ಕರ್ನಾಟಕಕ್ಕೆ ಅನೇಕ ಯೋಜನೆಗಳನ್ನ ತಂದಿದ್ದ ಸರದಾರ ಆಸ್ಕರ್‌ ಫರ್ನಾಂಡಿಸ್‌..!

ಕರ್ನಾಟಕಕ್ಕೆ ಅನೇಕ ಯೋಜನೆಗಳನ್ನ ತಂದಿದ್ದ ಸರದಾರ ಆಸ್ಕರ್‌ ಫರ್ನಾಂಡಿಸ್‌..!

ದೇಶ ಕಂಡ ಸರಳ ಸಜ್ಜನ ರಾಜಕಾರಣಿ ಆಸ್ಕರ್ ಫರ್ನಾಂಡಿಸ್​​​​ ಕರ್ನಾಟಕಕ್ಕೆ ನೀಡಿದ ಕೊಡುಗೆ ಅಪಾರ. 2009ರಲ್ಲಿ ಕೇಂದ್ರದಲ್ಲಿ ಮತ್ತೊಮ್ಮೆ ಯುಪಿಎ ಸರ್ಕಾರ ಅಧಿಕಾರದ ಗದ್ದುಗೆ ಹಿಡಿದಿತ್ತು.. ಆಗ ಮನಮೋಹನ್‌ ಎರಡನೇ ಅವಧಿಗೆ ಪ್ರಧಾನಿಯಾಗಿ ಮುಂದುವರಿದಿದ್ದರು. ಈ ವೇಳೆ ಆಸ್ಕರ್‌ ಫರ್ನಾಂಡಿಸ್‌ಗೆ ಯಾವುದೇ ಸಚಿವ ಖಾತೆಯನ್ನು ನೀಡಿರಲಿಲ್ಲ.

ಬದಲಿಗೆ ಆಸ್ಕರ್ ಫರ್ನಾಂಡಿಸ್ ಅವರಿಗೆ ಪಕ್ಷ ಸಂಘಟನೆಯ ಜವಾಬ್ದಾರಿಯನ್ನು ನೀಡಲಾಗಿತ್ತು. ಕೆಲವು ರಾಜ್ಯಗಳ ಉಸ್ತುವರಿಯನ್ನು ನೀಡಲಾಗಿತ್ತು. ತಮಗೆ ವಹಿಸಿದ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಿದ್ರು. ಇದೇ ಕಾರಣಕ್ಕೆ ಆಸ್ಕರ್‌ ಫರ್ನಾಂಡಿಸ್‌ಗೆ ಸಚಿವ ಸ್ಥಾನ ನೀಡಬೇಕು ಅನ್ನೋ ಕೂಗು ಹೈಕಮಾಂಡ್‌ನಲ್ಲಿ ಕೇಳಿಬಂದಿತ್ತು.

ಹೀಗಾಗಿ 2013 ಜೂನ್‌ 17 ರಂದು ರಾಷ್ಟ್ರೀಯ ಹೆದ್ದಾರಿ ಮತ್ತು ಭೂಸಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ. ರಾಜ್ಯದ ಅನೇಕ ಹೆದ್ದಾರಿ ನಿರ್ಮಾಣಕ್ಕೆ ಅನುದಾನ ನೀಡುತ್ತಾರೆ. ಆದ್ರೆ, 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋತು ಅಧಿಕಾರವನ್ನು ಕಳೆದುಕೊಳ್ಳುತ್ತದೆ. ಆಸ್ಕರ್‌ ಫರ್ನಾಂಡಿಸ್‌ ಕೇವಲ 344 ದಿನಗಳ ಕಾಲ ಮಾತ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವರಾಗಿ ಕಾರ್ಯನಿರ್ವಹಿಸಿರುತ್ತಾರೆ. ಇವರ ಅವಧಿಯಲ್ಲಿ ಹಲವು ಯೋಜನೆಗಳನ್ನು ರಾಜ್ಯಕ್ಕೆ ತಂದಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫರ್ನಾಂಡಿಸ್ ವಿಧಿವಶ

Source: newsfirstlive.com Source link