ವಿಧಾನಸೌಧದಲ್ಲಿ ಮೊದಲ ಸಾಲಿನಲ್ಲಿ ಕೂರುತ್ತಿದ್ದ ಬಿಎಸ್​ವೈಗೆ ಈಗ ಲಾಸ್ಟ್​ ಬೆಂಚ್..!

ವಿಧಾನಸೌಧದಲ್ಲಿ ಮೊದಲ ಸಾಲಿನಲ್ಲಿ ಕೂರುತ್ತಿದ್ದ ಬಿಎಸ್​ವೈಗೆ ಈಗ ಲಾಸ್ಟ್​ ಬೆಂಚ್..!

ಬೆಂಗಳೂರು: ಹಲವು ವಿಶೇಷಗಳಿಗೆ ಈ ಬಾರಿಯ ವಿಧಾನಸಭೆ ಅಧಿವೇಶನ ಕಾರಣವಾಗಿದೆ. ಕಳೆದ ಬಾರಿ ಮೊದಲ ಸೀಟಲ್ಲಿದ್ದವರು ಕೊನೆ ಸಾಲಿಗೆ ಶಿಫ್ಟ್ ಆಗಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪರಿಗೆ ಈ ಬಾರಿ ಸದನದಲ್ಲಿ ಲಾಸ್ಟ್ ಬೆಂಚ್ ನೀಡಲಾಗಿದೆ. ಜಗದೀಶ್​​ ಶೆಟ್ಟರ್, ಸುರೇಶ್ ಕುಮಾರ್ ಕೂಡ ಹಿಂದಿನ ಸಾಲಿಗೆ ಶಿಫ್ಟ್ ಆಗಿದ್ದಾರೆ.

ಇನ್ನು, ಹೊಸ ಸಚಿವರು ಕಲಾಪದಲ್ಲಿ ಮೊದಲ ಸಾಲಿಗೆ ಬಡ್ತಿ ಪಡೆದುಕೊಂಡಿದ್ದಾರೆ. ಮಾಧುಸ್ವಾಮಿ ಮೊದಲ ಸಾಲಿನ 3ನೇ ಸ್ಥಾನದ ಬದಲು 5ನೇ ಸೀಟ್​ಗೆ ಶಿಫ್ಟ್ ಆಗಿದ್ದಾರೆ. ಸದನ ವೀಕ್ಷಣೆಗೆ ಬೆಳಗಾವಿ ಮಹಾನಗರ ಪಾಲಿಕೆ ಬಿಜೆಪಿ ಸದಸ್ಯರು ಬಂದಿರುವು ಕೂಡ ಒಂದು ವಿಶೇಷವೇ.

ಇದನ್ನೂ ಓದಿ: ’70 ವರ್ಷಗಳಿಂದ ಕಾಂಗ್ರೆಸ್​ದು ಬರೀ ಗಿಮಿಕ್ಸ್​ ಅಷ್ಟೇ’- ಸಚಿವ ಶ್ರೀರಾಮುಲು ವ್ಯಂಗ್ಯ

Source: newsfirstlive.com Source link