9/11 ವರ್ಷದ ಕಹಿ ನೆನಪು; 2 ದಶಕದ ಬಳಿಕವೂ ಸೋತಿದ್ಯಾಕೆ ಅಮೆರಿಕಾ?

9/11 ವರ್ಷದ ಕಹಿ ನೆನಪು; 2 ದಶಕದ ಬಳಿಕವೂ ಸೋತಿದ್ಯಾಕೆ ಅಮೆರಿಕಾ?

ಮೋಸ್ಟ್​ ಪವರ್​ ಫುಲ್ ಅಂತ ಬೀಗುತ್ತಿದ್ದ ಅಮೆರಿಕಾ ಯಾರೂ ಊಹಿಸಿದಂಥ ದೈನೇಸಿ ಸ್ಥಿತಿಗೆ ತಲುಪಿ ಬಿಟ್ಟಿದೆ. ತನ್ನವರನ್ನೇ ಕೊಂದ ಉಗ್ರರರಿಗೆ ಶರಣಾಗಿ.. ಎಸ್ಕೇಪ್ ಆಗಲು ಅವಕಾಶ ಕೊಟ್ಟ ಉಗ್ರರು ಪ್ರೊಫೆಷನಲ್ಸ್ ಅಂತಾ ಕರೆಯುವಂಥ ಮಟ್ಟಕ್ಕೆ ಇಳಿದು ಬಿಟ್ಟಿದೆ.. ಬರೋಬ್ಬರಿ 20 ವರ್ಷದ ಹೋರಾಟದಲ್ಲಿ ಅಮೆರಿಕಾ ಸೋತಿದ್ದು ಯಾಕೆ?

blank

ಅದೇನು ಮುಖದಲ್ಲಿ ಸಂಭ್ರಮ.. ಯುದ್ಧ ಗೆದ್ದ ಖುಷಿ.. ಕೈಯಲ್ಲಿರೋದು ಟೀಯಲ್ಲ ಬದಲಿಗೆ.. ಅಮೇರಿಕನ್ನರ ಅಹಂಕಾರ ಬಸಿದು ಜ್ಯೂಸ್ ಅನ್ನೋವಷ್ಟರ ಮಟ್ಟಿಗೆ ಪೋಸ್​​.. ಅಂದಹಾಗೆ ಈ ಫೋಟೋದಲ್ಲಿರೋವಾತ ಅಧಿಕೃತವಾಗಿ ಯಾವುದೇ ಉಗ್ರನಲ್ಲ.. ತಾಲಿಬಾನಿಯಲ್ಲ.. ಅಲ್​ಖೈದಾ ಸಂಘಟನೆಯವನಲ್ಲ.. ಇಂಡಿಯನ್​ ಮುಜಾಹಿದೀನ್ ಅಲ್ಲ.. ಹಕ್ಕಾನಿ ನೆಟವರ್ಕ್​​ನ ಸಿರಾಜುದ್ದೀನ್ ಹಕ್ಕಾನಿಯಲ್ಲ.. ಲಷ್ಕರ್ ಏ ತೊಯ್ಬಾದ ಉಗ್ರನಲ್ಲ.. ಇರಾಕ್​​ನ ಐಸಿಸ್​​​ ಉಗ್ರನಲ್ಲ.. ಮೇಡ್​ ಇನ್  ಅಫ್ಘಾನಿಸ್ತಾನ ಐಸಿಸ್​​-ಕೆ ಸದಸ್ಯನೂ ಅಲ್ಲ.. ಬದಲಿಗೆ ಈ ಎಲ್ಲ ಸಂಘಟನೆಗಳಿಗೂ ಬೆನ್ನೆಲುಬಾದ ಆರೋಪ ಹೊತ್ತಿರೋ ಪಾಕಿಸ್ತಾನದ ಇಂಟರ್​ ಸರ್ವೀಸ್ ಇಂಟೆಲಿಜೆನ್ಸ್​ ಅಲಿಯಾಸ್ ಐಎಸ್​​ಐನ  Director-General ಆಗಿರುವ ಲೆಫ್ಟಿನೆಂಟ್ ಜನರಲ್ ಫೈಜ್ ಅಹಮದ್..! ಯೆಸ್​​.. ಅಮೆರಿಕಾದ ಹಣೆ ಮೇಲೆ ಸೋತು ಶರಣಾದವ ಅಂತಾ ತಾಲಿಬಾನಿಗಳು ಬರೆಯಲು ಪೆನ್ನು.. ಇಂಕು ಕೊಟ್ಟ ದೇಶದಾತ..!

