ಶತ್ರುವಿನ ಸಂಹಾರ ನಡೆಸಲು ಸಜ್ಜಾದ ‘ಧ್ರುವ’ ಈ INS​ ಧ್ರುವನ ವಿಶೇಷತೆ ಏನು ಗೊತ್ತಾ?

ಶತ್ರುವಿನ ಸಂಹಾರ ನಡೆಸಲು ಸಜ್ಜಾದ ‘ಧ್ರುವ’ ಈ INS​ ಧ್ರುವನ ವಿಶೇಷತೆ ಏನು ಗೊತ್ತಾ?

ಭಾರತ ಸಮುದ್ರ ಭದ್ರತೆಗಳನ್ನ ಹೆಚ್ಚಿಸುತ್ತಿದೆ. ದಿನದಿಂದ ದಿನಕ್ಕೆ ಭಾರತದ ನೌಕಾ ಪಡೆ ಕೂಡ ಬಲಿಷ್ಟವಾಗ್ತಿದೆ. ಇದೀಗ ಮತ್ತೊಬ್ಬ ಸಾಗರದಲ್ಲಿ ಶತ್ರುವಿನ ಸಂಹಾರ ನಡೆಸಲು ರೆಡಿಯಾಗಿದ್ದಾನೆ. ಸಾಗರದಲ್ಲಿ ವೈರಿಗಳ ಕಳ್ಳ ಹೆಜ್ಜೆಗಳನ್ನ ಕೂಡ ಗುರುತಿಸಬಲ್ಲ ಆ ವೀರನ ಎಂಟ್ರಿಯಿಂದ ಶತ್ರುಗಳ ಎದೆಯಲ್ಲಿ ಭಯ ನಾಟ್ಯವಾಡಲು ಶುರುವಾಗಿದೆ. ಹಾಗಾದ್ರೆ ಆ ವೀರ ಯಾರು..? ಆತನ ಸ್ಪೆಷಾಲಿಟಿ ಏನು?

ಸಾಗರದಲ್ಲಿ ಮುನ್ನುಗ್ಗಿ ಶತ್ರುವಿನ ಸಂಹಾರ ನಡೆಸಲಿದ್ದಾನೆ. ಕಡಲ ನಡುವೆಯೇ ವೈರಿಗಳ ಚಲನವಲನಗಳ ಮೇಲೆ ಹದ್ದಿನ ಕಣ್ಣಿಡಲಿದ್ದಾನೆ. ವೈರಿಗಳ ಅಣ್ವಸ್ತ್ರ ಕ್ಷಿಪಣಿ ಪತ್ತೆ ಹಚ್ಚುವ ಮೂಲಕ ಶತ್ರವಿನ ಹೆಡೆ ಮುರಿ ಕಟ್ಟಲಿದ್ದಾನೆ. ಸಾಗರದಲ್ಲಿ ಬಂದು ದೇಶವನ್ನ ಕೆಣಕುವ ಮುನ್ನ ಹುಷಾರ್.

ಜಗತ್ತಿನ ಮೊದಲ ನೌಕಾಪಡೆ ಅನ್ನೋ ಖ್ಯಾತಿ ಹೊಂದಿರುವ ಭಾರತದ ನೌಕಾ ಪಡೆಯಂದ್ರೆ ಸಾಕು, ಶತ್ರು ದೇಶದ ಎಂತಹ ಅಂಜದಗಂಡಿನ ಗುಂಡಿಗೆ ಕೂಡ ಒಮ್ಮೆ ನಡುಗಿ ಬಿಡುತ್ತೆ. ಭಾರತೀಯ ಸೇನೆ ಅಂದ್ರೆನೆ ಹಾಗೆ, ನೆಲ, ಜಲ, ವಾಯು ಎಲ್ಲದ್ರಲ್ಲೂ ಬಲಿಷ್ಠ. ನೆಲ, ಜಲ, ವಾಯು ಅದ್ಯಾವ ಮೂಲಕವಾದ್ರು ಕೂಡ ವೈರಿಗಳು ಸವಾಲು ಎದುರಾದ್ರೆ ಸಾಕು.. ಅವುಗಳನ್ನ ದಿಟ್ಟವಾಗಿ ಹಿಮ್ಮೆಟ್ಟಿಸುವ ತಾಕತ್ತು ಭಾರತೀಯ ಸೇನೆಗಿದೆ. ಜಲ ಹಾದಿಯ ಮೂಲಕ ವೈರಿಗಳು ಮೀನಿನಂತ ಹೆಜ್ಜೆ ಇಟ್ರೂ ಕೂಡ ಭಾರತೀಯ ನೌಕಪಡೆ ಜಲಯುದ್ಧವನ್ನೇ ಸಾರಿ, ಶತ್ರುವಿನ ಅಡಗು ತಾಣಕ್ಕೆ ನುಗ್ಗಿ ಹೊಡೆಯುತ್ತೆ.

