T20 ವಿಶ್ವಕಪ್​ಗೆ ಆಯ್ಕೆಯಾಗದವರಿಗೆ ಸುವರ್ಣಾವಕಾಶ; ಈ ಪ್ಲೇಯರ್ಸ್​ಗೆ ಒಲಿಯುತ್ತಾ ಅದೃಷ್ಟ.?

T20 ವಿಶ್ವಕಪ್​ಗೆ ಆಯ್ಕೆಯಾಗದವರಿಗೆ ಸುವರ್ಣಾವಕಾಶ; ಈ ಪ್ಲೇಯರ್ಸ್​ಗೆ ಒಲಿಯುತ್ತಾ ಅದೃಷ್ಟ.?

ಮುಂಬರುವ ಟಿ20 ವಿಶ್ವಕಪ್​ಗೆ ಟೀಮ್​ ಇಂಡಿಯಾ ಪ್ರಕಟವಾಗಿದೆ. ಆದರೆ ಈ ತಂಡದಲ್ಲಿ ಪ್ರಮುಖ ಆಟಗಾರರ ಹೆಸರುಗಳು ಕಾಣೆಯಾಗಿವೆ. ಇದೀಗ ಕೈ ಬಿಟ್ಟಿರುವ ಆಟಗಾರರು ತಂಡದಲ್ಲಿ ಸ್ಥಾನ ಪಡೆಯೋಕೆ ಮತ್ತೊಂದು ಅವಕಾಶ ಹುಡುಕಿಕೊಂಡು ಬಂದಿದೆ.

ಟಿ20 ವಿಶ್ವಕಪ್​​ಗೆ ಈಗಾಗಲೇ ಆಯಾ ಕ್ರಿಕೆಟ್​ ಮಂಡಳಿಗಳು, ತಂಡಗಳನ್ನ ಪ್ರಕಟಿಸಿವೆ. ಕೆಲವು ತಂಡಗಳು ಟಿ20 ಸ್ಪೆಷಲಿಸ್ಟ್​​​ಗಳನ್ನೇ ಕೈ ಬಿಟ್ಟಿರೋದು ಅಚ್ಚರಿ ಮೂಡಿಸಿದೆ. ಇದೀಗ ಫಾರ್ಮ್​​​, ಫಿಟ್​​ನೆಸ್​ ಸಮಸ್ಯೆಯಿಂದಾಗಿ ತಂಡದಿಂದ ಕೈ ಬಿಡಲಾಗಿರುವ ಆಟಗಾರರಿಗೆ, ಮತ್ತೊಂದು ಸುವರ್ಣಾವಕಾಶ ಒದಗಿ ಬಂದಿದೆ.

blank

ಹೌದು..ಇತರೆ ಕ್ರಿಕೆಟ್​ ಮಂಡಳಿಗಳಂತೆ ಟೀಮ್​​ ಇಂಡಿಯಾದಲ್ಲೂ ಕೂಡ ಪ್ರಮುಖ ಆಟಗಾರರಿಗೆ ಕೊಕ್​ ನೀಡಲಾಗಿದೆ. ಬದಲಾಗಿ ಅಚ್ಚರಿ ಎಂಬಂತೆ ಕೆಲ ಪ್ಲೇಯರ್ಸ್​ಗೆ ಚಾನ್ಸ್​ ನೀಡಲಾಗಿದೆ. ಇದರಿಂದ ಸ್ಟಾರ್​​ ಪ್ಲೇಯರ್ಸ್​​​ಗೆ ಅವಕಾಶ ವಂಚಿತರನ್ನಾಗಿ ಮಾಡಿರೋದು, ಸರಿಯಲ್ಲ ಎಂಬ ವ್ಯಾಪಕ ಟೀಕೆಗಳು ಕೇಳಿ ಬಂದಿವೆ.