ತಿನ್ನೋಕೆ ಅನ್ನದ ಗತಿಯೂ ಇಲ್ಲದ ದೇಶ ಹೀಗೆ ಮಾಡುತ್ತಾ?

blank

ಅರೆ ಇದೇನಿದು? ತಿನ್ನೋಕೆ ಅನ್ನದ ಗತಿಯೂ ಇಲ್ಲದ.. ಇನ್ನೊಂದು ದೇಶದ ಮುಂದೆ ಕೈವೊಡ್ಡಿ ಬೇಡುವುದನ್ನೇ ಕಾಯಕ ಮಾಡಿಕೊಂಡಿರೋ ಪಾಕಿಸ್ತಾನ, ಅಮೆರಿಕಾ ಸೋಲಿಗೆ ಹೇಗೆ ಕಾರಣವಾಗುತ್ತೆ? ಎಲ್ಲಿಯ ಅಮೆರಿಕಾ? ಎಲ್ಲಿಯ ಪಾಕಿಸ್ತಾನ? ಅನ್ನೋ ಪ್ರಶ್ನೆ ಸಹಜವಾಗಿ ಮೂಡುತ್ತೆ.. ಆದ್ರೆ ಧರ್ಮಾಂಧತೆಯ ಅಫೀಮನ್ನೇ ಬೆಳಗ್ಗೆ ಬ್ರೇಕ್​ಫಾಸ್ಟ್​​​ ಆಗಿ, ಮಧ್ಯಾಹ್ನ ಊಟವಾಗಿ, ರಾತ್ರಿ ಡಿನ್ನರ್ ಆಗಿ ತಿನ್ನೋ ಪಾಕಿಸ್ತಾನದಂಥ ದೇಶವನ್ನ ನಂಬಿದವರಿಗೆ ಏನೆಲ್ಲ ಮಾಡಬಹುದು? ಅನ್ನೋದಕ್ಕೆ ಉಗ್ರರೊಂದಿಗಿನ ಯುದ್ಧದಲ್ಲಿ ಅಮೆರಿಕಾ ಸೋತಿದ್ದೇಕೆ? ಅನ್ನೋದಕ್ಕೆ ಉತ್ತರವಾಗಿ ಸಿಗ್ತಿದೆ.. ಅದು ಹೇಗೆ ಅಂತೀರಾ?