blank

ದೇಶದ ಮೂರು ಕಡೆಗಳಲ್ಲೂ ಸಾಗರವು ದೇಶವನ್ನ ಸುತ್ತುವರೆದಿದೆ. ಆದ್ರೆ ಮೂರು ಕಡೆಗಳಲ್ಲೂ ಸುತ್ತುವರೆದಿರುವ ಸಾಗರದಲ್ಲಿ ವೈರಿಗಳು ಹೊಂಚು ಹಾಕಿ ಕೂತಿರ್ತಾರೆ. ಇಂತಹ ಸಾಗರದಲ್ಲಿ ಕೂತ ವೈರಿಗಳ ಕೆಂಗಣ್ಣಿನಿಂದ ದೇಶವನ್ನ ರಕ್ಷಣೆ ಮಾಡಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಆದ್ರೂ ನೌಕಾ ಪಡೆ ಸಮುದ್ರದಲ್ಲಿ ಎಲ್ಲಾ ರೀತಿಯಲ್ಲೂ ಕಣ್ಗಾವಲು ಇಟ್ಟು ದೇಶಕ್ಕೆ ರಕ್ಷಣೇ ನೀಡುತ್ತೆ. ದಿನದಿಂದ ದಿನಕ್ಕೆ ಭಾರತೀಯ ನೌಕಾಪಡೆ ಕೂಡ ಬಲಿಷ್ಠವಾಗ್ತಿದೆ. ಅದ್ರಲ್ಲೂ ಇತ್ತೀಚಿಗೆ ಸ್ವದೇಶಿ ನಿರ್ಮಿತ ವಸ್ತುಗಳೇ ಭಾರತೀಯ ನೌಕಾ ಪಡೆಗೆ ಮತ್ತಷ್ಟು ಬಲ ಹೆಚ್ಚುಸುತ್ತಿದೆ. ಇದೀಗ ಮತ್ತೊಬ್ಬ ವೀರ ಭಾರತೀಯ ನೌಕಾಪಡೆ ಸೇರಲು ತುದಿಗಾಳಲ್ಲಿ ನಿಂತಿದ್ದು, ಶತ್ರುಗಳ ಎದೆ ಪುಕ ಪುಕ ಅನ್ತಿದೆ.

ನೌಕಾಪಡೆಗೆ ಮತ್ತಷ್ಟು ಬಲ ತುಂಬಲಿದ್ದಾನೆ ಈ ವೀರ
ವೈರಿಗಳ ಅಣ್ವಸ್ತ್ರ ಕ್ಷೀಪಣಿ ಪತ್ತೆ ಹಚ್ಚಲು ಬರಲಿದ್ದಾನೆ ‘ಧ್ರುವ’