ಭಾರತ ತಂಡಕ್ಕೆ 10 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶಿಖರ್​​ ಧವನ್, ಪೃಥ್ವಿ ಶಾ, ಯಜುವೇಂದ್ರ ಚಹಲ್​, ಕುಲ್ದೀಪ್​ ಯಾದವ್​, ಮನೀಷ್​ ಪಾಂಡೆ, ಸಂಜು ಸ್ಯಾಮ್ಸನ್​, ಕೃನಾಲ್​ ಪಾಂಡ್ಯ, ಟಿ.ನಟರಾಜನ್, ನವದೀಪ್​​ ಸೈನಿ​. ಹೀಗೆ ಸ್ಟಾರ್​ ಆಟಗಾರರು, ವಿಶ್ವಕಪ್​ ತಂಡದಲ್ಲಿ ಸ್ಥಾನ ಪಡೆದಿಲ್ಲ. ಆದರೀಗ ಈ ಸ್ಟಾರ್​​​ ಪ್ಲೇಯರ್ಸ್​​ಗೆ ಅದೃಷ್ಟ ಬಾಗಿಲು ತೆರೆಯುವ ಸಮಯ ಬಂದಿದೆ.

blank

ಐಪಿಎಲ್​​ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಅವಕಾಶ.!ಹೌದು.! ಅವಕಾಶ ಪಡೆಯದ ಆಟಗಾರರಿಗೆ ಇದೊಂದು ಸುವರ್ಣಾವಕಾಶ ಎಂದೇ ಹೇಳಲಾಗ್ತಿದೆ. ಸೆಪ್ಟೆಂಬರ್​ 19ರಿಂದ 2ನೇ ಹಂತದ IPL ​ಆರಂಭವಾಗಲಿದೆ. ಈ ಟೂರ್ನಿಯಲ್ಲಿ ಈ ಆಟಗಾರರು ಅದ್ಭುತ ಪ್ರದರ್ಶನ ತೋರಿದ್ದೇ ಆದರೆ, ತಂಡಕ್ಕೆ ಆಯ್ಕೆ ಆಗುವ ಚಾನ್ಸ್​ ಸಿಗಲಿದೆ. ಟೂರ್ನಿಯಲ್ಲಿ ಇನ್ನೂ 31 ಪಂದ್ಯಗಳು ನಡೆಯಲಿದ್ದು, ಆಟಗಾರರು ತಮ್ಮನ್ನ ಪ್ರೂವ್​ ಮಾಡಿಕೊಳ್ಳೋಕೆ ಇದು ಬೆಸ್ಟ್​​ ಟೈಮ್​​ ಆಗಿದೆ.

blank

ಅಕ್ಟೋಬರ್​​ 10ರೊಳಗೆ ತಂಡದಲ್ಲಿ ಬದಲಾವಣೆ ಮಾಡಬಹುದು.!
ಅಕ್ಟೋಬರ್​ 17ರಿಂದ ವಿಶ್ವಕಪ್​​ಗೆ ಚಾಲನೆ ಸಿಗಲಿದೆ. ಅದರಲ್ಲೂ ವಿಶ್ವಕಪ್​​ಗೆ ಸೆಲೆಕ್ಟ್​​ ಆದ ಆಟಗಾರರಲ್ಲಿ ಇಂಜುರಿ ಅನುಭವಿಸಿದ್ರೆ, ಫಿಟ್​​ನೆಸ್​ ಸಮಸ್ಯೆ ಕಾಡಿದರೆ, ಆಟಗಾರರನ್ನ ರಿಪ್ಲೇಸ್​ ಮಾಡಿಕೊಳ್ಳಬಹುದು. ಅದು ಕೂಡ ಅಕ್ಟೋಬರ್​ 10ರೊಳಗೆ. ಅಲ್ಲಿಯವರೆಗೂ ತಂಡದಲ್ಲಿ ಬದಲಾವಣೆಗಳನ್ನ ಮಾಡಲು ಮಂಡಳಿಗಳಿಗೆ, ಅವಕಾಶ ನೀಡಲಾಗಿದೆ. ಒಟ್ನಲ್ಲಿ.. ಸದ್ಯ ಅವಕಾಶವಂಚಿತರಾಗಿರುವ ಆಟಗಾರರಿಗೆ, ಅಕ್ಟೋಬರ್​​​​ 10ರೊಳಗೆ ಅದೃಷ್ಟ ಖುಲಾಯಿಸುತ್ತಾ ಅನ್ನೋದನ್ನ ಕಾದುನೋಡಬೇಕಿದೆ.

blank

Source: newsfirstlive.com Source link