ನಾವೆಲ್ಲ ಅವರನ್ನ ಗೌರವಿಸುತ್ತೇವೆ.. ಆಸ್ಕರ್ ಪತ್ನಿಗೆ ಕರೆ ಮಾಡಿ ಸೋನಿಯಾ ಸಾಂತ್ವನ

ನಾವೆಲ್ಲ ಅವರನ್ನ ಗೌರವಿಸುತ್ತೇವೆ.. ಆಸ್ಕರ್ ಪತ್ನಿಗೆ ಕರೆ ಮಾಡಿ ಸೋನಿಯಾ ಸಾಂತ್ವನ

ಇಂದು ಇಹಲೋಕ ತ್ಯಜಿಸಿದ ಆಸ್ಕರ್ ಫರ್ನಾಂಡಿಸ್ ನಿಧನಕ್ಕೆ ಕಾಂಗ್ರೆಸ್​​ನ ತತ್ಕಾಲೀನ ಅಧ್ಯಕ್ಷೆ ಸೋನಿಯಾ ಗಾಂಧಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಆಸ್ಕರ್ ಫರ್ನಾಂಡಿಸ್ ಪತ್ನಿಗೆ ಕರೆ ಮಾಡಿದ್ದ ಅವರು, ನಾವೆಲ್ಲ ಅವರನ್ನು ಪ್ರೀತಿಸುತ್ತಿದ್ದೆವು.. ಅವರು ಅತ್ಯುತ್ತಮ ವ್ಯಕ್ತಿಯಾಗಿದ್ದರು.. ನಿಮ್ಮ ಜೊತೆ ಸಾಕಷ್ಟು ಸಿಹಿ ಕ್ಷಣಗಳನ್ನು ಬಿಟ್ಟು ಅವರು ಹೋಗಿದ್ದಾರೆ.. ಎಂದು ಹೇಳಿದ್ರು. ಅಲ್ಲದೇ, ಮುಂದಿನ ವಿಧಿ ವಿಧಾನದ ಬಗ್ಗೆಯೂ ಸೋನಿಯಾ ಗಾಂಧಿ ವಿಚಾರಿಸಿದ್ರು.

ಯುಪಿಎ-2ರ ಅವಧಿಯಲ್ಲಿ ಸೋನಿಯಾ ಗಾಂಧಿ ಆಪ್ತವಲಯದಲ್ಲಿ ಆಸ್ಕರ್ ಫರ್ನಾಂಡಿಸ್ ಗುರ್ತಿಸಿಕೊಂಡಿದ್ದರು. ಅಷ್ಟೇ ಅಲ್ಲ ಅಹ್ಮದ್ ಪಟೇಲ್​​​ರನ್ನು ಹೊರತು ಪಡಿಸಿದ್ರೆ ಆಸ್ಕರ್ ಅವರಲ್ಲಿ ನಂಬಿಕೆ ಇರಿಸಿದ್ದ ಸೋನಿಯಾ ಗಾಂಧಿ, ಹಲವು ಬಾರಿ ಸಲಹೆಗಳನ್ನು ಕೂಡ ಪಡೆಯುತ್ತಿದ್ದರು.

Source: newsfirstlive.com Source link