ಇದು ಬರೀ ಹಡಗಲ್ಲ.. ಈತ ಎಂಟ್ರಿಯಾಗುವ ಮೊದ್ಲೇ ಇದೀಗ ಶತ್ರುಗಳ ಎದೆಯಲ್ಲಿ ನಡಕು ಹುಟ್ಟಿಸಿದ್ದಾನೆ. ಅಂಥದ​ರಲ್ಲಿ ಎಂಟ್ರಿಯಾದ್ರೆ ಕೇಳ್ಬೇಕಾ ಹೇಳಿ. ಇದೀಗ ಆತನ ಆಗಮನ ದಿನ ಹತ್ತಿರವಾಗ್ತಿದೆ. ಆ ಧೀರ ಬೇರೆ ಯಾರು ಅಲ್ಲ. ಅವನ ಹೆಸರು INS ಧ್ರುವ. ಒನ್ಸ್​ ಅಗೈನ್​ ರಿಮೆಂಬರ್​​ ದಿ ನೇಮ್. INS ಧ್ರುವ. ಇದು ಭಾರತದ ಚೊಚ್ಚಲ ಸ್ವದೇಶಿ ನಿರ್ಮಿತ ನ್ಯೂಕ್ಲಿಯರ್ ಕ್ಷಿಪಣಿ ಟ್ರ್ಯಾಕಿಂಗ್ ಶಿಪ್.. ಹಿಂದೂಸ್ತಾನ್ ಶಿಪ್​ಯಾರ್ಡ್​​ ಸಂಸ್ಥೆ, ಡಿಆರ್​ಡಿಓ ಮತ್ತು ಎನ್​ಡಿಆರ್​ಒ ಸಹಯೋಗದಲ್ಲಿ ಈ ಧ್ರುವ ರೆಡಿಯಾಗ್ತಿದ್ದಾನೆ. ಶೀಘ್ರದಲ್ಲಿ ಶತ್ರುವಿನ ಮೇಲೆ ಹದ್ದಿನ ಕಣ್ಣಿಡಲು ಭಾರತದ ನೌಕಾ ಪಡೆ ಸೇರ್ಪಡೆಯಾಗಲಿದ್ದಾನೆ.

ಕೇವಲ ಐದು ದೇಶಗಳಲ್ಲಿ ಮಾತ್ರ ಇದೆ INS ಧ್ರುವ
6ನೇ ರಾಷ್ಟ್ರವಾಗಿ ಹೊರ ಹೊಮ್ಮಲಿದೆ ಭಾರತ

ವೈರಿಗಳ ಅಣ್ವಸ್ತ್ರ ಕ್ಷೀಪಣಿ ಪತ್ತೆ ಹಚ್ಚುವ ಈ ನ್ಯೂಕ್ಲಿಯರ್ ಕ್ಷಿಪಣಿ ಟ್ರ್ಯಾಕಿಂಗ್ ಸಾಮರ್ಥ್ಯದ ನೌಕೆ ಇರುವುದು ಬೆರಳೆಣಿಯಕಷ್ಟೇ ದೇಶಗಳಲ್ಲಿ ಮಾತ್ರ. ಅಮೆರಿಕ, ಚೀನಾ, ಫ್ರಾನ್ಸ್, ಇಂಗ್ಲೆಂಡ್, ರಷ್ಯಾದಲ್ಲಿ ಮಾತ್ರ ಈ ನ್ಯೂಕ್ಲಿಯರ್ ಕ್ಷಿಪಣಿ ಟ್ರ್ಯಾಕಿಂಗ್ ಇದೆ.

ಈ ಶೂರ ಶ್ರೀಘ್ರದಲ್ಲಿಯೇ ಭಾರತದ ನೌಕಾಪಡೆ ಸೇರ್ಪಡೆಯಾಗಲಿದ್ದು, ಈ ಮೂಲಕ ಈ ಪವರ್​​ ಫುಲ್​​ ನೌಕೆಯನ್ನ ಹೊಂದಿರುವ ಆರನೇ ದೇಶವಾಗಿ ಭಾರತ ಹೊರಹೊಮ್ಮಲಿದೆ. ಈತಭಾರತದ ನೌಪಾಕಡೆಯ ಮುಕುಟಕ್ಕೆ ಮತ್ತಷ್ಟು ತೂಕ ತುಂಬಲಿದ್ದಾನೆ. ಈ ಹಡಗಿನ ಆಗಮನದ ನಂತರ, ಭಾರತವು ಕೂಡ ವಿಶೇಷ ಹಡಗುಗಳನ್ನು ಹೊಂದಿರುವ ಯುಎಸ್, ಯುಕೆ, ರಷ್ಯಾ, ಫ್ರಾನ್ಸ್ ಮತ್ತು ಚೀನಾದಂತಹ ಗಣ್ಯರ ಪಟ್ಟಿಗೆ ಸೇರಲಿದೆ.

