ಗಂಡ ಹೆಂಡತಿ ಜಗಳ- ಬಾಮೈದನಿಂದ ಬಾವನ ಮೇಲೆ ಮಾರಣಾಂತಿಕ ಹಲ್ಲೆ

ನೆಲಮಂಗಲ: ಗಂಡ, ಹೆಂಡತಿ ಜಗಳವಾಡಿದನ್ನು ಕಂಡು ರೊಚ್ಚಿಗೆದ್ದ ಬಾಮೈದನೊಬ್ಬ ಬಾವನಿಗೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ವಾಲ್ಮೀಕನಗರದಲ್ಲಿ ನಡೆದಿದೆ.

ನೆಲಮಂಗಲ ತಾಲೂಕಿನ ವಾಲ್ಮೀಕನಗರದಲ್ಲಿ ವಾಸವಾಗಿರುವ ಹಿದಾಯತ್ ಖಾನ್ ತನ್ನ ಪತ್ನಿ ಜೊತೆ ಜಗಳವಾಡಿಕೊಂಡು ಬಳಿಕ ಹಿರಿಯರ ನೇತೃತ್ವದಲ್ಲಿ ಮನಸ್ತಾಪ ಬಗೆಹರಿಸಿ ಸಂಸಾರ ಒಂದು ಮಾಡಿದ್ದರು. ಅದಾದ ಬಳಿಕ ಮತ್ತೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿದೆ. ಪತಿ, ಪತ್ನಿಗೆ ಹೊಡೆದ ಎಂಬ ವಿಚಾರಕ್ಕೆ ಹಿದಾಯತ್ ಖಾನ್ ಪತ್ನಿಯ ಅಣ್ಣ ತಮ್ಮಂದಿರಾದ ಅಜ್ಘರ್ ಖಾನ್, ಸಲ್ಮಾನ್, ಮತ್ತು ಅನ್ಸರ್ ಖಾನ್ ಸೇರಿ ಬಾವನಿಗೆ ಲಾಂಗ್, ರಾಡ್, ಬಡಿಗೆಗಳಿಂದ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ಗೌಡ್ರ ಕುಟುಂಬದಲ್ಲಿ ಹಬ್ಬದ ಸಂಭ್ರಮ – ನಿಖಿಲ್ ಪತ್ನಿಗೆ ಸೀಮಂತ

ಹಲ್ಲೆಗೊಳಗಾಗಿದ್ದ ಹಿದಾಯತ್ ಖಾನ್ ತೀವ್ರ ರಕ್ತಸ್ರಾವದಿಂದ ನೆಲಮಂಗಲದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ನೆಲಮಂಗಲ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಯಾದಗರಿಯಲ್ಲಿ ಮಹಿಳೆಯನ್ನು ನಗ್ನಗೊಳಿಸಿ ಥಳಿಸಿದ ನಾಲ್ವರು ಅರೆಸ್ಟ್

Source: publictv.in Source link