ಜಿಲ್ಲಾ ಉಸ್ತುವಾರಿ ಬದಲಾವಣೆ; ಸಚಿವ ಹಾಲಪ್ಪ ಆಚಾರ್​​​ಗೆ ರಾಯಚೂರು ಹೊಣೆ

ಜಿಲ್ಲಾ ಉಸ್ತುವಾರಿ ಬದಲಾವಣೆ; ಸಚಿವ ಹಾಲಪ್ಪ ಆಚಾರ್​​​ಗೆ ರಾಯಚೂರು ಹೊಣೆ

ಬೆಂಗಳೂರು: ರಾಯಚೂರು ಉಸ್ತುವಾರಿ ಸಚಿವರ ಬದಲಾವಣೆಯಾಗಿದೆ. ಸಚಿವ ವಿ. ಸೋಮಣ್ಣ ಬದಲಾಗಿ ಗಣಿ ಮತ್ತು ಭೂ ವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ್​ಗೆ ರಾಯಚೂರು ಉಸ್ತುವಾರಿಯನ್ನು ವಹಿಸಲಾಗಿದೆ.

ಈ ಕುರಿತು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಆದೇಶ ಹೊರಡಿದ್ದಾರೆ. ಕೊಪ್ಪಳ ಜಿಲ್ಲೆಯ ಉಸ್ತುವಾರಿಯ ಜೊತೆ ರಾಯಚೂರು ಜಿಲ್ಲಾ ಉಸ್ತುವಾರಿಯನ್ನು ಸಚಿವ ಹಾಲಪ್ಪ ಆಚಾರ್​ಗೆ ನೀಡಲಾಗಿದೆ.

ಇದನ್ನೂ ಓದಿ: ಪ್ರತಿಭಟನೆ ವೇಳೆ ಬೆದರಿದ ಎತ್ತು; ಡಾ.ಜಿ ಪರಮೇಶ್ವರ್ ಸೇರಿ ನೆಲಕ್ಕೆ ಬಿದ್ದ ಕಾಂಗ್ರೆಸ್​​ ನಾಯಕರು

Source: newsfirstlive.com Source link