ಇಂದಿನ ಅಮೆರಿಕಾ ಸೋಲಿನ ಕಾರಣ ಹುಡುಕುವುದಕ್ಕಿಂತ ಮುನ್ನ.. ಇದು ಶುರುವಾದ ಘಟನೆಯತ್ತ ಒಂದು ಕ್ಷಣ ಬೆಳಕು ಚೆಲ್ಲಬೇಕು.. ಯೆಸ್.. ಅಂದು 2001ರ ಸೆಪ್ಟಂಬರ್ 11 ನೇ ತಾರೀಖು.. ಸರಿಯಾಗಿ 20 ವರ್ಷದ ಹಿಂದೆ.. ಎಂದಿನಂತೆ ಅಮೆರಿಕಾ ಸಖತ್ ಬ್ಯೂಸಿಯಾಗಿ ಓಡುತ್ತಿತ್ತು.. ಕಚೇರಿಗಳಲ್ಲಿ ಭರದಿಂದ ಕೆಲಸ ಸಾಗುಗ್ತಿತ್ತು.. ಭವ್ಯ ಭವಿತವ್ಯದ ಕನಸು ಕಾಣುವ ಲಕ್ಷಾಂತರ ಜನ ಈ ಡ್ರೀಮ್​ ಲ್ಯಾಂಡ್​​​ನಲ್ಲಿ ಲ್ಯಾಂಡ್​ ಆಗುತ್ತಲೆ ಇತ್ತು.. ಇಂಥ ಅವಕಾಶದ ಸಾಗರದಂತಿದ್ದ ಅಮೆರಿಕಾಕ್ಕೆ ಅಂದು ಬರಸಿಡಿಲೇ ಬಂದು ಅಪ್ಪಳಿಸಿತ್ತು.. ಒಸಾಮಾ ಬಿನ್ ಲಾಡೆನ್​​ನ ಅಲ್​ಖೈದಾ ಉಗ್ರ ಸಂಘಟನೆ ಅತಿ ದೊಡ್ಡ ಮರ್ಮಾಘಾತ ನೀಡಿತ್ತು.. ಅಮೆರಿಕಾದ ಹೆಮ್ಮೆಯ ಪ್ರತೀಕವಾಗಿದ್ದ ಟ್ವಿಟನ್ ಟವರ್ಸ್​​​ಗೆ ಹೈಜಾಕ್ ಆಗಿದ್ದ ವಿಮಾನವನ್ನ ಡಿಕ್ಕಿ ಹೊಡೆಸಿ ಕೆಡವಲಾಗಿತ್ತು.. ಈ ಉಗ್ರರ ದಾಳಿಯಲ್ಲಿ ಸುಮಾರು 2600 ಅಮಾಯಕರು ಸಾವನ್ನಪ್ಪಿದ್ದರೆ, ಸಾವಿರಾರು ಮಂದಿ ಗಾಯಗೊಂಡಿದ್ದರು.. ಅವತ್ತೆ ಶುರುವಾಗಿತ್ತು ಅಮೆರಿಕಾದ ಯುದ್ಧ.. ಇಡೀ ಮನು ಕುಲದ ಇತಿಹಾಸವನ್ನೇ ಬದಲಿಸಲಾಗುವುದು ಅಂತಾ ಸಾರಿದ್ದ ಯುದ್ಧ.. ಉಗ್ರರನ್ನ ಬೇರು ಸಮೇತ ಕಿತ್ತು ಹಾಕುವ ಸಂಕಲ್ಪದ ಯುದ್ಧ.. ಉಗ್ರರಿಗೆ ಸಹಾಯ ಮಾಡುವ ದೇಶಗಳನ್ನ.. ವ್ಯಕ್ತಿಗಳನ್ನ ಮಟ್ಟ ಹಾಕ್ತೀವಿ ಅಂತಾ ಸಾರಿದ್ದ ಯುದ್ಧ..!

ಸೆಪ್ಟಂಬರ್ 20, 2001 ರಂದು ಅಮೆರಿಕಾದ ಅಂದಿನ ಅಧ್ಯಕ್ಷ ಜಾರ್ಜ್ ಡಬ್ಲೂ ಬುಷ್ ಒಂದು ಅತ್ಯಂತ ಜನಪ್ರಿಯ ಭಾಷಣ ಮಾಡಿದ್ರು.. ಭಯೋತ್ಪಾದನೆಯನ್ನ ಬೇರು ಸಮೇತು ಕಿತ್ತು ಹಾಕುವುದಾಗಿ ಇಡೀ ವಿಶ್ವದ ಮುಂದೆ ಘೋಷಿಸಿದ್ರು.. ಉಗ್ರರಿಂಗೆ ಆಶ್ರಯ ನೀಡುವ ದೇಶಗಳನ್ನೂ ಬಿಡಲ್ಲ ಎಂದು ಗುಡುಗಿದ್ದು ಪ್ರತಿಯೊಬ್ಬ ಅಮೆರಿಕನ್ನರ ಧ್ವನಿಯಾಗಿತ್ತು.. ಆದ್ರೆ ಆಗಿದ್ದೇನು?!

