ಪ್ರಯಾಣಿಕರಿಗೆ ಗುಡ್​​ ನ್ಯೂಸ್​​; ‘BMTC ಟಿಕೆಟ್​​​ ದರ ಏರಿಕೆ ಮಾತೇ ಇಲ್ಲ’ ಎಂದ ಸಚಿವ ಶ್ರೀರಾಮುಲು

ಪ್ರಯಾಣಿಕರಿಗೆ ಗುಡ್​​ ನ್ಯೂಸ್​​; ‘BMTC ಟಿಕೆಟ್​​​ ದರ ಏರಿಕೆ ಮಾತೇ ಇಲ್ಲ’ ಎಂದ ಸಚಿವ ಶ್ರೀರಾಮುಲು

ಬೆಂಗಳೂರು: ಕೊರೋನಾ ಹಾವಳಿ ಮತ್ತೆ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದ ರಾಜ್ಯದ ಜನತೆಗೆ ಸರ್ಕಾರ ಸಿಹಿಸುದ್ದಿ ನೀಡಿದೆ. ಯಾವುದೇ ಕಾರಣಕ್ಕೂ ಬಿಎಂಟಿಸಿ ಬಸ್ ಪ್ರಯಾಣ ದರ ಹೆಚ್ಚಿಸಲ್ಲ ಎಂದು ಖುದ್ದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳುವ ಮೂಲಕ ಪ್ರಯಾಣಿಕರಿಗೆ ಗುಡ್​​ ನ್ಯೂಸ್​​ ಕೊಟ್ಟಿದ್ದಾರೆ.

ಸಾರಿಗೆ ನೌಕರರ ಮುಷ್ಕರ ಮತ್ತು ಪೆಟ್ರೋಲ್​​-ಡೀಸೆಲ್​​ ಬೆಲೆ ಹೆಚ್ಚಳದಿಂದ ಬಿಎಂಟಿಸಿ ಆರ್ಥಿಕ ಸಂಕಷ್ಟದಲ್ಲಿದೆ. ಹೀಗಾಗಿ ಪ್ರಯಾಣ ದರ ಏರಿಕೆಗೆ ಬಿಎಂಟಿಸಿ ಸರ್ಕಾರದ ಮುಂದೆ ಪ್ರಸ್ತಾವನೆಯನ್ನು ಇಟ್ಟಿತ್ತು. ಈ ಪ್ರಸ್ತಾವಣೆಯನ್ನು ತಳ್ಳಿಹಾಕಿರುವ ಸಾರಿಗೆ ಸಚಿವ ಬಿ. ಶ್ರೀರಾಮುಲು, ಸಿಎಂ ಬಸವರಾಜ್​​ ಬೊಮ್ಮಾಯಿ ಅವರೇ ದರ ಹೆಚ್ಚಳ ಬೇಡ ಎಂದಿದ್ದಾರೆ ಅಂತಾ ಹೇಳಿದ್ದಾರೆ.

ಬಿಎಂಟಿಸಿ ಟಿಕೆಟ್​​ ದರ ಹೆಚ್ಚಳಕ್ಕೆ ಒಪ್ಪೋ ಪ್ರಶ್ನೆಯೇ ಇಲ್ಲ. ಸರ್ಕಾರಕ್ಕೆ ಎಷ್ಟೇ ಹೊರೆಯಾದ್ರೂ ಪರವಾಗಿಲ್ಲ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಜನರ ಮೇಲೆ ಹೊರೆ ಹಾಕುವುದಿಲ್ಲ. ನಿಗಮದ ಆರ್ಥಿಕ ಪುನಚೇತನಕ್ಕೆ ಬೇರೆ ಮೂಲಗಳಿಂದ ಹಣ ಒದಗಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ: ಆರೋಗ್ಯ ಸಚಿವ ಬಿ. ಶ್ರೀರಾಮುಲು ಸಭೆ ಯಶಸ್ವಿ; ಮುಷ್ಕರ ಕೈಬಿಡ್ತಾರಾ ಆಯುಷ್​​​​​ ವೈದ್ಯರು?

Source: newsfirstlive.com Source link