‘ಅತ್ಯಂತ ಸಂತೋಷದಿಂದ ಅಧಿವೇಶನದಲ್ಲಿ ಭಾಗಿಯಾಗುತ್ತಿದ್ದೇನೆ’- ಬಿಎಸ್​ವೈ ಹೀಗಂದಿದ್ಯಾಕೆ?

‘ಅತ್ಯಂತ ಸಂತೋಷದಿಂದ ಅಧಿವೇಶನದಲ್ಲಿ ಭಾಗಿಯಾಗುತ್ತಿದ್ದೇನೆ’- ಬಿಎಸ್​ವೈ ಹೀಗಂದಿದ್ಯಾಕೆ?

ಬೆಂಗಳೂರು: ಸಿಎಂ ಬಸವರಾಜ್​​ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಅಧಿವೇಶನ ಇಂದಿನಿಂದ ಶುರುವಾಗಲಿದೆ. ಬಿ.ಎಸ್​ ಯಡಿಯೂರಪ್ಪ ರಾಜೀನಾಮೆ ನೀಡಿದ ಬಳಿಕ ನಡೆಯುತ್ತಿರುವ ಅಧಿವೇಶನ ಇದಾಗಿದೆ. ಹೀಗಿರುವಾಗಲೇ 10 ದಿನಗಳ ಕಾಲ ನಡೆಯುವ ಈ ಅಧಿವೇಶನದಲ್ಲಿ ಈಗ ಸಂತೋಷದಿಂದ ಭಾಗಿಯಾಗುತ್ತೇನೆ ಎಂದು ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತಾಡಿದ ಬಿ.ಎಸ್​ ಯಡಿಯೂರಪ್ಪ, ಕಾಂಗ್ರೆಸ್​​ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಿದೆ. ಶಾಂತ ರೀತಿಯಲ್ಲಿ ಪ್ರತಿಭಟನೆ ಮಾಡಿದ್ರೆ ಒಳ್ಳೆಯದು. ಯಾವುದೇ ಮುಜುಗರ ತರುವ ಕೆಲಸ ಮಾಡಬಾರದು ಎಂದರು.

ಬಸವರಾಜ್​​ ಬೊಮ್ಮಾಯಿ ಸಿಎಂ ಆಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಮತ್ತೊಮ್ಮೆ ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಸಂಕಲ್ಪ. ಅತ್ಯಂತ ಸಂತೋಷದಿಂದ ಅಧಿವೇಶನದಲ್ಲಿ ಭಾಗಿಯಾಗುತ್ತಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ: ಕಾಂಗ್ರೆಸ್​ ಎತ್ತಿನ ಗಾಡಿ ಚಲೋ; ಫುಲ್​​​ ಟ್ರಾಫಿಕ್​​​ ಜಾಮ್​​​, ವಾಹನ ಸವಾರರ ಪರದಾಟ

Source: newsfirstlive.com Source link