ವಿಧಾನಸೌಧದಲ್ಲಿ ನಡೀತಿದ್ಯಾ ಎಣ್ಣೆ ಪಾರ್ಟಿ? ಎರಡು ಬಿಯರ್​​ ಬಾಟಲ್​​​ ಪತ್ತೆಯಾಗಿದ್ದು ಹೇಗೆ?

ವಿಧಾನಸೌಧದಲ್ಲಿ ನಡೀತಿದ್ಯಾ ಎಣ್ಣೆ ಪಾರ್ಟಿ? ಎರಡು ಬಿಯರ್​​ ಬಾಟಲ್​​​ ಪತ್ತೆಯಾಗಿದ್ದು ಹೇಗೆ?

ಬೆಂಗಳೂರು: ವಿಧಾನಸೌಧದ ರೂಮ್​ ನಂಬರ್​ 208ರ ಪಕ್ಕದಲ್ಲಿ ಮಧ್ಯದ ಬಾಟಲಿಗಳು ಕಂಡು ಬಂದಿವೆ. ಹೀಗಾಗಿ ವಿಧಾನಸೌಧದಲ್ಲಿ ಎಣ್ಣೆ ಪಾರ್ಟಿ ನಡಿತಿದ್ಯಾ ಎಂಬ ಶಂಕೆ ವ್ಯಕ್ತವಾಗಿದೆ.

ಅಧಿವೇಶನದ ಹೊತ್ತಲ್ಲಿ, ಅಷ್ಟೊಂದು ಬಿಗಿ ಭದ್ರೆತಯ ನಡವೆಯೂ ಬಿಯರ್​ ಬಾಟಲಿಗಳು ವಿಧಾನಸೌಧ ಪ್ರವೇಶಿಸಿದ್ದು ಹೇಗೆ ಎಂಬ ಕೂತೂಹಲ ಎಲ್ಲರಲ್ಲಿ ಮೂಡಿದೆ. ರಾತ್ರಿಯಾಗಿ ಬೆಳಗಾಗುವ ಹೊತ್ತಿಗೆ 208 ರೂಂ ಪಕ್ಕದ ವಾಟರ್ ಟ್ಯಾಂಕ್ ಬಳಿ 2 ಬಿಯರ್ ಬಾಟಲ್ ಗಳು ಪತ್ತೆಯಾಗಿದೆ. ಸದ್ಯ ವಿಧಾನಸೌಧದಲ್ಲಿ ಬಿಯರ್ ಬಾಟಲ್ ಗಳನ್ನು ಇಟ್ಟಿರೋ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು ಸ್ಪೀಕರ್​ ತನಿಖೆಗೆ ಆದೇಶ ನೀಡುವ ಸಾಧ್ಯತೆಗಳಿವೆ ಎನ್ನಲಾಗ್ತಿದೆ.

ಇದನ್ನೂ ಓದಿ: ‘ಪ್ರಾಣಿಗಳಿಗೆ ತೊಂದ್ರೆ ಕೊಡೋ ಬದ್ಲು ಸೈಕಲ್​ನಲ್ಲಿ ಬಂದಿದ್ದರೆ ಚೆನ್ನಾಗಿರ್ತಿತ್ತು’ ಸುಧಾಕರ್ ಟಾಂಗ್

ಇದನ್ನೂ ಓದಿ:‘ಬಿಜೆಪಿ ಸರ್ಕಾರ ಜನರ ರಕ್ತ ಹೀರುತ್ತಿದೆ’ ಸಿದ್ದರಾಮಯ್ಯ ಕಿಡಿ

Source: newsfirstlive.com Source link