‘ಪ್ರಾಣಿಗಳಿಗೆ ತೊಂದ್ರೆ ಕೊಡೋ ಬದ್ಲು ಸೈಕಲ್​ನಲ್ಲಿ ಬಂದಿದ್ದರೆ ಚೆನ್ನಾಗಿರ್ತಿತ್ತು’ ಸುಧಾಕರ್ ಟಾಂಗ್

‘ಪ್ರಾಣಿಗಳಿಗೆ ತೊಂದ್ರೆ ಕೊಡೋ ಬದ್ಲು ಸೈಕಲ್​ನಲ್ಲಿ ಬಂದಿದ್ದರೆ ಚೆನ್ನಾಗಿರ್ತಿತ್ತು’ ಸುಧಾಕರ್ ಟಾಂಗ್

ಬೆಂಗಳೂರು: ಬೆಲೆ ಏರಿಕೆಯನ್ನು ಖಂಡಿಸಿ ರಾಜ್ಯ ಕಾಂಗ್ರೆಸ್​ ನಾಯಕರು ನಡೆಸಿದ ವಿನೂತನ ಪ್ರಭಟನೆ ಕುರಿತು ಸಚಿವ ಕೆ.ಸುಧಾಕರ್​ ವ್ಯಂಗವಾಡಿದ್ದು ಎತ್ತಿನ ಬಂಡಿ ಏರಿ ಹಸುಗಳಿಗೆ ತೊದರೆ ಕೊಡೋ ಬದಲು ಸೈಕಲ್​ ಏರಿ ಪ್ರತಿಭಟನೆ ಮಾಡಿದ್ದರೆ ಚೆನ್ನಾಗಿರ್ತಿತ್ತು ಎಂದಿದ್ದಾರೆ.

blank

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಇವರ ಪ್ರತಿಭಟನೆಯಿಂದ ವಿಧಾನಸೌಧಕ್ಕೆ ಬರೋದಕ್ಕೆ ಮುಕ್ಕಾಲು ಗಂಟೆ ತಡ ಆಯ್ತು. ಯಾರು ಬೆಲೆ ಏರಿಕೆ ಮಾಡಿದ್ದಾರೆ , ಯಾರು ಸಾಲದ ಬಾಂಡ್​ ಮಾಡಿದ್ದಾರೆ ಯಾರ ಅವಧಿಯಲ್ಲಿ ಎಷ್ಟು ಬೆಲೆ ಏರಿಕೆ ಆಗಿದೆ ಎಂದು ಎಂದು ಸದನದಲ್ಲಿ ಸುದೀರ್ಘವಾಗಿ ಚರ್ಚೆ ಮಾಡಬಹುದು. ಅದನ್ನ ಬಿಟ್ಟು ಸುಮ್ಮನೆ ಹೀಗೆ ಜನಸಾಮಾನ್ಯರಿಗೆ ತೊಂದರೆ ಕೊಡೋದು ಸರಿಯಲ್ಲ ಎಂದರು.

blank

Source: newsfirstlive.com Source link