ಪ್ರತಿಭಟನೆ ವೇಳೆ ಬೆದರಿದ ಎತ್ತು; ಡಾ.ಜಿ ಪರಮೇಶ್ವರ್ ಸೇರಿ ನೆಲಕ್ಕೆ ಬಿದ್ದ ಕಾಂಗ್ರೆಸ್​​ ನಾಯಕರು

ಪ್ರತಿಭಟನೆ ವೇಳೆ ಬೆದರಿದ ಎತ್ತು; ಡಾ.ಜಿ ಪರಮೇಶ್ವರ್ ಸೇರಿ ನೆಲಕ್ಕೆ ಬಿದ್ದ ಕಾಂಗ್ರೆಸ್​​ ನಾಯಕರು

ಬೆಂಗಳೂರು: ಪೆಟ್ರೋಲ್​​-ಡೀಸೆಲ್​​​ ಮತ್ತು ಅಡುಗೆ ಅನಿಲದ ದರ ಏರಿಕೆ ಖಂಡಿಸಿ ಕಾಂಗ್ರೆಸ್ ವಿಭಿನ್ನ ರೀತಿಯ ಪ್ರತಿಭಟನೆ ಹಮ್ಮಿಕೊಂಡಿದೆ. ವಿಧಾನಮಂಡಲ ಅಧಿವೇಶನಕ್ಕೆ ಎತ್ತಿನ ಗಾಡಿಯ ಮೂಲಕ ತೆರಳಿ ಸರ್ಕಾರದ ವಿರುದ್ಧ ಕಾಂಗ್ರೆಸ್​ ಆಕ್ರೋಶ ವ್ಯಕ್ತಪಡಿಸಿದೆ.

blank

ಈ ವೇಳೆ ವಿಧಾನಸೌಧ ಆವರಣಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಎತ್ತಿ ಬಂಡಿಯಲ್ಲೆ ತೆರಳಿದ್ದು ಅವಘಡವೊಂದು ಸಂಭವಿಸಿದೆ. ಸಿದ್ದರಾಮಯ್ಯ ಇದ್ದ ಎತ್ತಿನ ಬಂಡಿಯ ಎತ್ತು ಬೆದರಿ ಎಗರಿದ್ದು ಪರಿಣಾಮ ಬಂಡಿಯಲ್ಲಿ ಹಿಂದೆ ನಿಂತಿದ್ದ ಕಾಂಗ್ರೆಸ್​ ನಾಯಕ ಮಾಜಿ ಡಿಸಿಎಂ ಜಿ. ಪರಮೇಶ್ವರ, ಜಿ. ಸಂಗಮೇಶ್, ಅಶೋಕ್​ ಪಠಾಣ್​,ಅಶೋಕ್ ಸಿಂಗ್​ ಸೇರಿದಂತೆ ಇತರೆ ನಾಯಕರು ಕೆಳಗೆ ಬಿದ್ದಿದ್ದಾರೆ. ಅಧೃಷ್ಟವಶಾತ್​ ಯಾವುದೇ ಅಪಾಯ ಸಂಭವಿಸಿಲ್ಲ. ಕೆಳಗೆ ಬಿದ್ದ ನಾಯಕರನ್ನು ತಕ್ಷಣವೆ ಕಾರ್ಯಕರ್ತರು ಮೇಲೆ ಎಬ್ಬಿಸಿದ್ದು ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಇದನ್ನೂ ಓದಿ: ವಿಧಾನಸೌಧಕ್ಕೆ ಎತ್ತಿನ ಗಾಡಿಯಲ್ಲಿ ಹೊರಟ ಡಿ.ಕೆ. ಶಿವಕುಮಾರ್..

ಇದನ್ನೂ ಓದಿ:ವಿಧಾನಸೌಧಕ್ಕೆ ಎತ್ತಿನ ಗಾಡಿ ಹೊಡೆದ ಮಾಜಿ ಸಿಎಂ ಸಿದ್ದರಾಮಯ್ಯ

Source: newsfirstlive.com Source link