ಪೆಟ್ರೋಲ್​​ ಸುರಿದು ಬೆಂಕಿ ಹಚ್ಚಿ ಗಂಡನನ್ನೇ ಕೊಂದ ಹೆಂಡತಿ

ಪೆಟ್ರೋಲ್​​ ಸುರಿದು ಬೆಂಕಿ ಹಚ್ಚಿ ಗಂಡನನ್ನೇ ಕೊಂದ ಹೆಂಡತಿ

ತುಮಕೂರು: ಪೆಟ್ರೋಲ್​​ ಸುರಿದು ಬೆಂಕಿ ಹಚ್ಚಿ ಗಂಡನನ್ನು ಹೆಂಡತಿ ಕೊಂದ ದುರಂತ ಘಟನೆ ತುಮಕೂರಿನಲ್ಲಿ ನಡೆದಿದೆ. ತುಮಕೂರು ನಗರದ ಬಡ್ಡಿಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ನಾರಾಯಣ (52) ಮೃತ ದುರ್ದೈವಿ.

ಕೌಟುಂಬಕ ಕಲಹದಿಂದ ಪ್ರತಿನಿತ್ಯ ಗಂಡ ಮತ್ತು ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು. ಸುಮಾರು ಎಂಟು ವರ್ಷಗಳಿಂದ ನಡೆಯುತ್ತಿದ್ದ ಜಗಳ ಈಗ ಕೊಲೆಯಲ್ಲಿ ಅಂತ್ಯವಾಗಿದೆ.

ಅನ್ನಪೂರ್ಣ (45) ಪತಿಯನ್ನೇ ಕೊಲೆಗೈದ ಪಾಪಿ ಪತ್ನಿ. ಪೆಟ್ರೋಲ್ ಸುರಿದು ಕೊಲೆ ಮಾಡಿ ಗಂಡ ಮೃತ ದೇಹವನ್ನು ಚರಂಡಿಗೆ ಬಿಸಾಡಿದ್ದಾಳೆ.
ಇನ್ನು, ಅನ್ನಪೂರ್ಣಗೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ.

ಇದನ್ನೂ ಓದಿ: ‘ಬಿಜೆಪಿ ಸರ್ಕಾರ ಜನರ ರಕ್ತ ಹೀರುತ್ತಿದೆ’ ಸಿದ್ದರಾಮಯ್ಯ ಕಿಡಿ

ನೆಲಮಂಗಲ ಟೋಲ್ ಬಳಿಯ ಖಾಸಗಿ ಕಂಪನಿಯಲ್ಲಿ ನಾರಾಯಣ ಕೆಲಸ ಮಾಡುತ್ತಿದ್ದರು. ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Source: newsfirstlive.com Source link