blank

ಈ ಐಎನ್​ಎಸ್​ ಧ್ರುವನ ವಿಶೇಷತೆ ಏನು ಗೊತ್ತಾ?
ಜಲಂತರ್ಗಾಮಿ ಡ್ರೋನ್​ ದಾಳಿಗೆ ತಡೆವೊಡ್ಡಲಿದ್ದಾನೆ ಧ್ರುವ

10 ಸಾವಿರ ಟನ್ ಇರುವ ಈ ಧ್ರುವ ಸಾಗರಗದಲ್ಲಿ ಶತ್ರುಗಳ ಮೀನಿನಂತಹ ಹೆಜ್ಜೆಯನ್ನ ಕೂಡ ಪತ್ತೆ ಹಚ್ಚಿ, ಅದ್ಕೆ ತಕ್ಕ ಶಾಸ್ತಿ ಮಾಡಲಿದ್ದಾನೆ. ಈ ಐಎನ್​ಎಸ್​ ಧ್ರುವ ವೈರಿಗಳ ಅಣ್ವಸ್ತ್ರ ಕ್ಷಿಪಣಿಯನ್ನ ಪತ್ತೆ ಮಾಡಲಿದ್ದಾನೆ. 10,000 ಟನ್ ಹಡಗಿನಲ್ಲಿ ದೀರ್ಘ-ಶ್ರೇಣಿಯ ರಾಡಾರ್ಗಳು, ಸುಧಾರಿತ ಎಲೆಕ್ಟ್ರಾನಿಕ್ಸ್ ಇದೆ.

ಧ್ರುವ ಭಾರತದ ಮೊದಲ ನೌಕಾ ಹಡಗು ಆಗಿದ್ದು, ಪರಮಾಣು ಕ್ಷಿಪಣಿಗಳನ್ನು ದೀರ್ಘ ವ್ಯಾಪ್ತಿಯಲ್ಲಿ ಟ್ರ್ಯಾಕ್ ಮಾಡುವ ಸಾಮರ್ಥ್ಯ ಹೊಂದಿದ್ದಾನೆ. ಪಾಕಿಸ್ತಾನ ಮತ್ತು ಚೀನ ಏನಾದ್ರು ಬ್ಯಾಲಿಸ್ಟಿಕ್ ಕ್ಷಿಪಣಿಗಳ ದಾಳಿಯ ನಡೆಸುವ ಪ್ಲಾನ್ ಹಾಕ್ಕೊಂಡ್ರೆ, ಈ ಕುರಿತು ದಾಳಿ ನಡೆಯುವ ಮೊದಲೇ ಈ ಧ್ರುವ ನೌಕಾ ಪಡೆಯನ್ನ ಎಚ್ಚರಿಸಲಿದ್ದಾನೆ.

ವೈರಿಗಳ ರಾಡರ್ ಸಿಗ್ನಲ್​ಗಳ ಮೇಲೂ ಈ ವೀರ ನಿಗಾ ಇಡಲಿದ್ದು, ವೈರಿಗಳು ಯಾವುದೇ ಕ್ಷಿಪಣೆ ದಾಳಿ ಸಿದ್ಧತೆಯಲ್ಲಿದ್ರು, ಅದ್ರ ಮುನ್ಸೂಚನೆಯನ್ನ ಮೊದಲೇ ಇವನು ಬಲ್ಲವನಾಗಿದ್ದಾನೆ. ಸಾಗರದಲ್ಲಿ ವೈರಿಗಳು ಅದ್ಯಾವ ಜಲದಡಿಯಲ್ಲಿ ಕೂತು ಪ್ಲಾನ್ ಮಾಡಿದ್ರೂ ಕೂಡ, ಅವರ ಮೇಲೂ ಕೂಡ ಐಎನ್​ಎಸ್ ಧ್ರುವ ಹದ್ದಿನ ಕಣ್ಣಿಡಲಿದ್ದಾನೆ.

