ಕರ್ನಾಟಕದಲ್ಲಿ ಮೀಸಲಾತಿಗೆ ಒತ್ತಾಯಿಸಿ ಮರಾಠ ಸಮುದಾಯ ಹೋರಾಟಕ್ಕೆ ಭಾರೀ ಸಿದ್ಧತೆ

ಕರ್ನಾಟಕದಲ್ಲಿ ಮೀಸಲಾತಿಗೆ ಒತ್ತಾಯಿಸಿ ಮರಾಠ ಸಮುದಾಯ ಹೋರಾಟಕ್ಕೆ ಭಾರೀ ಸಿದ್ಧತೆ

ಬೆಳಗಾವಿ: ರಾಜ್ಯದಲ್ಲಿ ಪಂಚಮಸಾಲಿ ಬೆನ್ನಲ್ಲೀಗ ಮರಾಠ ಸಮುದಾಯ ಮೀಸಲಾತಿಯ ಹೋರಾಟಕ್ಕೆ ಮುಂದಾಗಿದೆ. ನಮಗೂ ಮೀಸಲಾತಿ ನೀಡಿ ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿ ಹೋರಾಟ ಮಾಡಲು ಮರಾಠ ಭಾರೀ ಸಿದ್ಧತೆ ನಡೆಸಿಕೊಂಡಿದೆ.

ಮೀಸಲಾತಿ ಸಂಬಂಧ ಬೆಳಗಾವಿ ಜಿಲ್ಲೆ ಕಿತ್ತೂರು ಬಳಿಯ ಅಂಬಡಗಟ್ಟಿಯಲ್ಲಿ ಮರಾಠ ಸಮುದಾಯ ಮುಖಂಡರು ಸಭೆ ನಡೆಸಿದರು. ಸಭೆಯಲ್ಲಿ ಶಾಸಕರಾದ ಡಾ. ಅಂಜಲಿ ನಿಂಬಾಳ್ಕರ್, ಶ್ರೀಮಂತ ಪಾಟೀಲ್, ಸಮಾಜದ ಮುಖಂಡರು ಭಾಗಿಯಾಗಿದ್ದರು. ಅಕ್ಟೋಬರ್ 2ರಿಂದ ಹಂತ ಹಂತವಾಗಿ ಹೋರಾಟ ಮಾಡಲು ನಿರ್ಧಾರ ಮಾಡಲಾಗಿದೆ. ಅಧಿವೇಶನದಲ್ಲೂ ಸಮುದಾಯದ ಶಾಸಕರಿಂದ ಧ್ವನಿ ಎತ್ತಲು ತೀರ್ಮಾನ ಮಾಡಲಾಗಿದೆ.

ಬೇಡಿಕೆಗಳು ಹೀಗಿವೆ..

  1. ಹಿಂದುಳಿದ ವರ್ಗಗಳ ಶಿಪಾರಸ್ಸಿನಂತೆ ಮರಾಠಾ ಜನಾಂಗಕ್ಕೆ 2ಎ ಗೆ ಸೇರಿಸಬೇಕು
  2. ರಾಜಕೀಯವಾಗಿ ಮರಾಠ ಜನಾಂಗಕ್ಕೆ ಸರ್ಕಾರದಲ್ಲಿ ಕ್ಯಾಬಿನೆಟ್ ಮಂತ್ರಿ ಸ್ಥಾನ, ನಿಗಮಮಂಡಳಿಗೆ ನೇಮಕ ಮಾಡಬೇಕು
  3. ಮರಾಠ ಅಭಿವೃದ್ಧಿ ನಿಗಮಕ್ಕೆ ಕಾರ್ಯಾರಂಭ ಮಾಡಿ, 50 ಕೋಟಿ ಬದಲು ಹೆಚ್ಚಿನ ಹಣವನ್ನು ಬಿಡುಗಡೆ ಮಾಡಬೇಕು
  4. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಅಧ್ಯಯನ ಪೀಠ ಆರಂಭಿಸಬೇಕು

ಇದನ್ನೂ ಓದಿ: ಆಧಿವೇಶನ: ಎತ್ತಿನ ಗಾಡಿಯಲ್ಲೇ ಸದನಕ್ಕೆ ಆಗಮಿಸಲಿರುವ ಕಾಂಗ್ರೆಸ್ ನಾಯಕರು

Source: newsfirstlive.com Source link