ದೇವಾಲಯ ಏಕಾಏಕಿ ತೆರವಿಗೆ ಇಂದೇ ಅಧಿಕೃತ ಬ್ರೇಕ್ ಹಾಕ್ತಾರಾ ಸಿಎಂ?

-ಪ್ರತಾಪ್ ಸಿಂಹಗೆ ಸಿಎಂ ಕರೆ ಮಾಡಿ ಹೇಳಿದ್ದೇನೂ?

ಮೈಸೂರು: ಮೈಸೂರು ಜಿಲ್ಲೆಯ 92 ದೇವಾಲಯ ತೆರವು ಮಾಡುವ ಕಾರ್ಯಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಇಂದು ಅಧಿಕೃತವಾಗಿ ತಡೆ ನೀಡುವ ಆದೇಶ ಜಾರಿ ಮಾಡಲಿದ್ದಾರೆ ಎಂದು ವರದಿಯಾಗಿದೆ.

ಖುದ್ದು ಸಿಎಂ ಅವರೇ ಮೈಸೂರು ಸಂಸದ ಪ್ರತಾಪ್ ಸಿಂಹಗೆ ದೂರವಾಣಿ ಕರೆ ಮಾಡಿ ದೇವಸ್ಥಾನಗಳ ರಕ್ಷಣೆಗೆ ನಾವು ಬದ್ಧ. ಸುಪ್ರೀಂಕೋರ್ಟ್ ಆದೇಶದಲ್ಲಿ ಎಲ್ಲೂ ಏಕಾಏಕಿ ದೇವಸ್ಥಾನ ತೆರವು ಮಾಡಿ ಎಂದು ಸೂಚಿಸಿಲ್ಲ. ಅಧಿಕಾರಿಗಳು ಸುಪ್ರೀಂಕೋರ್ಟ್ ಆದೇಶವನ್ನು ತಪ್ಪಾಗಿ ಅರ್ಥ ಮಾಡಿಕೊಂಡಂತಿದೆ. ಹೀಗಾಗಿ, ತೆರವು ದಿನಾಂಕದ ಆದೇಶಕ್ಕೆ ಸದ್ಯಕ್ಕೆ ತಡೆ ನೀಡುವ ಆದೇಶ ಮಾಡುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಿಂದೂ ದೇವಸ್ಥಾನ ಟಾರ್ಗೆಟ್ ಮಾಡಿ ಧ್ವಂಸ ಮಾಡಲಾಗುತ್ತಿದೆ: ಪ್ರತಾಪ್ ಸಿಂಹ

ಪ್ರತಾಪ್ ಸಿಂಹ ಅವರೇ ಈ ವಿಚಾರವನ್ನು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದು, ನ್ಯಾಯಾಲಯದ ಆದೇಶವನ್ನು ಗೌರವಿಸಿ ಅವರ ನಿರ್ದೇಶನದಂತೆ ದೇವಸ್ಥಾನವನ್ನು ಉಳಿಸಿಕೊಳ್ಳುವ ಒಂದು ವಿಧಾನವನ್ನು ಬಳಸಿಕೊಳ್ಳಲಾಗುವುದು. ಸಿಎಂ ಕಾನೂನು ತಜ್ಞರ ಸಲಹೆ ಪಡೆದು ಆದೇಶ ಮಾಡಲಿದ್ದಾರೆ. ಹೀಗಾಗಿ, ದೇವಸ್ಥಾನ ತೆರವಾಗುತ್ತದೆ ಎಂಬ ನಮ್ಮ ಆತಂಕ ಸದ್ಯಕ್ಕೆ ನಿವಾರಣೆ ಆಗಿದೆ. ಮುಸ್ಲಿಂ ಧಾರ್ಮಿಕ ಕೇಂದ್ರಗಳ ರಕ್ಷಣೆಗೆ ವಕ್ಫ್ ಬೋರ್ಡ್ ಇದೆ. ಇದೇ ಮಾದರಿಯಲ್ಲಿ ಹಿಂದೂ ದೇವಾಲಯಗಳ ರಕ್ಷಣೆಗೂ ಬೋರ್ಡ್ ಅವಶ್ಯಕತೆ ಇದೆ. ಇದನ್ನು ಸಿಎಂ ಗಮನಕ್ಕೆ ತಂದಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹೆಣ್ಣು ಬಳೆ ತೊಟ್ಟಿದ್ದಾಳೆ ಅಂದರೆ ಅಬಲೆ ಅಂತಾನಾ? – ತನ್ವೀರ್ ಸೇಠ್ ವಿರುದ್ಧ ಪ್ರತಾಪ್ ಸಿಂಹ ಕಿಡಿ

Source: publictv.in Source link