ಕಡಲ ತಡಿಯಲ್ಲಿ ಶತ್ರು ರಾಡರ್​ ಸಿಗ್ನಲ್​ಗಳ ಮೇಲೆ ನಿಗಾ ಇಡುವ ಈತ, ಸ್ಪೈ ಸ್ಯಾಟ್​ಲೈಟ್​ ಗಳ ಕಳ್ಳ ಕಣ್ಣನ್ನ ಛೇದಿಸುವ ಸಾಮರ್ಥ್ಯ ಹೊಂದಿದ್ದಾನೆ. ವೈರಿಗಳು ಜಲಂತಗಾರ್ಮಿ ಡ್ರೋನ್​ ದಾಳಿಗಳನ್ನ ನಡೆಸಿದ್ರೆ, ಆ ದಾಳಿಗೆ ತಡೆವೊಡ್ಡುವ ಸಾಮರ್ಥ್ಯ ಐಎನ್​ಎಸ್​ ಧ್ರುವ​ ಗಿದೆ.

ಇಂಡೋ ಫೆಸಿಫಿಕ್ ಸೀಮೆಯಲ್ಲಿ ಧ್ರುವ ನಿಯೋಜನೆ

ನೆರೆ ರಾಷ್ಟ್ರಗಳೊಂದಿಗೆ ಸದಾ ಸಂಘರ್ಷವನ್ನೇ ನೆಚ್ಚಿಕೊಂಡಿರುವ ಚೀನಾದ ಉಪಟಳ ಕೂಡ ಸಾಗರದಲ್ಲಿ ಹೆಚ್ಚುತ್ತಿದೆ. ಅದ್ರರಲ್ಲೂ ದಕ್ಷಿಣಾ ಚೀನಾ ಸಮುದ್ರದಲ್ಲಿ ಚೀನಾ ಒಂದಿಲ್ಲೊಂದು ತಗಾದೆ ತೆಗೆಯುತ್ತಲೇ ಇದೆ. ಒಂದು ಕಡೆ ನರಿ ಬುದ್ದಿಯ ಚೀನಾ ಇದ್ರೆ, ಮತ್ತೊಂದು ಕಡೆಯಲ್ಲಿ ಕುತಂತ್ರಿ ಪಾಕಿಸ್ತಾನ ಕೂಡ ಇದೆ.. ಭಾರತದ ಹೆಸರು ಕೇಳಿದ್ರೆ ಹಾವು ಮೆಟ್ಟಿದ್ದಂಗೆ ಹೌಹಾರುವ ಭಯೋತ್ಪಾದಕರು ಕೂಡ ಇದೀಗ ಸಮುದ್ರ ಮಾರ್ಗದ ಮೂಲಕವೇ ಪ್ರಯಾಣ ನಡೆಸುತ್ತಿದ್ದಾರೆ. ಅಲ್ಲದೆ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಹೆಚ್ಚುತ್ತಿರುವ ಪರಮಾಣು ಬ್ಯಾಲಿಸ್ಟಿಕ್ ಯುದ್ಧದ ಬೆದರಿಕೆ ಕೂಡ ಹೆಚ್ಚಾಗ್ತಿದೆ.

ಇತ್ತೀಚಿಗಷ್ಟೇ ಶ್ರೀ ಲಂಕಾದಿಂದ ಉಗ್ರರು ಇದೇ ಸಮುದ್ರ ಮಾರ್ಗದ ಮೂಲಕ ಭಾರತಕ್ಕೆ ನುಸುಳಿರುವ ಶಂಕೆ ವ್ಯಕ್ತವಾಗಿತ್ತು. ನೆರೆ ರಾಷ್ಟ್ರಗಳಾದ ಅಫ್ಘಾನ್, ಪಾಕಿಸ್ತಾನದಲ್ಲಿ ಉಗ್ರ ಚಟುವಟಿಕೆಗಳು ಹೆಚ್ಚಾಗುತ್ತಿದೆ. ಇಂತಹ ಸಮಯದಲ್ಲಿ ಭಾರತೀಯ ನೌಕಾಪಡೆಗೆ ಧ್ರುವ ಸೇರ್ಪಡೆಗೊಂಡರೆ, ನೌಕಾ ಪಡೆಗೂ ಕೂಡ ಆನೆ ಬಲ ಬಂದಂತಾಗುತ್ತದೆ.

