ಧವನ್​ ಕರಿಯರ್​ಗೆ ಬಿತ್ತಾ ಬ್ರೇಕ್​.? ಶಿಖರ್​ ಸ್ಥಾನಕ್ಕಾಗಿ ಇಬ್ಬರ ನಡುವೆ ನಡೆಯುತ್ತಿದೆ ತೀವ್ರ ಪೈಪೋಟಿ

ಧವನ್​ ಕರಿಯರ್​ಗೆ ಬಿತ್ತಾ ಬ್ರೇಕ್​.? ಶಿಖರ್​ ಸ್ಥಾನಕ್ಕಾಗಿ ಇಬ್ಬರ ನಡುವೆ ನಡೆಯುತ್ತಿದೆ ತೀವ್ರ ಪೈಪೋಟಿ

ಟಿ-ಟ್ವೆಂಟಿ ಸಮರಕ್ಕೆ ಭಾರತ ತಂಡ ಪ್ರಕಟಗೊಂಡ ನಂತರ, ಹೆಚ್ಚು ಮುನ್ನೆಲೆಗೆ ಬಂದ ಚರ್ಚಾ ವಿಷಯ ಅಂದರೆ, ಅದು ಶಿಖರ್ ಧವನ್​​ ಬಗ್ಗೆ.! ಇದೀಗ ಚರ್ಚೆಯ ಕಾವು ತಣ್ಣಗಾಗುತ್ತಿರುವ ಬೆನ್ನಲ್ಲೆ, ಮತ್ತೊಂದು ಚರ್ಚೆಯಾಗ್ತಿದೆ. ಅದು ಧವನ್​ ಸ್ಥಾನಕ್ಕೆ ಯಾರು ಅನ್ನೋದು.

blank

ಟಿ20 ವಿಶ್ವಕಪ್​​ಗೆ ಟೀಮ್​ ಇಂಡಿಯಾ ಓಪನರ್​ ಶಿಖರ್​​ ಧವನ್​ ಹೆಸರನ್ನ ಬಿಸಿಸಿಐ ಕೈ ಬಿಟ್ಟಿದ್ದು, ಕ್ರಿಕೆಟ್ ಸರ್ಕಲ್​​ನಲ್ಲಿ ಹೆಚ್ಚು ಸದ್ದು ಮಾಡ್ತು. ಹಾಗೇ ಮಾಜಿ ಕ್ರಿಕೆಟಿಗರ ಟೀಕೆಗೂ ಆಹಾರವಾಯ್ತು. ಆದರೀಗ ಧವನ್​​ ಸ್ಥಾನವನ್ನ ಸಮರ್ಥವಾಗಿ ತುಂಬೋದು ಯಾರು ಅನ್ನೋ ಪ್ರಶ್ನೆ ಎದ್ದಿದೆ. ಹೌದು.. ಈಗಾಗಲೇ ಮಾಜಿ ಕ್ರಿಕೆಟಿಗರು ಮತ್ತು ವಿಶ್ಲೇಷಕರು ಹಲವು ಆಟಗಾರರ ಹೆಸರನ್ನ ಪ್ರಸ್ತಾಪಿಸಿದ್ದು, ಧವನ್​ ರಿಪ್ಲೇಸ್​​ಗೆ ಪಕ್ಕಾ ಸೂಟ್​ ಆಗ್ತಾರೆ ಅಂತ ಹೇಳ್ತಿದ್ದಾರೆ. ಅದರಲ್ಲೂ ಕರ್ನಾಟಕದ ದೇವ್​ದತ್​ ಪಡಿಕ್ಕಲ್ ಮತ್ತು ಇಶಾನ್​ ಕಿಶನ್​, ಧವನ್​ ಸ್ಥಾನ ತುಂಬೋಕೆ ರೆಡಿಯಾಗಿದ್ದಾರೆ ಅಂತ ಹೇಳ್ತಿದ್ದಾರೆ.

ಕಮ್​​ಬ್ಯಾಕ್​ ಮಾಡೋಕೆ ಪಡಿಕ್ಕಲ್​​ಗೆ ಐಪಿಎಲ್​ ಉತ್ತಮ ವೇದಿಕೆ.!
ದೇವದತ್ ಪಡಿಕ್ಕಲ್, ಒಬ್ಬ ಪರ್ಫೆಕ್ಟ್ ಓಪನರ್​. ಪರಿಸ್ಥಿತಿಗೆ ತಕ್ಕಂತೆ ಆಡುವ ಸಾಮರ್ಥ್ಯ ಅವರಿಗಿದೆ. ಟಿ20 ಅಲ್ಲದೆ, ಏಕದಿನ ಕ್ರಿಕೆಟ್​​ಗೆ ಹೇಳಿ ಮಾಡಿಸಿದ ಆಟಗಾರ ಕೂಡ ಹೌದು. ಹಾಗಾಗಿ ಧವನ್​​ ಸ್ಥಾನಕ್ಕೆ ಈತನಿಗೆ ಹೆಚ್ಚು ಬೆಂಬಲ ಸಿಗ್ತಿದೆ. ಇನ್ನು ಐಪಿಎಲ್​​ನಲ್ಲಿ ಬೊಂಬಾಬ್​ ಆಟವಾಡಿರುವ ಪಡಿಕ್ಕಲ್​, ಶತಕ ಸಿಡಿಸಿ ಗಮನ ಸೆಳೆದಿದ್ರು.

