಣೆ ನಂತರದ ಹಿಂಸಾಚಾರ: 11 ಮಂದಿಯನ್ನ ಬಂಧಿಸಿದ CBI ಅಧಿಕಾರಿಗಳು

ಪ. ಬಂಗಾಳ ಚುನಾವಣೆ ನಂತರದ ಹಿಂಸಾಚಾರ: 11 ಮಂದಿಯನ್ನ ಬಂಧಿಸಿದ CBI ಅಧಿಕಾರಿಗಳು

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಕೆಲ ತಿಂಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆಯ ನಂತರ ಹಿಂಸಾಚಾರ ಹೆಚ್ಚಾಗಿತ್ತು. ಈ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇದೀಗ ಸಿಬಿಐ 11 ಮಂದಿಯನ್ನು ಅರೆಸ್ಟ್ ಮಾಡಿದೆ. ಬಂಧಿತರು ಎರಡು ಪ್ರತ್ಯೇಕ ಕೊಲೆ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: BREAKING ಪಶ್ಚಿಮ ಬಂಗಾಳದ ಬಸ್​ ಒಂದರಲ್ಲಿ 30 ಬಾಂಬ್​ಗಳು ಪತ್ತೆ

ಇಂದು ಕೂಚ್ ಬೆಹರ್​ನ ಸುತ್ತಮುತ್ತ ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಲಾಗಿದೆ. ಇನ್ನು ಹಿಂಸಾಚಾರದಲ್ಲಿ ಸಾವನ್ನಪ್ಪಿದ ಹರ್ಧನ್ ರಾಯ್ ಎಂಬುವವನ ಪೋಷಕರು ಮೇ 3 ನೇ ತಾರೀಕು ಅರ್ಜುನ್ ಮುಂಡಾ ಎಂಬುವವನು ನನ್ನ ಮಗನನ್ನು ಕರೆದೊಯ್ದಿದ್ದ. ಅಂದೇ ಆತನ ಕೊಲೆಯಾಗಿತ್ತು ಎಂದಿದ್ದಾರೆ.

ಇದನ್ನೂ ಓದಿ: ಪ.ಬಂಗಾಳದಲ್ಲಿ ಕೇಂದ್ರ ಸಚಿವರೂ ಸೇಫ್ ಅಲ್ಲ; ಹಲ್ಲೆ ಹಿನ್ನೆಲೆ ವರದಿ ಕೇಳಿದ ಗೃಹ ಸಚಿವಾಲಯ

ಇನ್ನು ಮಾನವ ಹಕ್ಕುಗಳ ಆಯೋಗ ಈಗಾಗಲೇ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಿ ವರದಿಯೊಂದನ್ನ ತಯಾರಿಸಿ ಹೈಕೋರ್ಟ್​ಗೆ ನೀಡಿದೆ. ಹೈಕೋರ್ಟ್ ಸಿಬಿಐಗೆ ವರದಿಯನ್ನು ನೀಡಿ ಕ್ರಮ ತೆಗೆದುಕೊಳ್ಳುವಂತೆ ಹೇಳಿದೆ ಎನ್ನಲಾಗಿದೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಮಿತಿ ಮೀರಿದ ಹಿಂಸಾಚಾರ; ರಾಜ್ಯ ಬಿಡ್ತಿದ್ದಾರೆ ಬಿಜೆಪಿ ಕಾರ್ಯಕರ್ತರ ಕುಟುಂಬಗಳು

ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಯವರ ಪಕ್ಷ ಟಿಎಂಸಿ ಭರ್ಜರಿ ಗೆಲುವು ಸಾಧಿಸಿತ್ತು. ಚುನಾವಣೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಹಿಂಸಾಚಾರದ ಘಟನೆಗಳು ವರದಿಯಾಗಿದ್ದವು.

Source: newsfirstlive.com Source link