 

blankನಾವು ಉಗ್ರರರಿಗೆ ಹಣಕಾಸು ನೆರವು ಸಿಗದಂತೆ ಮಾಡುತ್ತೇವೆ..ಒಬ್ಬರನ್ನ ಇನ್ನೊಬ್ಬರ ವಿರುದ್ಧ ಎತ್ತಿ ಕಟ್ಟುತ್ತೇವೆ.. ಮೂಲೆ ಮೂಲೆಯಲ್ಲಿದ್ದರೂ ಶಿಕ್ಷಿಸುತ್ತೇವೆ.. ಅಲ್ಲಿ ಯಾರೂ ಸಂತ್ರಸ್ತರಿಲ್ಲ.. ರೆಸ್ಟ್ ಅಂತೂ ಇಲ್ಲವೇ ಇಲ್ಲ.. ಉಗ್ರವಾದಿಗಳಿಗೆ ಸೇಫ್ ಹೆವನ್ ಆಗಿರುವ, ಆಶ್ರಯ ನೀಡುವ ದೇಶಗಳ ಮೇಲೆ ಒತ್ತಡ ಹಾಕುತ್ತೇವೆ.. ಪ್ರಪಂಚದ ಎಲ್ಲ ಭಾಗ.. ಎಲ್ಲ ದೇಶಗಳು ಈಗ ಒಂದು ನಿರ್ಧಾರವನ್ನ ಮಾಡಲೇಬೇಕು.. ಒಂದು ನೀವು ನಮ್ಮೊಂದಿಗೆ.. ಇಲ್ಲ ಅಂದರೆ ಉಗ್ರರೊಂದಿಗೆ ಇದ್ದಂತೆ

– ಜಾರ್ಜ್ ಡಬ್ಲೂ ಬುಷ್, ಅಮೆರಿಕಾದ ಅಂದಿನ ಅಧ್ಯಕ್ಷ  

 

ಕೇಳಿದ್ರಲ್ಲ.. ಈ ಭಾಷಣದಲ್ಲಿ ಅವರು ಏನೆಲ್ಲ ಹೇಳಿದ್ರು.. ಏನೆಲ್ಲ ಘೋಷಿಸಿದ್ರು ಅಂತಾ.. ಆದ್ರೆ ಇಷ್ಟೆಲ್ಲ ಘೋಷಿಸಿದ್ದ ಅಮೆರಿಕಾ 20 ವರ್ಷದಲ್ಲಿ ಮಾಡಿದ್ದೇನು? ಅದರ ಇಮೇಜ್​​ ಮಣ್ಣುಪಾಲು ಆಗಿದ್ದು ಯಾಕೆ? .. ಉಗ್ರವಾದಿಗಳಿಗೆ ಸೇಫ್ ಹೆವನ್ ಆಗಿರುವ, ಆಶ್ರಯ ನೀಡುವ ದೇಶಗಳನ್ನ ಬಿಡಲ್ಲ ಎಂದು ಘೋಷಿಸಿದ್ದ ಅಮೆರಿಕಾ.. ತಮಗೆ ಸಹಾಯ ಮಾಡಿದ್ದವರನ್ನೇ ಅತಂತ್ರರನ್ನಾಗಿಸಿ ಅಫ್ಘಾನಿಸ್ತಾನದಿಂದ ಎಸ್ಕೇಪ್ ಆಗಿಬಿಟ್ಟಿತ್ತು..  ಯಾವ ಅಲ್​ಖೈದಾಕ್ಕೆ ಆಶ್ರಯ ನೀಡಿತ್ತೋ ಅಂಥ ತಾಲಿಬಾನಿಗಳಿಗೆ ತಲೆ ಬಾಗಿಸಿದ ಅಮೆರಿಕಾ.. ಅಫ್ಘಾನಿಸ್ತಾನದಿಂದ ಕಾಲ್ಕಿತ್ತಿದ್ದು ಯಾಕೆ?