blank

ಹೀಗಾಗಿ ಶ್ರೀಲಂಕಾ ಸರಣಿಗೆ ಆಯ್ಕೆ ಮಾಡಲಾಗಿತ್ತು. ಆದರೆ ಅಲ್ಲಿ ವೈಫಲ್ಯಕ್ಕೆ ಒಳಗಾದ ಪಡ್ಡಿಕಲ್​​, ಉಳಿದರ್ಧ ಐಪಿಎಲ್​​​ನಲ್ಲಿ ಬೊಂಬಾಟ್​ ಆಟವಾಡಿ ಸ್ಟ್ರಾಂಗ್​​​ ಆಗಿ ಕಮ್​ಬ್ಯಾಕ್​ ಮಾಡೋಕೆ ಸಿದ್ಧತೆ ನಡೆಸಿದ್ದಾರೆ. ಸದ್ಯ ಪಡಿಕ್ಕಲ್​​ ತನ್ನ ಸಾಮರ್ಥ್ಯ ಸಾಬೀತುಪಡಿಸಿಕೊಳ್ಳಲು, ಐಪಿಎಲ್ ಇದೆ​​​. ಹಾಗಾಗಿ ಆತ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಹೆಚ್ಚಾಗಿರೋದ್ರ ಜೊತೆಗೆ, ಧವನ್​ ಸ್ಥಾನವನ್ನ ಭದ್ರಪಡಿಸಿಕೊಳ್ಳಲು ಸಜ್ಜಾಗಿದ್ದಾರೆ.

ಇಶಾನ್​ ಕಿಶನ್​ ಮುಂದಿದೆ ಟಿ20 ವಿಶ್ವಕಪ್​​ – ಐಪಿಎಲ್​.!
ಟೀಮ್​ ಇಂಡಿಯಾ ಡೈನಮಿಕ್​ ಓಪನರ್​​ ಇಶಾನ್​ ಕಿಶನ್​. ನಿರ್ಭಿತಿಯಿಂದ ಬ್ಯಾಟ್​​​ ಬೀಸುವ ಕಿಶನ್​, ಈಗಾಗಲೇ ಟೀಮ್​ ಇಂಡಿಯಾದಲ್ಲಿ ತನ್ನ ಸಾಮರ್ಥ್ಯವನ್ನ ಸಾಬೀತುಪಡಿಸಿದ್ದಾರೆ. ಕೇವಲ ಓಪನಿಂಗ್ ಸ್ಲಾಟ್​ಗೆ​ ಮಾತ್ರವಲ್ಲ. ಮಧ್ಯಮ ಕ್ರಮಾಂಕಕ್ಕೂ ಒಳ್ಳೆ ಆಪ್ಶನ್. ಜೊತೆಗೆ ವಿಕೆಟ್​ ಕೀಪಿಂಗ್​ ಕೂಡ ಮಾಡ್ತಾರೆ. ಹಾಗಾಗಿ ಧವನ್​​ ಜಾಗಕ್ಕೆ ಇಶಾನ್ ಕಿಶನ್​ ಸೂಕ್ತ ಅಂತಾನೇ ಹೇಳಲಾಗ್ತಿದೆ.

blank

ಸ್ಪಿನ್ನರ್​​ಗಳ ಬೌಲಿಂಗ್​​​ನಲ್ಲಿ ಅದ್ಭುತ ಇನ್ನಿಂಗ್ಸ್​ ಕಟ್ಟುವ ಶಕ್ತಿ ಅವರಿಗಿದೆ. ಸದ್ಯ ಇಶಾನ್​ ಮುಂದೆ ಟಿ20 ವಿಶ್ವಕಪ್​​ ಮತ್ತು ಐಪಿಎಲ್​​ ಇದ್ದು, ಉತ್ತಮ ಪ್ರದರ್ಶನ ನೀಡಿದ್ದೇ ಆದರೆ ಧವನ್​ರನ್ನ ಓವರ್​ಟೇಕ್​​ ಮಾಡೋದು ಪಕ್ಕಾ. ಇನ್ನ ಪಡಿಕ್ಕಲ್ ಲಂಕಾ ಸರಣಿಯಲ್ಲಿ ಧವನ್​​​ ಬದಲಿಗೆ ಟಿ20ಯಲ್ಲಿ ಕಣಕ್ಕಿಳಿದಿದ್ರು. ಹಾಗೇ ಇಂಗ್ಲೆಂಡ್​ ಸರಣಿಯಲ್ಲಿ ಧವನ್​ಗೆ ಬದಲಿಯಾಗಿ ಇಶಾನ್​​ ಟಿ20 ಪಂದ್ಯ ಆಡಿ ಮಿಂಚಿದ್ರು. ಮತ್ತೊಂದೆಡೆ ಈಗಾಗಲೇ ಸೆಲೆಕ್ಟರ್ಸ್​ ಮೈಡ್​ನಿಂದ ಧವನ್ ಔಟ್ ಆಗಿದ್ದಾರೆ. ಹಾಗಾಗಿ ಧವನ್​ ಸ್ಲಾಟ್​​ಗೆ ಪಡಿಕ್ಕಲ್ ಅಥವಾ ಕಿಶನ್, ಇಬ್ಬರಲ್ಲಿ ಒಬ್ಬರು ಫಿಕ್ಸ್​ ಆಗೋದ್ರಲ್ಲಿ ಯಾವುದೇ ಅನುಮಾನ ಇಲ್ಲ.

Source: newsfirstlive.com Source link