’70 ವರ್ಷಗಳಿಂದ ಕಾಂಗ್ರೆಸ್​ದು ಬರೀ ಗಿಮಿಕ್ಸ್​ ಅಷ್ಟೇ’- ಸಚಿವ ಶ್ರೀರಾಮುಲು ವ್ಯಂಗ್ಯ

’70 ವರ್ಷಗಳಿಂದ ಕಾಂಗ್ರೆಸ್​ದು ಬರೀ ಗಿಮಿಕ್ಸ್​ ಅಷ್ಟೇ’- ಸಚಿವ ಶ್ರೀರಾಮುಲು ವ್ಯಂಗ್ಯ

ಬೆಂಗಳೂರು: ಕಾಂಗ್ರೆಸ್ಸಿನದ್ದು 70 ವರ್ಷಗಳಿಂದ ಬರೀ ಗಿಮಿಕ್ಸ್​ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ. ಈ ಸಂಬಂಧ ಮಾತಾಡಿದ ಸಚಿವ ಬಿ. ಶ್ರೀರಾಮುಲು, ಕಾಂಗ್ರೆಸ್​ ಅನ್ನು ಕಳೆದ 70 ವರ್ಷಗಳಿಂದ ನೋಡಿದ್ದೇವೆ. ಬರೀ ಗಿಮಿಕ್ಸ್ ಮಾಡಿಕೊಂಡು ಬಂದಿದ್ದಾರೆ ಎಂದರು.

ಇವರ ಕಾಲದಲ್ಲೂ ಬೆಲೆ ಹೆಚ್ಚಾಗಿತ್ತು. ನಿಮಗೆ ನಾನು ಒಂದು ಸವಾಲ್ ಹಾಕುತ್ತೇನೆ. ನಿಮ್ಮ ಆಡಳಿತ ಇರುವ ರಾಜ್ಯಗಳಲ್ಲಿ ವ್ಯಾಟ್ ಕಡಿಮೆ ಮಾಡಲು ಆಗುತ್ತಾ? ಎಂದು ಪ್ರಶ್ನಿಸಿದ ಶ್ರೀರಾಮುಲು ಕಾಂಗ್ರೆಸ್ ಅಂದ್ರೆ ಗಿಮಿಕ್ಸ್, ಗಿಮಿಕ್ಸ್ ಅಂದ್ರೆ ಕಾಂಗ್ರೆಸ್ ಎಂದು ಕುಹಕವಾಡಿದರು.

ಡೀಸೆಲ್​​ ಮತ್ತು ಪೆಟ್ರೋಲ್​​​ ಬೆಲೆ ನಮ್ಮ ರಾಜ್ಯದಲ್ಲಿ ಮಾತ್ರ ಹೆಚ್ಚಾಗಿಲ್ಲ. ಕಾಂಗ್ರೆಸ್ ಅಧಿಕಾರ ಇರುವ ರಾಜ್ಯದಲ್ಲಿ ವ್ಯಾಟ್ ಕಡಿಮೆ ಮಾಡಿದೆ. ತಾಕತ್ ಇದ್ರೆ ವ್ಯಾಟ್ ಕಡಿಮೆ ಮಾಡಿ ನೋಡಿ ಎಂದು ಸವಾಲ್​​ ಹಾಕಿದರು.

ಇದನ್ನೂ ಓದಿ: ‘ಅತ್ಯಂತ ಸಂತೋಷದಿಂದ ಅಧಿವೇಶನದಲ್ಲಿ ಭಾಗಿಯಾಗುತ್ತಿದ್ದೇನೆ’- ಬಿಎಸ್​ವೈ ಹೀಗಂದಿದ್ಯಾಕೆ?

ಮೋದಿ, ಬೊಮ್ಮಾಯಿ ಉತ್ತಮ ಆಡಳಿತ ಮಾಡುತ್ತಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಏರಿಳಿತವಾಗುತ್ತಿದೆ ಇದನ್ನು ಗಮನಿಸಿ. ಅಲ್ಲಿ ಕಡಿಮೆ ಮಾಡಿ ಇಲ್ಲಿ ಎತ್ತಿನ ಗಾಡಿ, ಸೈಕಲ್​​ನಲ್ಲಿ ಬನ್ನಿ ಎಂದು ಕಿಡಿಕಾರಿದರು.

Source: newsfirstlive.com Source link