ನಿಖಿಲ್ ಗೌಡ ಪತ್ನಿ ರೇವತಿಗೆ ಸೀಮಂತ: ದೇವೇಗೌಡ ಕುಟುಂಬದಲ್ಲಿ ಸಂತಸ

ನಿಖಿಲ್ ಗೌಡ ಪತ್ನಿ ರೇವತಿಗೆ ಸೀಮಂತ: ದೇವೇಗೌಡ ಕುಟುಂಬದಲ್ಲಿ ಸಂತಸ

ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡರ ಮುದ್ದಿನ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ತಂದೆಯಾಗುವ ವಿಚಾರ ಈ ಹಿಂದೆಯೇ ಅಭಿಮಾನಿಗಳಲ್ಲಿ ಖುಷಿ ತಂದಿತ್ತು. ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿಯವರಿಗೆ ಇಂದು ಸೀಮಂತ ಕಾರ್ಯಕ್ರಮ ನೆರವೇರಿದೆ.

blank

ನಗರದ ಎಚ್​ಎಸ್​ಆರ್ ಲೇಔಟ್​ನಲ್ಲಿನ ಮಾನ್ವಿ ಕನ್ವೆನ್ಷನ್ ಹಾಲ್​ನಲ್ಲಿ ದೇವೇಗೌಡರು ಕುಟುಂಬದವರು ಮತ್ತು ಆಪ್ತರ ಸಮ್ಮುಖದಲ್ಲಿ ರೇವತಿಯವರ ಸೀಮಂತ ಕಾರ್ಯಕ್ರಮ ನಡೆದಿದೆ.

blank

ಇತ್ತೀಚೆಗೆ ನಿಖಿಲ್ ಮತ್ತು ರೇವತಿ ಮನೆಯಲ್ಲಿ ಗಣೇಶ ಚತುರ್ಥಿಯನ್ನೂ ಸಂಭ್ರಮದಿಂದ ಆಚರಿಸಿದ್ದರು. ಈ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲೂ ಹಂಚಿಕೊಂಡಿದ್ದರು. ಇನ್ನು ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಿಖಿಲ್ ದಂಪತಿಗೆ ಅಭಿಮಾನಿಗಳು ಸೇರಿದಂತೆ ಎಲ್ಲರೂ ಶುಭ ಹಾರೈಸಿದ್ದಾರೆ.

blank

Source: newsfirstlive.com Source link