‘ಮಂಡ್ಯ ಗಣಿಗಾರಿಕೆ ನಿಲ್ಲಿಸೋಕೆ ಸಮರ್ಥರಿದ್ದಾರೆ’- HDK ಹೀಗೆ ಸುಮಲತಾ ಬಗ್ಗೆ ವ್ಯಂಗ್ಯ ಮಾಡಿದ್ದೇಕೆ?

‘ಮಂಡ್ಯ ಗಣಿಗಾರಿಕೆ ನಿಲ್ಲಿಸೋಕೆ ಸಮರ್ಥರಿದ್ದಾರೆ’- HDK ಹೀಗೆ ಸುಮಲತಾ ಬಗ್ಗೆ ವ್ಯಂಗ್ಯ ಮಾಡಿದ್ದೇಕೆ?

ಮಂಡ್ಯ: ಅಕ್ರಮ ಗಣಿಗಾರಿಕೆ ನಿಲ್ಲಿಸಲು ಸಮರ್ಥರು ಇರಬೇಕಾದರೆ ನಾನ್ಯಾಕೆ ಮೂಗು ತೂರಿಸಲಿ ಎಂದು ಮಾಜಿ ಸಿಎಂ ಎಚ್​​.ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಂಡ್ಯದ ಕೀಲಾರದಲ್ಲಿ ಮಾತಾಡಿದ ಎಚ್​ಡಿಕೆ, ಗಣಿಗಾರಿಕೆ ತಡೆಯಲು ದೊಡ್ಡ ಸಾಮರ್ಥ್ಯ ಹೊಂದಿರೋರು ಇದ್ದಾರೆ. ನಾನು ಈ ವಿದಾರದಲ್ಲಿ ಮೂಗು ತೂರಿಸುವುದಿಲ್ಲ ಎಂದರು.

ಸಮರ್ಥರು ಮಂಡ್ಯ ಗಣಿಗಾರಿಕೆ ನಿಲ್ಲಿಸಲಿದ್ದಾರೆ. ಅವರೇ ಈ ಸಮಸ್ಯೆಯನ್ನು ಸರಿಪಡಿಸಿಕೊಳ್ಳುತ್ತಾರೆ. ಈ ಗೊಂದಲದಲ್ಲಿ ನಾನು ಮೂಗು ತೂರಿಸುವುದಿಲ್ಲ ಎಂದು ಹೇಳುವ ಮೂಲಕ ಮಾಜಿ ಸಿಎಂ ಎಚ್​.ಡಿ ಕುಮಾರಸ್ವಾಮಿ ಸಂಸದೆ ಸುಮಲತಾ ಅಂಬರೀಶ್​​ ವಿರುದ್ಧ ವ್ಯಂಗ್ಯವಾಡಿದರು.

ಈ ಹಿಂದೆ ಕಲಾಪದಲ್ಲಿ ಮಂಡ್ಯ ಗಣಿಗಾರಿಕೆ ಬಗ್ಗೆ ಚರ್ಚಿಸಲಿದ್ದೇವೆ ಎಂದು ಮಂಡ್ಯ ಜಿಲ್ಲಾ ಜೆಡಿಎಸ್​ ಶಾಸಕರು ಹೇಳಿದ್ದರು. ಈಗ ಏನು ಹೇಳದೆ ಈ ವಿಚಾರದಲ್ಲಿ ಮಾಜಿ ಸಿಎಂ ಎಚ್​.ಡಿ ಕುಮಾರಸ್ವಾಮಿ ಮೌನವಹಿಸಿದ್ದಾರೆ.

ಇದನ್ನೂ ಓದಿ: ವಿಧಾನಸೌಧಕ್ಕೆ ಎತ್ತಿನ ಗಾಡಿ ಹೊಡೆದ ಮಾಜಿ ಸಿಎಂ ಸಿದ್ದರಾಮಯ್ಯ

Source: newsfirstlive.com Source link