‘ಬಿಜೆಪಿ ಸರ್ಕಾರ ಜನರ ರಕ್ತ ಹೀರುತ್ತಿದೆ’ ಸಿದ್ದರಾಮಯ್ಯ ಕಿಡಿ

‘ಬಿಜೆಪಿ ಸರ್ಕಾರ ಜನರ ರಕ್ತ ಹೀರುತ್ತಿದೆ’ ಸಿದ್ದರಾಮಯ್ಯ ಕಿಡಿ

ಬೆಂಗಳೂರು: ಬಿಜೆಪಿ ಸರ್ಕಾರ ಜನಸಾಮಾನ್ಯರ ರಕ್ತ ಹೀರುತ್ತಿದೆ ಎಂದು ವಿಪಕ್ಷ ನಾಯ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಎತ್ತಿನ ಬಂಡಿ ಪ್ರತಿಭಟನೆಯ ನಂತರ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ಮಂದುವರೆಸಿದ್ದು ಬಿಜೆಪಿ ಜನಸಾಮಾನ್ಯರ ರಕ್ತ ಹೀರುತ್ತಿದೆ. ಇವತ್ತು ಜನರಿಗೆ ಬರೀ ಸುಳ್ಳುಗಳನ್ನು ಹೇಳುವ ಮೂಲಕ ಮೋಸ ಮಾಡುತ್ತಿರುವ ಸರ್ಕಾರ ಹಿಂದಿನ ಸರ್ಕಾರ ಸಾಲದ ಬಾಂಡ್​ಗಳನ್ನು ಮಾಡಿವೆ ಅದಕ್ಕೆ ಬೆಲೆ ಏರಿಸುತ್ತಿದ್ದೇವೆ ಎನ್ನುವ ಮೂಲಕ ಜನರಿಗೆ ಮೋಸ ಮಾಡುತ್ತಿದೆ.

ಅಗತ್ಯ ವಸ್ತುಗಳ ಬೆಲೆ ಗಗನ್ನಕ್ಕೇರಿದ್ದು, ಜನಸಾಮನ್ಯರ ಬದುಕು ಮೂರಾಬಟ್ಟೆಯಾಗಿದೆ. ಆ ,ಊಲಕ ಜನರ ರಕ್ತ ಹೀರ್ತಿದ್ದಾರೆ. ಈ ಕುರಿತು ಸದನದ ಒಳಗಡೆ ಮತ್ತು ಸದನದ ಹೊರಗೆ ಧ್ವನಿ ಎತ್ತುತ್ತೇವೆ ಎಂದು ಎಂದು ಸಿದ್ದರಾಮಯ್ಯ ಗುಡುಗಿದ್ದಾರೆ.

ಪೊಲೀಸರ ವಿರುದ್ಧವೂ ಕಿಡಿ

ಬೆಲೆ ಏರಿಕೆಯನ್ನು ಖಂಡಿಸಿ ರಾಜ್ಯ ಕಾಂಗ್ರೆಸ್​ ನಾಯಕರು ವಿನೂತನ ಪ್ರತಿಭಟನೆಗೆ ಮುಂದಾಗಿದ್ದು, ವಿಧಾನಸೌಧದ ಮುಂಭಾಗ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಜೊತೆ ಪೊಲೀಸರು ವಾಗ್ವಾದ ನಡೆಸಿದ್ದಾರೆ.

blank

ಈ ವೇಳೆ ಎತ್ತಿನ ಬಂಡಿಯಲ್ಲೇ ವಿಧಾನಸೌಧ ಆವರಣಕ್ಕೆ ತೆರಳಿದ ಸಿದ್ದರಾಮಯ್ಯರನ್ನು ಪೊಲೀಸರು ತಡೆದಿದ್ದು ಸಿದ್ದು ಗರಂ ಆಗಿದ್ದಾರೆ. ನಮ್ಮನ್ನ ಯಾಕೆ ಒಳಗೆ ಬಿಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದ ವಿಪಕ್ಷ ನಾಯಕ, ಎತ್ತಿನ ಬಂಡಿ ಬಿಡಬಾರದು ಅಂತ ಏನಾದ್ರು ಕಾನೂನು ಇದೆಯಾ? ನಿಮ್ಮ ವಿರುದ್ಧ ಹಕ್ಕು ಚ್ಯುತಿ ಮಂಡಿಸ್ತಿನಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಲ ಹೊತ್ತು ಪೊಲೀಸರು ಮತ್ತು ಕಾಂಗ್ರೆಸ್​ ನಾಯಕರ ನಡುವೆ ವಾಗ್ವಾದ ನಡೆದಿದ್ದು ಬಳಿಕ ವಿಧಾನಸೌಧ ಆವರಣಕ್ಕೆ ಎತ್ತಿನ ಬಂಡಿಯಲ್ಲಿ ತೆರಳಲು ಪೊಲೀಸರು ಅನುಮತಿ ನೀಡಿದ್ದಾರೆ.

Source: newsfirstlive.com Source link