ಈ ಪ್ರಶ್ನೆಗಳು ಸತತವಾಗಿ ಹಲವರಿಗೆ ಇನ್ನೂ ಕಾಡುತ್ತಲೇ ಇದೆ.. ನಿರಂತರವಾಗಿ ಉಗ್ರವಾದಿಗಳಲ್ಲಿ ಗುಡ್ ಮತ್ತು ಬ್ಯಾಡ್ ಅನ್ನೋದು ಇರಲ್ಲ ಅಂತ ಭಾರತ ಹೇಳುತ್ತಲೇ ಇದ್ದರೂ ಕೇಳದ ಅಮೆರಿಕಾ, ಇಂದು ಪಾಕಿಸ್ತಾನ ತೋಡಿದ ಗುಂಡಿಗೆ ಕಣ್ಣು ಮುಚ್ಚಿಕೋಂಡು ಹೋಗಿ ಹಾಡಹಗಲೇ ಬಿದ್ದು ಬಿಟ್ಟಿದೆಯಾ? ಅನ್ನೋ ಪ್ರಶ್ನೆ ಎದ್ದಿದೆ..

ಹೌದು.. ಉಗ್ರರರನ್ನ ಹೊಡೆದು ಹಾಕಿದ್ರೆ ಭಯೋತ್ಪಾದನೆ ನಿರ್ಮೂಲನವಾಗಲ್ಲ.. ಬದಲಿ ಟೆರರಿಸ್ಟ್ ಐಡಿಯಾ ಲಜಿಯನ್ನ ನಿರ್ಮೂಲನೆ ಮಾಡಬೇಕಾಗುತ್ತದೆ.. ಅಷ್ಟೇ ಅಲ್ಲ ಉಗ್ರರಿಗೆ ಹಣಕಾಸು ಒದಗಿಸುವ, ಟ್ರೇನಿಂಗ್ ನೀಡುವ, ಆಶ್ರಯ ನೀಡುವ, ಬೆಳೆಸುವ, ಬಲ ಪಡಿಸುವ ದೇಶಗಳನ್ನ ಕಟ್ಟಿ ಹಾಕಬೇಕಾಗುತ್ತದೆ.. ಆದ್ರೆ ಆಗಿದ್ದೇನು?

blank

ಒಂದು ಕಡೆ ನೋಡಿದ್ರೆ ಅಮೆರಿಕಾ ಅಫ್ಘಾನಿಸ್ತಾನಕ್ಕೆ ಕಾಲಿಡುತ್ತಿದ್ದಂತೆಯೇ ತಾಲಿಬಾನ್ ಅಲ್ಲಿಂದ ಕಾಲ್ಕೀಳುತ್ತದೆ.. ಅದಕ್ಕೆ ಪಾಕಿಸ್ತಾನ ಆಶ್ರಯ ನೀಡಿದ್ದು ಇಂದು ಬಹಿರಂಗ ಸತ್ಯವಾಗಿದೆ.. ಆದ್ರೆ ಆ ಬಗ್ಗೆ ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಅಮೆರಿಕಾಕ್ಕೆ, ಹೇಳಿದ್ರೂ ಅದಕ್ಕೆ ಅರ್ಥವಾಗದೇ ಸಾವಿರಾರು ಕೋಟಿ ಹಣ ನೀಡಿತ್ತು ಪಾಕಿಸ್ತಾನದ ಬೆನ್ನಿಗೆ ನಿಲ್ಲುತ್ತದೆ..

