ಧೋನಿ ಮತ್ತು ರವಿಶಾಸ್ತ್ರಿ ನಡುವೆ ಸಮನ್ವಯ ಕೊರತೆ; ಕಪಿಲ್ ದೇವ್​​​​​ ಹೇಳಿದ್ದೇನು?

ಧೋನಿ ಮತ್ತು ರವಿಶಾಸ್ತ್ರಿ ನಡುವೆ ಸಮನ್ವಯ ಕೊರತೆ; ಕಪಿಲ್ ದೇವ್​​​​​ ಹೇಳಿದ್ದೇನು?

ಟೀಮ್​ ಇಂಡಿಯಾ ಮೆಂಟರ್​​ ಆಗಿ ಧೋನಿ ಆಯ್ಕೆಯಾಗಿರೋದು ಕ್ರಿಕೆಟ್​ ಅಭಿಮಾನಿಗಳಿಗೆ ಖುಷಿಯ ವಿಚಾರ. ಆದರೆ ಕ್ರಿಕೆಟ್​​​ಗೆ ನಿವೃತ್ತಿ ಘೋಷಿಸಿದ ಒಂದು ವರ್ಷದಲ್ಲೇ ತಂಡಕ್ಕೆ ಮರಳಿರೋದು, ಸರಿಯಲ್ಲ ಅಂತಿದ್ದಾರೆ ಮಾಜಿ ಕ್ರಿಕೆಟರ್ಸ್​​.!

ಮಹೇಂದ್ರ ಸಿಂಗ್ ಧೋನಿ. ಟೀಮ್​ ಇಂಡಿಯಾದ ಗ್ರೇಟ್​ ಲೀಡರ್ ಆ್ಯಂಡ್​ ಲೆಜೆಂಡ್​​​​. ಸದ್ಯ ಟಿ20 ವಿಶ್ವಕಪ್​​​ಗೆ ತಂಡದ ಮೆಂಟರ್​ ಆಗಿ ಆಯ್ಕೆಯಾಗಿದ್ದಾರೆ. ಚುಟುಕು ಸಮರಕ್ಕೆ ಟೀಮ್​ ಅನೌನ್ಸ್​ ಮಾಡಿದ್ದಕ್ಕಿಂತ, ಧೋನಿ ಹೆಸರು ಸದ್ದು ಮಾಡಿದ್ದೇ ಹೆಚ್ಚು. ಧೋನಿ ಆಯ್ಕೆ ಕೆಲವರನ್ನ ಹುಬ್ಬೇರಿಸುವಂತೆ ಮಾಡಿದ್ರೆ, ಮತ್ತೇ ಕೆಲವರು ಧೋನಿಯ ನೇಮಕಾತಿಯು ವಿಶೇಷ ಪ್ರಕರಣದಂತೆ ತೋರುತ್ತೆ. ಇದೊಂದು ಬಿಸಿಸಿಐ ನೀಡಿರುವ ಮಾಸ್ಟರ್​​​ಸ್ಟ್ರೋಕ್​ ಅಂತ ವಿಶ್ಲೇಷಣೆ ಮಾಡ್ತಿದ್ದಾರೆ.

blank

ದಿಗ್ಗಜ ಕಪಿಲ್​ದೇವ್​ ಕೂಡ ಸ್ವಾಗತಿಸಿದ್ದು, ಸಲಹೆಯೊಂದನ್ನ ಬಿಸಿಸಿಐ ಮುಂದಿಟ್ಟಿದ್ದಾರೆ. ಮೆಂಟರ್​ ಆಗಿ ಧೋನಿ ಆಯ್ಕೆ ಸ್ವಾಗತಾರ್ಹ. ಆದರಿದು ತಂಡದ ಆಟಗಾರರಿಗೆ ಹೊಡೆತ ಬೀಳಲಿದೆ ಅನ್ನೋದು ಕಪಿಲ್ ಅಭಿಪ್ರಾಯ. ಅಂತರಾಷ್ಟ್ರೀಯ ಕ್ರಿಕೆಟ್​​​ಗೆ ನಿವೃತ್ತಿ ಘೋಷಿಸಿದ ಆಟಗಾರನನ್ನ, ಪುನಃ ತಂಡದಲ್ಲಿ ಯಾವುದಾದರೊಂದು ಜವಾಬ್ದಾರಿ ನೀಡಿ ಮರಳಿ ಕರೆತರಬೇಕಾದರೆ, ಕನಿಷ್ಠ 3-4 ವರ್ಷಗಳ ಅಂತರವಿರಬೇಕು. ಆದರೆ ಧೋನಿಯನ್ನ ಕೇವಲ ಒಂದು ವರ್ಷದ ನಂತರ ವಾಪಸ್​​​ ತಂದಿರೋದು ಒಂದು ವಿಶೇಷ ಪ್ರಕರಣ ಅನ್ನೋದು ಕಪಿಲ್​ ಮಾತಿನ ಅರ್ಥವಾಗಿದೆ.

