ಮಹಿಳೆಯನ್ನು ನಗ್ನಗೊಳಿಸಿ ಥಳಿಸಿದ ಪ್ರಕರಣ- ನಾಲ್ವರು ಆರೋಪಿಗಳು ಪೊಲೀಸ್ ವಶಕ್ಕೆ

ಯಾದಗಿರಿ: ಜಿಲ್ಲೆಯಲ್ಲಿ ನಡೆದ ಮಹಿಳೆಯನ್ನು ನಗ್ನಗೊಳಿಸಿ ಥಳಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶಹಾಪುರ ಪೊಲೀಸರು ನಾಲ್ಕು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಪ್ರಕರಣದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಯಾದಗಿರಿ ಜಿಲ್ಲೆಯ ಎಸ್‍ಪಿ ವೇದಮೂರ್ತಿ, ಇದು 8 ರಿಂದ 9 ತಿಂಗಳ ಹಿಂದೆ ನಡೆದಿರುವ ಘಟನೆಯಾಗಿದ್ದು, ಈಗಾಗಲೇ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ. ಮಹಿಳೆಗಾಗಿ ಹುಡುಕಾಟ ನಡೆಸುತ್ತಿದ್ದೇವೆ. ಪ್ರಕರಣ ಸಂಬಂಧ 3 ತಂಡಗಳಿಂದ ತನಿಖೆ ನಡೆಯುತ್ತಿದೆ. ಇದು ಹಳೆಯ ವೀಡಿಯೋ. ಇದು ಶಹಾಪೂರದ ಹೊರ ವಲಯದಲ್ಲಿ ಈ ಘಟನೆ ನಡೆದಿದೆ. ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಈ ಪ್ರಕರಣದಲ್ಲಿ ಭಾಗಿಯಾದವರನ್ನು ಈಗಾಗಲೇ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಮಹಿಳೆಯನ್ನು ನಗ್ನ ಮಾಡಿ ಪೈಶಾಚಿಕ ಹಲ್ಲೆ ನಡೆಸಿದ ಕಿರಾತಕರು


ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಘಟನೆ ನಡೆದಾಗ ಇದ್ದಂತಹ ಓರ್ವ ಆರೋಪಿ ಪಿಎಸ್‍ಐ ವಾಹನ ಚಾಲಕನಾಗಿ ಕರ್ತವ್ಯ ನಿರ್ವಹಿಸಿದ್ದ, ಕಳೆದ ಒಂದು ವರ್ಷದ ಹಿಂದೆ ಪೊಲೀಸ್ ಜೀಪ್ ಡ್ರೈವರ್ ಆಗಿದ್ದ ಆರೋಪಿ ಪ್ರಸ್ತುತ ಕೆಲಸ ಬಿಟ್ಟಿದ್ದನಂತೆ. ಈತನನ್ನು ಬಂಧಿಸಿರುವ ಪೊಲೀಸರು ಪ್ರಕರಣದ ಉಳಿದ ಆರೋಪಿಗಳನ್ನು ಪತ್ತೆ ಮಾಡಿದ್ದಾರೆ. ಅದಲ್ಲದೆ ಶಹಾಪುರ ನಗರದಲ್ಲೇ ವಾಸವಿದ್ದ ಹಲ್ಲೆಗೊಳಗಾದ ಮಹಿಳೆಯನ್ನು ಕೂಡ ಪೊಲೀಸರು ಪತ್ತೆ ಮಾಡಿದ್ದು, ವಿಚಾರಣೆ ಬಳಿಕ ಪ್ರಕರಣದ ಅಸಲಿಯತ್ತು ಗೊತ್ತಾಗಲಿದೆ. ಇದನ್ನೂ ಓದಿ: ವೈಟ್ ಬೋರ್ಡ್ ವಾಹನದಲ್ಲಿ ಪ್ರಯಾಣಿಕರನ್ನು ಸಾಗಿಸೋದು ಅಕ್ಷಮ್ಯ ಅಪರಾಧ: ಸುಧಾಕರ್

Source: publictv.in Source link