ಅಫ್ಘಾನಿಸ್ತಾನದ ಗುಡ್ಡಗಳ ಮೇಲೆ ಬಾಂಬುಗಳನ್ನು ಹಾಕುತ್ತಾ ಉಗ್ರರನ್ನು ಇಲ್ಲವಾಗಿಸಿದ್ದೀವಿ ಎಂದು ಬೀಗುತ್ತಿದ್ದ ಅಮೆರಿಕಾಕ್ಕೆ ಅದರ ಅಹಂಕಾರವೇ ಕಣ್ಣಿಗೆ ಪಟ್ಟಿ ಕಟ್ಟಿ ಬಿಟ್ಟಿರುತ್ತೆ.. ಲಾಡೆನ್ ಕೂಡ ನಮ್ಮ ದಾಳಿಯಲ್ಲಿ ಸತ್ತಿದ್ದಾನೆ ಎಂದೇ ಅಮೆರಿಕಾ ನಂಬಿಕೊಂಡಿರುತ್ತೆ.. ಆದ್ರೆ ಯಾವಾಗ 20011ರಲ್ಲಿ ಪಾಕಿಸ್ತಾನದ ಪ್ರಮುಖ ನಗರ, ಮಿಲಿಟರಿ ಭದ್ರ ಕೋಟೆ ಬಾಲಾ ಕೋಟ್​​ನಲ್ಲಿಯೇ ಉಗ್ರ ಲಾಡೆನ್​​ ಸಿಕ್ಕನೋ.. ಅಮೆರಿಕನ್ನರೇ ಅವನನ್ನು ಹೊಡೆದು ಹಾಕಿದರೋ.. ಆಗ ಇಡೀ ಜಗತ್ತೇ ಪಾಕಿಸ್ತಾನದ ದ್ವಿಮುಖ ನೀತಿ ವಿರುದ್ಧ ಸಿಡಿದೇಳುತ್ತದೆ.. ಆಗಲೂ ಸಹ ಅಮೆರಿಕಾ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳೋದಿಲ್ಲ.. ಆದ್ರೆ ಪಾಕಿಸ್ತಾನ ಮಾತ್ರ ಉಗ್ರ ಹೆಮ್ಮಾರಿಗಳನ್ನ ದಷ್ಟಪುಷ್ಠವಾಗಿಸುತ್ತಲೇ ಸಾಗುತ್ತದೆ..

blank
ದಾವುದ್ ಇಬ್ರಾಹಿಂಗ, ಉಗ್ರ

ವಿಶ್ವ ಭದ್ರತಾ ಮಂಡಳಿಯಿಂದಲೇ ಮೋಸ್ಟ್​ ವಾಂಟೆಡ್​ ಉಗ್ರ ಎಂದು ಘೋಷಿಸಲ್ಪಟ್ಟಿರುವ 2008ರ ಮುಂಬೈ ದಾಳಿ ರೂವಾರಿ ಹಫೀಜ್ ಸಯೀದ್, ಅಂಡರ್​​​ವರ್ಲ್ಡ್​​​​ ಹೆಗ್ಗಣ ಮತ್ತು ಉಗ್ರ ದಾವೂದ್ ಇಬ್ರಾಹಿಂ ಸೇರಿದಂತೆ ಹಲವಾರು ಉಗ್ರರು ಪಾಕಿಸ್ತಾನದಲ್ಲಿಯೇ ಸ್ವತಂತ್ರವಾಗಿ ಇರೋದು ಗಮನಕ್ಕೆ ಬಂದರೂ ಅಮೆರಿಕಾ ಕಮಕ್ ಕಿಮಕ್ ಅಂದಿರೋದಿಲ್ಲ.. ಒಂದು ಕಡೆ ಪಾಕಿಸ್ತಾನ, ಇನ್ನೊಂದು ಕಡೆ ಹಲವಾರು ಕಾಣದ ಕೈಗಳು, ದೇಶಗಳು ಉಗ್ರರಿಗೆ ಬೆನ್ನೆಲುಬಾಗಿ ನಿಂತಿರೋದು ಕೂಡ ಅಮೆರಿಕಾದ ಜಾಣ ಕಣ್ಣಿಗೆ ಕಾಣೋದಿಲ್ಲ.. ಅಥವಾ ಕಂಡರೂ ಏನೂ ಕ್ರಮಕ್ಕೆ ಮುಂದಾಗೋದಿಲ್ಲ..