ಮೂರೂ ಕಡೆಯಲ್ಲಿ ಸಾಗರವೇ ನಮ್ಮನ್ನ ಸುತ್ತುವರೆದ್ರೂ ಕೂಡ ನಮಗೆ ಭದ್ರತೆ ಒದಗಿಸುವ ನೌಕಾಪಡೆಯನ್ನು ಎಷ್ಟು ಶ್ಲಾಘಿಸಿದರೂ ಕಡಿಮೆಯೇ. ಬರೀ ರಕ್ಷಣೆ ಅಲ್ಲ, ದೇಶದ ಎಲ್ಲೇ ನೆರೆ ಹಾವಳಿಯಾಗಲಿ, ಅಲ್ಲೆಲ್ಲ ಭಾರತೀಯ ನೌಕಾಪಡೆ ಆಗಮಿಸಿ ಅಮೋಘ ಸೇವೆ ಒದಗಿಸಿದೆ. ಜನರಿಗೆ ಭದ್ರತೆ ನೀಡಿದೆ. ವಿದೇಶದಿಂದ ಆಮದಾಗುವ ಸರಕಿನಲ್ಲೂ ನೌಕಾಪಡೆಯ ಪಾತ್ರವಿದೆ. ಇದೀಗ ಇದೇ ನಾಕಾ ಪಡೆಗೆ ಮತ್ತೊಬ್ಬ ಬೀರ ಸೇರ್ಪಡೆಯಾದ್ರೆ, ನೌಕಾ ಪಡೆಯು ಮತ್ತಷ್ಟು ಬಲಿಷ್ಠವಾಗಲಿದ್ದಾನೆ.

2008ರ ಮುಂಬೈ ದಾಳಿ ಬಳಿಕ ಸಮುದ್ರ ಗಡಿಯಲ್ಲಿ ಫುಲ್​ ಅಲರ್ಟ್​

ದೇಶಕ್ಕೆ ದೇಶವೇ ಬೆಚ್ಚಿ ಬಿದ್ದಿದ್ದ ಮುಂಬೈ ತಾಜ್​ ಹೋಟೆಲ್ ದಾಳಿಯ ಪ್ರಮುಖ ಉಗ್ರ, ಅಜ್ಮಲ್ ಕಸಬ್ ಕೂಡ ಮಂಬೈ ಕರಾವಳಿಯ ಮೂಲಕವೇ ಎಂಟ್ರಿ ಕೊಟ್ಟಿದ್ದ. ಈ ಘಟನೆಯು ಭಾರತಕ್ಕೆ ಹಲವು ಪಾಠಗಳನ್ನ ಕಳಿಸಿತ್ತು. ಈ ಘಟನೆಯ ನಂತರ ಭಾರತದ ಎಲ್ಲಾ ಗಡಿಗಳನ್ನ ಕೂಡ ನೌಕಾ ಪಡೆ ಭದ್ರಗೊಳಿಸಿತ್ತು. ಸಮುದ್ರಗಡಿಗಳನ್ನು ಭದ್ರಗೊಳಿಸಿರುವ ನೌಕಾಪಡೆ, 10 ವರ್ಷಗಳಲ್ಲಿ ಕಡಲತೀರದ ಸುರಕ್ಷೆಯಲ್ಲೂ ಅಸಾಧಾರಣ ಸುಧಾರಣೆ ಕೂಡ ತಂದಿದೆ. ಸಾಗರದ ಮೂಲಕ ಎದುರಾಗುವ ಎಲ್ಲಾ ರೀತಿಯ ಸವಾಲುಗಳನ್ನ ಎದುರಿಸಲು ಕೂಡ ಭಾರತೀಯ ನೌಕಾ ಪಡೆ ಸನ್ನದ್ದವಾಗಿದೆ.