ಧೋನಿ ಆಯ್ಕೆ ಆಟಗಾರರ ಮೇಲೆ ಪರಿಣಾಮ ಬೀರುವ ಸಾಧ್ಯತೆ.?
ಮೆಂಟರ್​​ ಆಗಿ ಧೋನಿಯನ್ನ ನೇಮಕ ಮಾಡಿರೋದಕ್ಕೆ, ನೂರಾರು ಕಾರಣಗಳು ಬಿಸಿಸಿಐ ಮುಂದಿರಬಹುದು. ಆದರೆ ಧೋನಿಗೆ ವಹಿಸುವ ಜವಾಬ್ದಾರಿ ಹೇಗಿರಲಿದೆ ಅನ್ನೋದು, ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ. ಅಂದರೆ ಹೆಡ್​​ಕೋಚ್ ರವಿ ಶಾಸ್ತ್ರಿ ಜೊತೆಗೆ ಸಹಾಯಕ ಕೋಚ್​​ಗಳು ಕೂಡ ಇರಲಿದ್ದು, ಮೈದಾನದ ಹೊರಗಡೆ ಸೇವೆ ಸಲ್ಲಿಸಲಿದ್ದಾರೆ. ಈ ಹಿನ್ನೆಲೆ ಮೆಂಟರ್ ಮತ್ತು ಹೆಡ್​ಕೋಚ್ ನಡುವೆ ಹೆಚ್ಚಿನ ಸಮನ್ವಯತೆ ಅವಶ್ಯಕ. ಹಾಗಾಗಿ ಇಬ್ಬರ ಜವಾಬ್ದಾರಿ ಹೇಗೆ.? ಒಂದಕ್ಕಿಂತ ಒಂದು ಭಿನ್ನ ಅನ್ನೋದ್ರೆ ಬಗ್ಗೆ ಗೊಂದಲ ಉಂಟಾಗಿದೆ. ಈ ಕಾರಣ ಆಟಗಾರರ ಮೇಲೆ ಪರಿಣಾಮ ಬೀರೋದು ಹೆಚ್ಚು.!

blank

ಇನ್ನು ಟೀಮ್​ ಇಂಡಿಯಾ ಕ್ಯಾಪ್ಟನ್​ – ಕೋಚ್​ ರವಿ ಶಾಸ್ತ್ರಿ ನಡುವೆ ಅಂಡರ್​ಸ್ಟಾಂಡಿಂಗ್​ ಇದೆ. ಹಾಗೇ ಕೊಹ್ಲಿ – ಧೋನಿ ಮಧ್ಯೆ ಕೂಡ ಅದ್ಭುತ ಕೆಮಿಸ್ಟ್ರಿ ಇದೆ. ಹಾಗಾಗಿ ಶಾಸ್ತ್ರಿ ಮತ್ತು ಧೋನಿ ಬೇರೆ ಬೇರೆ ಅಭಿಪ್ರಾಯಗಳನ್ನ ವ್ಯಕ್ತಪಡಿಸಿದ್ರೆ ಕೊಹ್ಲಿ ಇಬ್ಬಂದಿತನಕ್ಕೆ ಬೀಳಬೇಕಾಗುತ್ತದೆ. ಹಾಗೇ ನಿರ್ಧಾರಗಳನ್ನ ತೆಗೆದುಕೊಳ್ಳುವುವಾಗ ಒಮ್ಮತ ಅಗತ್ಯ. ನಾನು ಹೇಳಿದ್ದೇ ಸರಿ ಅಂತ ಇಬ್ಬರಲ್ಲಿ ಒಬ್ಬ ಹೇಳಿದರೆ ಅಂತ ಕೊಹ್ಲಿಗೆ ತಲೆನೋವಾಗಿ ಪರಿಣಮಿಸಲಿದೆ.

ಕಳೆದ ವರ್ಷ ಆಗಸ್ಟ್​​ 16ರಂದು ಅಂತಾರಾಷ್ಟ್ರೀಯ ಕ್ರಿಕೆಟ್​​​​ ನಿವೃತ್ತಿಗೆ ಹೇಳಿ ಒಂದು ವರ್ಷವಾಗಿದೆ. ಹಾಗಾಗಿ ಕಪಿಲ್​ದೇವ್​​ ಈ ಅಭಿಪ್ರಾಯ ಹೊರಹಾಕಿದ್ದಾರೆ. ಒಟ್ಟಿನಲ್ಲಿ ಧೋನಿ ತಂಡ ಸೇರಿರೋದು ಕೊಹ್ಲಿ ಪಡೆಯ ಬಲ ಹೆಚ್ಚಿಸಿದೆ. ಆದ್ರೆ ಧೋನಿ ನಿವೃತ್ತಿ ಹೇಳಿದ ವರ್ಷದ ಬಳಿಕವೇ, ಟೀಮ್ ಇಂಡಿಯಾ ಮೆಂಟರ್ ಆಗಿದ್ದು ಎಷ್ಟು ಸರಿ ಅನ್ನೋದು, ದಿಗ್ಗಜ ಕ್ರಿಕೆಟಿಗರ ಪ್ರಶ್ನೆಯಾಗಿದೆ.

Source: newsfirstlive.com Source link