ರಾಜ್ಯದ ಮೂಲೆಮೂಲೆಯಿಂದ ಬೆಂಗಳೂರಿಗೆ ಬರ್ತಿರೋ ಜನಪ್ರತಿನಿಧಿಗಳಿಗೆ ‘ನೀರಿಲ್ಲ’ ಎಂದ ಜಲಮಂಡಳಿ

ರಾಜ್ಯದ ಮೂಲೆಮೂಲೆಯಿಂದ ಬೆಂಗಳೂರಿಗೆ ಬರ್ತಿರೋ ಜನಪ್ರತಿನಿಧಿಗಳಿಗೆ ‘ನೀರಿಲ್ಲ’ ಎಂದ ಜಲಮಂಡಳಿ

ನಾಳೆಯಿಂದ ರಾಜ್ಯದಲ್ಲಿ ಮಳೆಗಾಲದ ಅಧಿವೇಶನ ಆರಂಭವಾಗ್ತಿದೆ. ರಾಜ್ಯದ ಮೂಲೆ ಮೂಲೆಯಿಂದ ಶಾಸಕರು ಬೆಂಗಳೂರಿಗೆ ಬರುತ್ತಿದ್ದಾರೆ. ಆದ್ರೆ ಸಮಸ್ಯೆಗಳ ಬಗ್ಗೆ ಕೂಲಂಕುಷವಾಗಿ ಚರ್ಚಿಸಿ.. ಅದನ್ನ ಬಗೆಹರಿಸಿಕೊಳ್ಳಬೇಕು ಅಂತ ಬಂದಿರೋ ಎಂಎಲ್​​ಎ ಗಳಿಗೆ ಬಿಡಬ್ಲ್ಯೂಎಸ್​​ಎಸ್​​ಬಿ ಶಾಕ್​ ಕೊಟ್ಟಿದೆ.

ಮಳೆಗಾಲದ ಅಧಿವೇಶನದ ಹಿನ್ನೆಲೆ ರಾಜ್ಯದ 8 ದಿಕ್ಕುಗಳಿಂದ ಜನ ಪ್ರತಿನಿಧಿಗಳು ಈಗಾಗ್ಲೇ ಬೆಂಗಳೂರಿಗೆ ಬಂದಿದ್ದಾರೆ. ನಾಳೆಯಿಂದ ಅಧಿವೇಶನ ಆರಂಭವಾಗ್ತಿದೆ. ತಮ್ಮ​ ತಮ್ಮ ಭಾಗದ ಸಮಸ್ಯೆಗಳನ್ನ ಸರ್ಕಾರದ ಮುಂದಿಡೋದ್ರ ಜೊತೆಗೆ, ಒಂದಿಷ್ಟು ಕಾಯಿದೆಗಳನ್ನ ರೂಪಿಸಲು ಬಂದ ಎಂಎಲ್​ಎಗಳಿಗೆ ಜಲಮಂಡಳಿ ನಾವ್​ ನೀರು ಕೊಡೊದಿಲ್ಲ ಅಂತ ಬೋರ್ಡ್​ ಹಾಕಿಬಿಟ್ಟಿದೆ.

ಬೆಂಗಳೂರು ನಗರದ ಶಾಸಕರ ಭವನ ವ್ಯಾಪ್ತಿಗೆ ಒಳಪಡುವ ಪ್ರದೇಶದಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ತುರ್ತು ಕಾಮಗಾರಿ ಕೈಗೊಳ್ಳುತ್ತಿರುವ ಕಾರಣ, ಭಾನುವಾರ ಮತ್ತು ಸೋಮವಾರದಂದು ನೀರು ಸರಬರಾಜು ಸ್ಥಗಿತಗೊಳಿಸಲಾಗುತ್ತದೆ. ಆದ್ದರಿಂದ ಶಾಸಕರ ಭವನದಲ್ಲಿ ರಡು ದಿನ ನೀರು ಸರಬರಾಜು ಇರುವುದಿಲ್ಲ. ಕಾರಣ ಅನಾನುಕೂಲತೆಗಳಿಗೆ ವಿಷಾದವಿದೆ. – ಜಲಮಂಡಳಿ

ಸಕಲ ವ್ಯವಸ್ಥೆ ಇರುತ್ತೆ ಅಂತ ಆರಾಮಾಗಿ ಬಂದ ಜನಪ್ರತಿನಿಧಿಗಳಿಗೆ ಕೈ ತೊಳೆಯೋಕೂ ನೀರಿಲ್ಲ. ಸದ್ಯ ಟ್ಯಾಂಕರ್​ಗಳ ಮೂಲಕ ನೀರಿನ ವ್ಯವಸ್ಥೆ ಮಾಡಲಾಗ್ತಿದೆ. ಅದೇನೇ ಇರ್ಲಿ ಜನರ ನೀರಿನ ಸಮಸ್ಯೆಗಳಿಗೆ ಪರಿಹಾರ ಕೊಡಬೇಕಾದವ್ರಿಗೇ ಇಂಥಾ ಸಮಸ್ಯೆ ಬಂದಿದ್ದು ನಿಜಕ್ಕೂ ವಿಪರ್ಯಾಸ.

Source: newsfirstlive.com Source link