ಹೊಸ ಯುದ್ಧನೌಕೆಗಳ ಖರೀದಿಗೆ ರಕ್ಷಣಾ ಇಲಾಖೆ ಸಮ್ಮತಿಸಿದ್ದು, ಈ ಮೂಲಕ ನೌಕಾಪಡೆ ಹೊಸಬಲ ಪಡೆದುಕೊಳ್ಳುತ್ತಿದೆ. ಇದು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಹೆಚ್ಚುತ್ತಿರುವ ಪರಮಾಣು ಬ್ಯಾಲಿಸ್ಟಿಕ್ ಯುದ್ಧದ ಬೆದರಿಕೆಯೊಂದಿಗೆ ವಿಶೇಷ ಮಹತ್ವವನ್ನು ಪಡೆದುಕೊಂಡಿದೆ. ಈ ನಡುವೆ ತೇಲುವ ಕ್ಷಿಪಣಿ ಕೂಡ ಪ್ರಯೋಗಕ್ಕೆ ಮುಂದಾಗಿರುವುದರಿಂದ ಭಾರತ ನೌಕಾ ಪಡೆ ಮತ್ತಷ್ಟು ಪ್ರಬಲವಾಗಲಿದೆ.

ಭಾರತದ ಮೊದಲ ತೇಲುವ ಕ್ಷಿಪಣಿ ಪರೀಕ್ಷಾ ಪ್ರಯೋಗ

ಭಾರತದ ಮೊದಲ ತೇಲುವ ಕ್ಷಿಪಣಿ ಪರೀಕ್ಷಾ ಶ್ರೇಣಿಯಾದ ಅನ್ವೇಶ್ ಸಮುದ್ರದಲ್ಲಿ ಇನ್ಮುಂದೆ ಶಿಖಾರಿ ನಡೆಸಲಿದ್ದಾನೆ. ಸಮುದ್ರದಲ್ಲಿ ಇದೇ ತಿಂಗಳು ಪ್ರಯೋಗ ನಡೆಸಲಿದ್ದು, ಮುಂದಿನ ದಿನಗಳಲ್ಲಿ ಭಾರತೀಯ ನೌಕಾ ಪಡೆ ಪರ ಅಖಾಡಕ್ಕೆ ಇಳಿಯಲಿದ್ದಾನೆ.

ಡಿಫೆನ್ಸ್ ರಿಸರ್ಚ್ ಮತ್ತು ಡೆವಲಪ್ಮೆಂಟ್ ಆರ್ಗನೈಸೇಶನ್ ವಿನ್ಯಾಸ ಮಾಡಿದ್ದು, ಕೊಚ್ಚಿನ್ ಶಿಪ್ ಯಾರ್ಡ್ ನಿರ್ಮಾಣ ಮಾಡಲಿದೆ. ಅನ್ವೇಶ್ ಮುಂದಿನ ಎರಡು ತಿಂಗಳಲ್ಲಿ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ. ತೇಲುವ ಕ್ಷಿಪಣೆ ಯಶಸ್ವಿಯಾದ್ರೆ, ಇವು ಕೂಡ ನೌಕಾ ಪಡೆಗೆ ಹೊಸ ಹುರುಪು ಮೂಡಿಸಲಿದೆ.

