ಮಹಿಳೆಯನ್ನು ನಗ್ನ ಮಾಡಿ ಪೈಶಾಚಿಕ ಹಲ್ಲೆ ನಡೆಸಿದ ಕಿರಾತಕರು

ಯಾದಗಿರಿ: ಮಹಿಳೆಯನ್ನು ನಗ್ನ ಗೊಳಿಸಿ ಪೈಶಾಚಿಕ ಹಲ್ಲೆ ಮಾಡಿ. ಕಬ್ಬಿನ ಜಲ್ಲೆಯಿಂದ ಥಳಿಸಿ ಅಂಗಾಂಗ ಮುಟ್ಟಿ ವಿಕೃತ ವರ್ತನೆ ಮಾಡಿರುವ ಅಮಾನವೀಯ ಘಟನೆಯೊಂದು ಜಿಲ್ಲೆಯಲ್ಲಿ ವರದಿಯಾಗಿದೆ.

ಯಾದಗಿರಿ-ಶಹಾಪುರ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ ಎನ್ನಲಾಗುತ್ತಿರುವ ಈ ಘನೆಯಲ್ಲಿ ಐದಾರು ಮಂದಿಯ ಕಿರಾತಕರ ಗುಂಪು ಮಹಿಳೆಯನ್ನು ನಗ್ನ ಮಾಡಿ ಅಂಗಾಂಗಗಳನ್ನು ಮುಟ್ಟಿ ಚಿತ್ರಹಿಂಸೆ ಕೊಟ್ಟು ವೀಡಿಯೋ ರಿಕಾರ್ಡ್ ಮಾಡಲಾಗಿದೆ ಎಂದು ಎನ್ನಲಾಗುತ್ತಿದೆ. ಇದನ್ನೂ ಓದಿ: ಗಣೇಶ ಹಬ್ಬದಲ್ಲಿ ನಿರಾಶ್ರಿತರೊಂದಿಗೆ ಕುಣಿದು ಕುಪ್ಪಳಿಸಿದ ತಹಶೀಲ್ದಾರ್

ವೀಡಿಯೋವನ್ನು ಗಮನಿಸುತ್ತಿದ್ದಂತೆ ಹನಿಟ್ರಾಪ್ ಪ್ರಕರಣದಲ್ಲಿ ಮಹಿಳೆ ಸಿಲುಕಿರುವ ಶಂಕೆ ವ್ಯಕ್ತವಾಗುತ್ತಿದ್ದು, ಯುವಕನೋರ್ವ ನನ್ನಿಂದ 10-15 ಸಾವಿರ ಹಣ ಪಡೆದಿದ್ದಾಳೆ ಎಂದು ಸಿಟ್ಟಿನಿಂದ ಹೊಡೆಯುತ್ತಿದ್ದಾನೆ. ಮಹಿಳೆ ಕೈಮುಗಿದು ಕಣ್ಣೀರು ಹಾಕಿದ್ರು ಬಿಡದೆ ನಗ್ನಗೊಳಿಸಿ ಪಾಪಿಗಳು ಆಕೆಯನ್ನು ಹೊಡೆಯುವ ನೆಪದಲ್ಲಿ ಅಂಗಾಂಗಗಳನ್ನ ಮುಟ್ಟಿ ಚಿತ್ರಹಿಂಸೆ ನೀಡಿದ್ದಾರೆ. ವಾಹನ ಒಂದರ ಹೆಡ್ ಲೈಟ್ ಹಾಗೂ ಮೊಬೈಲ್ ಟಾರ್ಚ್ ಹಾಕಿ ಹಲ್ಲೆ ಮಾಡಿದ್ದು, ಘಟನೆ ಹೊರ ಹಾಕಿದರೆ ಸುಟ್ಟು ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ. ಘಟನೆ ಬಗ್ಗೆ ಜಿಲ್ಲೆಯ ಯಾವುದೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ ಎಂದು ವರದಿಯಾಗಿದೆ.

Source: publictv.in Source link