ಗಾಯದ ಮೇಲೆ ಬರೆ ಎಳೆದದಂತೆ.. ಸದ್ಯ ತಾಲಿಬಾನ್​ಗೆ ಸ್ವತಃ ಅಮೆರಿಕಾವೇ ಅಧಿಕಾರವನ್ನ ನೀಡಿ ಅಫ್ಘಾನಿಸ್ತಾನದಿಂದ ಕಾಲು ಕೀಳೂವ ಹಾಗೆ ಆಗಿದೆ.. 2001ರಲ್ಲಿ ತಮಗೆ ಸಹಾಯ ಮಾಡಿದ್ದ ನಾರ್ಥರ್ನ್​ ಅಲಯನ್ಸ್​ ಅನ್ನೇ ಇಂದು ಕಟುಕರ ಕೈಗೆ ಬೈಡನ್ ಸರ್ಕಾರ ನೀಡಿದ್ದು, ರಕ್ತದ ಮಡುವಿನಲ್ಲಿ ಶಾಂತಿಯ ಮತ್ತು ಪ್ರಿನ್ಸಿಪಲ್ಸ್​ ಬಗ್ಗೆ ಮಾತನಾಡುತ್ತಿದೆ.. ಒಟ್ಟಾರೆಯಾಗಿ ನೋಡಿದಾಗ ಅಮೆರಿಕಾದ ಈ ಹೀನಾಯ ಸೋಲಿಗೆ ಪಾಕಿಸ್ತಾನ, ಉಗ್ರಗಾಮಿಗಳು ಇವೆಲ್ಲದರ ಹೊರತಾಗಿ, ಸ್ವತಃ ಅಮೆರಿಕಾದ ತಪ್ಪುಗಳೇ ಪ್ರಮುಖ ಕಾರಣವಾಗಿ ಗೋಚರವಾಗುತ್ತಿವೆ.. ಭಾರತ ಹೇಳಿದಂತೆ ಲಾಡೆನ್​ ಸಿಕ್ಕಾಗಲಾದರೂ ಪಾಕಿಸ್ತಾನದ ಮೇಲೆ ಅಮೆರಿಕಾ ಕಠಿಣ ಕ್ರಮ ಕೈಗೊಂಡಿದ್ದರೆ, ಇಂದು ಅದಕ್ಕೆ ಅಫ್ಘಾನಿಸ್ತಾನದಲ್ಲಿ ಇಂಥ ಸ್ಥಿತಿತಿ ಬರ್ತಿರಲಿಲ್ಲ ಎನಿಸುತ್ತೆ..

ನೋಡಿದ್ರಲ್ಲ ಇನ್ನಾದರೂ ಅಮೆರಿಕಾ ಎಚ್ಚೆತ್ತುಕೊಳ್ಳಬೇಕಿದೆ.. ಈಗಲಾದರೂ ಉಗ್ರರ ಸೇಫ್ ಹೆವನ್​ಗಳನ್ನು ಬೇರು ಸಮೇತ ಕಿತ್ತು ಹಾಕಬೇಕಿದೆ.. ತಮಗೆ ಆಗದಿದ್ದರೆ ಭಾರತದಂಥ ವೀರ ಪಡೆಗಳ ದೇಶಗಳ ಬೆನ್ನ ಹಿಂದೆಯಾದರು ನಿಲ್ಲಬೇಕು.. ಇಲ್ಲದಿಂದರೆ ಸದ್ಯ ಅಫ್ಘಾನಿಸ್ತಾನದಲ್ಲಿ ಮತ್ತೆ ಹೆಮ್ಮರವಾಗಿರೋ ಉಗ್ರರು, ಅಮೆರಿಕಾಕ್ಕೆ ಮತ್ತೊಂದು ಪೆಟ್ಟು ಕೊಡೋದ್ರಲ್ಲಿ ಹೆಚ್ಚು ಸಮಯ ಬೇಕಿಲ್ಲ.. ಅಲ್ಲವೇ?

ವಿಶೇಷ ವರದಿ: ರಾಘವೇಂದ್ರ ಗುಡಿ, ಡಿಜಿಟಲ್ ಡೆಸ್ಕ್

 

 

Source: newsfirstlive.com Source link