ಹೇಯ ಕೃತ್ಯ; ಮಹಿಳೆಯನ್ನು ಸಂಪೂರ್ಣ ಬೆತ್ತಲಾಗಿಸಿ ವಿಡಿಯೋ ಮಾಡಿ ಕಾಮುಕರು ವಿಕೃತಿ

ಹೇಯ ಕೃತ್ಯ; ಮಹಿಳೆಯನ್ನು ಸಂಪೂರ್ಣ ಬೆತ್ತಲಾಗಿಸಿ ವಿಡಿಯೋ ಮಾಡಿ ಕಾಮುಕರು ವಿಕೃತಿ

ಯಾದಗಿರಿ: ರಾಜ್ಯದಲ್ಲೊಂದು ಬಿಹಾರ್​​ ಮಾದರಿಯಲ್ಲಿ ಹೇಯ ಕೃತ್ಯವೊಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಹಿಳೆಯೊಬ್ಬರನ್ನು ಸಂಪೂರ್ಣ ಬೆತ್ತಲಾಗಿಸಿದ ಕಿಡಿಗೇಡಿಗಳ ಗುಂಪೊಂದು ವಿಡಿಯೋ ಮಾಡಿ ವಿಕೃತಿ ಮೆರೆದಿದೆ. ನಿಮ್ಮ ಕಾಲು ಮುಗಿತೀನಿ ಬಿಡಿ ಎಂದರೂ ಕ್ಯಾರೇ ಎನ್ನದೆ ಮಹಿಳೆಯನ್ನು ನಗ್ನಗೊಳಿಸಿ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಂಗಾಗ ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.

ಯಾವುದೋ ಮಾರ್ಗ ಮಧ್ಯೆ ಖಾಲಿ ಜಮೀನೊಂದರಲ್ಲಿ ಕಗ್ಗತ್ತಲಲ್ಲಿ ಮಹಿಳೆಯನ್ನು ಥಳಿಸಿ ವಿಡಿಯೋ ಮಾಡಲಾಗಿದೆ. ಹಲ್ಲೆಕೋರರ ಗುಂಪೇ ಮೊಬೈಲ್‌ನಲ್ಲಿ ಈ ವಿಡಿಯೋ ಚಿತ್ರೀಕರಿಸಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ಯಾದಗಿರಿ ತಾಲೂಕಿನ ಎರಡು ಗ್ರಾಮಗಳ ಹೆಸರು ವಿಡಿಯೋದಲ್ಲಿ ಬಳಕೆ ಮಾಡಲಾಗಿದೆ. ಹಲ್ಲೆ ನಡೆಸುತ್ತಾ ಲೈಂಗಿಕ ದೌರ್ಜನ್ಯ ಮಾಡಲಾಗಿದೆ.

ಇನ್ನು, ಈ ಪ್ರಕರಣ ಸಂಬಂಧ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಮಹಿಳೆಯೊಂದಿಗೆ ಅಸಭ್ಯವಾಗಿ ನಡೆದುಕೊಂಡ ಕಿಡಿಗೇಡಿಗಳ ಬಂಧನಕ್ಕೆ ವಿಶೇಷ ಪೊಲೀಸ್​​ ತನಿಖಾ ತಂಡ ರಚಿಸಲಾಗಿದೆ. ಈಗ ವಿಡಿಯೋದಲ್ಲಿ ಇದಾರೆ ಎನ್ನಲಾದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಯಾದಗಿರಿ ಎಸ್​​ಪಿ ಸಿ.ಬಿ ವೇದಮೂರ್ತಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಅಪ್ರಾಪ್ತಳ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿ ಅರೆಸ್ಟ್​

Source: newsfirstlive.com Source link