ವೈರಿಗಳು ಏನಾದ್ರೂ ಭಾರತದ ವಿರುದ್ಧ ಸಮುದ್ರದಲ್ಲಿ ಪ್ರಯೋಗಗಳನ್ನ ನಡೆಸಲು ಮುಂದಾದ್ರೆ, ದೂರದಿಂದಲೇ ಪತ್ತೆ ಮಾಡುವಂತಹ ಸಾಮರ್ಥ್ಯವನ್ನ ಈ ತೇಲುವ ಕ್ಷಿಪಣಿ ಹೊಂದಿದೆ. ಕೆಲವೇ ಕೆಲ ದೇಶಗಳು ಮಾತ್ರ ತೇಲುವ ಪರೀಕ್ಷಾ ಕ್ಷಿಪಣಿಗಳನ್ನ ಪರೀಕ್ಷೆಗೆ ಒಳಪಡಿಸಿದೆ.ಒಂದು ವೇಳೇ ಭಾರತವು ಕೂಡ ಯಶಸ್ವಿ ಪ್ರಯೋಗ ನಡೆಸಿದ್ರೆ ಮುಂದಿನ ದಿನಗಳಲ್ಲಿ ತೇಲುವ ಕ್ಷಿಪಣಿ ಕೂಡ ಶತ್ರುವಿನ ವಿರುದ್ಧ ಸಾಗರದಲ್ಲಿ ಹೊಸ ತಡೆಗೋಡೆ ನಿರ್ಮಿಸಲಿದ್ದಾನೆ.

ಭಾರತ ನೌಕಾಪಡೆಯಲ್ಲಿ ಇತ್ತೀಚಿಗಷ್ಟೇ ಸ್ವದೇಶೀ ನಿರ್ಮಿತ ನಿರ್ಮಿತ ಹೆಚ್ಚು ರಾರಾಜುತತ್ತಿವೆ. ಇತ್ತೀಚಿಗಷ್ಟೇ ಸ್ವದೇಶಿ ನಿರ್ಮಿತ ಐಎನ್​ ಎಸ್ ವಿಕ್ರಾಂತ್ ಕೂಡ ಸೇರ್ಪಡೆಯಾಗಿದ್ದ. ಇದೀಗ ಮತ್ತ್ತಿಬ್ಬರು ನೌಕಾ ಪಡೆ ಸೇರಲು ತುದಿಗಾಳಲ್ಲಿ ನಿಂತ್ತಿರೋದ್ರಿಂದ ನೌಕಾ ಪಡೆಯ ಬಲ ಇಮ್ಮಡಿಯಾಗಲಿದೆ.

ಒಟ್ಟಿನಲ್ಲಿ ದಿನದಿಂದ ದಿನಕ್ಕೆ ನೌಕಾ ಪಡೆ ಬಲಿಷ್ಟವಾಗ್ತಿದೆ.. ಅದ್ರಲಲ್ಲೂ ಸ್ವದೇಶಿ ನಿರ್ಮಿತ ವಸ್ತುಗಳೇ ನೌಕಾ ಪಡೆಗೆ ಬಲಿಷ್ಠತೆಯನ್ನ ತುಂಬುತ್ತಿರುವುದು ಮತ್ತುಷ್ಟು ಸಂತೋಷವನ್ನ ಉಂಟು ಮಾಡಿದೆ..ಆದಷ್ಟು ಬೇಗ ಈ ಶೂರರು ಭಾರತದ ನೌಕಾ ಪಡೆಯನ್ನ ಸೇರುವಂತಾಗಲಿ. ಸಾಗರದಲ್ಲಿ ಶತ್ರುವಿನ ವಿರುದ್ಧ ತಡೆ ಗೋಡೆ ನಿರ್ಮಿಸಿ ದೇಶಕ್ಕೆ ಸರ್ಪಗಾವಲು ಹಾಕಿ ರಕ್ಷಣೇ ನೀಡ್ತಿರುವ ನೌಕಾ ಪಡೆಗೆ ಮತ್ತಷ್ಟು ಬಲ ತುಂಬಲಿ ಅನ್ನೋದೆ ಎಲ್ಲರ ಆಶಯ. ಐಎನ್ಎಸ್​ ಧ್ರುವನ ಆಗಮನಕ್ಕೆ ಇಡೀ ನೌಕಾ ಪಡೆಯೇ ಕಾಯುತ್ತಿದೆ. ಅದ್ಯಾವಗ ಈ ಶೂರ ಸಮದ್ರ ಶಿಖಾರಿ ನಡೆಸುತ್ತಾನೋ ಗೊತ್ತಿಲ್ಲ. ಆದಷ್ಟು ಬೇಗ ಆ ಕಾಲ ಸನ್ನಿಹಿತವಾಗಲಿ..

Source: newsfirstlive.com Source link