ಗಣೇಶ ವಿಸರ್ಜನೆ ವೇಳೆ ಯುವಕ ನೀರು ಪಾಲು

ಚಿತ್ರದುರ್ಗ: ಸಡಗರ ಸಂಭ್ರಮದಿಂದ ಗಣಪತಿ ಮಹೋತ್ಸವ ಆಚರಿಸಿದ್ದ ಯುವಕ, ಗಣೇಶ ವಿಸರ್ಜನೆ ವೇಳೆ ನೀರುಪಾಲಾಗಿರುವ ಘಟನೆ ಜಿಲ್ಲೆಯ ಹೊಸದುರ್ಗ ತಾಲೂಕಿನ ಕೊಂಡಾಪುರ ಗ್ರಾಮದಲ್ಲಿ ನಡೆದಿದೆ.

ಕೊಂಡಾಪುರ ಗ್ರಾಮದ ರಾಜು(22) ಮೃತ ಯುವಕ ಎಂದು ಗುರುತಿಸಲಾಗಿದ್ದು, ಗಣಪತಿ ಮಹೋತ್ಸವ ಆಚರಿಸಿ ಭದ್ರಾ ಕಾಲುವೆಗೆ ಗಣಪ ವಿಸರ್ಜನೆ ಮಾಡಲೆಂದು ಗ್ರಾಮದ ಯುವಕರೆಲ್ಲರು ತೆರಳಿದ್ದರು. ಆಗ ಕಾಲುವೆ ಬಳಿ ಗಣಪತಿ ವಿಸರ್ಜನೆ ಮಾಡಲು ತೆರಳಿದ್ದ ರಾಜು, ಕಾಲುಜಾರಿ ಕಾಲುವೆಗೆ ಬಿದ್ದ ಪರಿಣಾಮ ಗಾಬರಿಯಾಗಿ ನೀರಿನಲ್ಲಿ ಮುಳುಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಸೋಮವಾರ ತೆರೆಬಿಳಲಿದೆ ಕಲಬುರಗಿ ಮಹಾನಗರ ಪಾಲಿಕೆ ಮೈತ್ರಿ ಸರ್ಕಸ್?

ಮೃತನ ಕುಟುಂಬದ ಆಕ್ರಂದನ ಮುಗಿಲುಮಟ್ಟಿದೆ. ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಈ ಪ್ರಕರಣ ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Source: publictv.in Source link