ಕಾಂಗ್ರೆಸ್​ ಎತ್ತಿನ ಗಾಡಿ ಚಲೋ; ಫುಲ್​​​ ಟ್ರಾಫಿಕ್​​​ ಜಾಮ್​​​, ವಾಹನ ಸವಾರರ ಪರದಾಟ

ಕಾಂಗ್ರೆಸ್​ ಎತ್ತಿನ ಗಾಡಿ ಚಲೋ; ಫುಲ್​​​ ಟ್ರಾಫಿಕ್​​​ ಜಾಮ್​​​, ವಾಹನ ಸವಾರರ ಪರದಾಟ

ಬೆಂಗಳೂರು: ಬೆಲೆ ಏರಿಕೆಯನ್ನು ಖಂಡಿಸಿ ರಾಜ್ಯ ಕಾಂಗ್ರೆಸ್​ ನಾಯಕರು ವಿನೂತನ ಪ್ರತಿಭಟನೆಗೆ ಮುಂದಾಗಿದ್ದು, ಪರಿಣಾಮ ನಗರದ ಕೆಲವೆಡ ಟ್ರಾಫಿಕ್​ ಜಾಮ್​ ಉಂಟಾಗಿ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಇಂದಿನಿಂದ 10 ದಿನಗಳ ಕಾಲ ನಡೆಯುವ ಅಧಿವೇಶನದಲ್ಲಿ ಭಾಗವಹಿಸಲು ಕಾಂಗ್ರೆಸ್​ ನಾಯಕರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​ ಸೇರಿದಂತೆ ಇತರೆ ನಾಯಕರು ಎತ್ತಿನ ಬಂಡಿಯಲ್ಲಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಇದರಿಂದ ನಗರದ ಮೇಕ್ರಿ ಸರ್ಕಲ್, ಚಾಲುಕ್ಯ ಸರ್ಕಲ್ ಬಳಿ ಫುಲ್ ಟ್ರಾಫಿಕ್ ಜಾಮ್​ ಉಂಟಾಗಿದೆ. ಸಾಕಷ್ಟು ಸಮಯದಿಂದ ವಾಹನಗಳು ನಿಂತಲ್ಲೆ ನಿಂತಿರುವುದರಿಂದ ದಿನ ನಿತ್ಯದ ಕೆಲಸಗಳಿಗೆ ಹೋಗುವವರು ಪರದಾಡುತ್ತಿದ್ದಾರೆ.

ಇದನ್ನೂ ಓದಿ: ‘ಮಂಡ್ಯ ಗಣಿಗಾರಿಕೆ ನಿಲ್ಲಿಸೋಕೆ ಸಮರ್ಥರಿದ್ದಾರೆ’- HDK ಹೀಗೆ ಸುಮಲತಾ ಬಗ್ಗೆ ವ್ಯಂಗ್ಯ ಮಾಡಿದ್ದೇಕೆ?

Source: newsfirstlive.com Source link