‘ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ‘ ಹಾಡಿಗೆ ಭರ್ಜರಿ ಸ್ಟೆಪ್​ ಹಾಕಿದ ದಾವಣಗೆರೆ ತಹಶೀಲ್ದಾರ್​

‘ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ‘ ಹಾಡಿಗೆ ಭರ್ಜರಿ ಸ್ಟೆಪ್​ ಹಾಕಿದ ದಾವಣಗೆರೆ ತಹಶೀಲ್ದಾರ್​

ದಾವಣಗೆರೆ: ಗಣೇಶ ಹಬ್ಬದ ನಿಮಿತ್ತ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ದಾವಣಗೆರೆ ತಹಶೀಲ್ದಾರ್ ಗಣಪತಿ ಹಬ್ಬ ಆಚರಿಸಿ ​ಕುಣಿದು ಕುಪ್ಪಳಿಸಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

blank

ಜಿಲ್ಲೆಯ ತುರ್ಚಘಟ್ಟ ಬಳಿ ಇರುವ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡಿದ್ದ ತಹಶೀಲ್ದಾರ್ ಗಿರೀಶ್ ನಿರಾಶ್ರಿತರಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಮನರಂಜನಾ ಕಾರ್ಯಕ್ರಮ ಏರ್ಪರ್ಡಿಸಿದ್ದಾರೆ. ಗಣಪತಿ ವಿಸರ್ಜನೆ ದಿನ ನಿರಾಶ್ರಿತರೊಂದಿಗೆ ಕುಣಿದು ಕುಪ್ಪಳಿಸಿದ ಅವರು, ಕುಲದಲ್ಲಿ‌ ಕೀಳ್ಯಾವುದೋ ಹುಚ್ಚಪ್ಪ ಹಾಡಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದ್ದಾರೆ. ತಹಶೀಲ್ದಾರ್​ ನಿರಾಶ್ರಿತರೊಂದಿಗೆ ಕುಣಿದ ವಿಡಿಯೋ ಸದ್ಯಕ್ಕೆ ವೈರಲ್​ ಆಗಿದೆ.

blank

Source: newsfirstlive.com Source link