ಶೇ.60-65 ಮತದಾನದ ನಡೆದರೆ ಪ್ರಿಯಾಂಕಾಗೆ ಗೆಲುವು: ಸುವೇಂದು

ಕೋಲ್ಕತ್ತಾ: ನಾವು ಪೊಲೀಸ್, ಮಾಫಿಯಾಗಳು ಮತ್ತು ಹಣದ ಶಕ್ತಿಯ ವಿರುದ್ಧ ಹೋರಾಡಬೇಕಾಗಿದೆ ಎಂದು ಬಂಗಾಳದ ಬಿಜೆಪಿ ಪಕ್ಷದ ನಾಯಕ ಸುವೇಂದು ಅಧಿಕಾರಿ ಹೇಳಿದ್ದಾರೆ.

ಬಂಗಾಳ ಉಪಚುನಾವಣೆಗೆ ಬಗ್ಗೆ ಸುವೇಂದು ಅಧಿಕಾರಿ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಭವಾನಿಪುರ ವಿಧಾನಸಭಾ ಉಪಚುನಾವಣೆಯಲ್ಲಿ ನಾವು ಆಡಳಿತ, ಪೊಲೀಸ್, ಮಾಫಿಯಾಗಳು ಮತ್ತು ಹಣದ ಶಕ್ತಿಯ ವಿರುದ್ಧ ಹೋರಾಡಬೇಕಾಗಿದೆ. ಒಂದು ವೇಳೆ ಈ ಚುನಾವಣೆಯಲ್ಲಿ ಶೇ.60-65ರಷ್ಟು ಮತದಾನ ನಡೆದರೆ ‘ಬಂಗಾಳದ ಮಗಳು’ ಪ್ರಿಯಾಂಕಾ ಟಿಬ್ರೆವಾಲ್ ವಿಜಯಶಾಲಿಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ:  ಕೃಷಿಹೊಂಡದಲ್ಲಿ ಮುಳುಗಿ ಇಬ್ಬರು ಬಾಲಕರ ಸಾವು

ಬಿಜೆಪಿ ಅಭ್ಯರ್ಥಿ, ವಕೀಲೆ ಪ್ರಿಯಾಂಕಾ ಟಿಬ್ರೆವಾಲ್ ಇಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ವರಿಷ್ಠೆ ಮಮತಾ ಬ್ಯಾನರ್ಜಿ ವಿರುದ್ಧ ಭವಾನಿಪುರ ಕ್ಷೇತ್ರದಲ್ಲಿ ನಡೆಯುವ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲಿದ್ದಾರೆ. ಈ ಸೆಪ್ಟೆಂಬರ್ 30 ರಂದು ಭವಾನಿಪುರದಲ್ಲಿ ಉಪಚುನಾವಣೆ ನಡೆಯಲಿದ್ದು, ಅಕ್ಟೋಬರ್ 3 ರಂದು ಫಲಿತಾಂಶ ಪ್ರಕಟವಾಗಲಿದೆ. ಇದನ್ನೂ ಓದಿ:  ಶ್ರೀಮಂತ ಪಾಟೀಲ್ ಹೇಳಿದ್ದು ಸತ್ಯ, ಎಸಿಬಿ ಸ್ವಯಂ ಪ್ರೇರಿತ ಕೇಸ್ ದಾಖಲಿಸಲಿ :ಡಿಕೆಶಿ

ಹೊಸದಾಗಿ ನೇಮಕಗೊಂಡ ಗುಜರಾತ್ ಮುಖ್ಯಮಂತ್ರಿ ಕುರಿತು ಮಾತನಾಡಿದ ಅವರು, ಭೂಪೇಂದ್ರ ಪಟೇಲ್ ಅವರು ಗುಜರಾತ್‍ನ ಮುಖ್ಯಮಂತ್ರಿಯಾಗಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಆಯ್ಕೆಯಾಗಿದ್ದಾರೆ. ಅವರಿಗೆ ಅಭಿನಂದನೆಗಳು ಎಂದು ಶುಭಕೋರಿದ್ದಾರೆ.

Source: publictv.in Source link