ದಿ. ರವಿ ಬೆಳಗೆರೆ ಅವರ ಜನಪ್ರಿಯ ಕಾದಂಬರಿಗೆ ಈಗ ಧಾರಾವಾಹಿ ರೂಪ

ದಿ. ರವಿ ಬೆಳಗೆರೆ ಅವರ ಜನಪ್ರಿಯ ಕಾದಂಬರಿಗೆ ಈಗ ಧಾರಾವಾಹಿ ರೂಪ

ಖ್ಯಾತ ಪತ್ರಕರ್ತ, ಬರಹಗಾರ ಹಾಗೂ ಟೆಲಿವಿಷನ್‌ನಲ್ಲೂ ತಮ್ಮದೇ ಛಾಪು ಮೂಡಿಸಿದ್ದ ರವಿ ಬೆಳಗೆರೆ ನಮ್ಮನ್ನ ಅಗಲಿ ತುಂಬಾ ದಿನಗಳೇ ಆಗಿವೆ. ಆದ್ರೆ, ಓರ್ವ ಬರಹಗಾರನಿಗೆ ಸಾವಿಲ್ಲ ಅನ್ನೋದು ಮತ್ತೆ ಪ್ರೂವ್ ಆಗಿದೆ. ಯಾಕಂದ್ರೆ, ರವಿ ಬೆಳಗೆರೆ ಅವರ ಜನಪ್ರಿಯ ಕಾದಂಬರಿ ಹೇಳಿ ಹೋಗು ಕಾರಣ ದೃಶ್ಯ ರೂಪ ಪಡೆದಿದೆ.

blank

ಹೇಳಿ ಹೋಗು ಕಾರಣ ಅನ್ನೋ ಸೀರಿಯಲ್‌ ಸ್ಟಾರ್ ಸುವರ್ಣದಲ್ಲಿ ಮೂಡಿಬರ್ತಿದೆ. ಹೊಸ ಧಾರವಾಹಿಯ ಪ್ರೊಮೋ ರಿಲೀಸ್ ಆಗಿದ್ದು, ತುಂಬಾ ಪ್ರಾಮಿಸಿಂಗ್ ಆಗಿದೆ. ಹೇಳಿ ಹೋಗು ಕಾರಣ ಸೀರಿಯಲ್‌ ಮುಖ್ಯಪಾತ್ರಧಾರಿಗಳು ಯಾರಂದ್ರೆ, ಪುಟ್ಮಲ್ಲಿ ಸೀರಿಯಲ್‌ನ ನಟಿ ರಕ್ಷಾ ಹಾಗೂ ಯಾರೇ ನೀ ಮೋಹಿನಿಯ ಮುತ್ತು ಅಲಿಯಾಸ್‌ ಸೂರಜ್‌ ಅಭಿನಯಿಸ್ತಿದ್ದಾರೆ.

ವಿಶೇಷ ಅಂದ್ರೆ, ಈ ಸೀರಿಯಲ್‌ಗೆ ಆ್ಯಕ್ಷನ್ ಕಟ್ ಹೇಳ್ತಿರೋದು ಗಟ್ಟಿಮೇಳ ಧಾರವಾಹಿಯನ್ನ ಮೊದಲು ಡೈರೆಕ್ಟ್ ಮಾಡ್ತಿದ್ದ ಕೋರಮಂಗ ಅನಿಲ್‌. ಗಟ್ಟಿಮೇಳದ ನಂತರ ಸ್ಟ್ರೈಟ್‌ ಸಬ್ಜೆಕ್ಟ್‌ ಕೈಗೆತ್ತಿಕೊಂಡಿರೋ ಕೋರಮಂಗಲ ಅನಿಲ್‌ ಜನರಿಗೆ ಮನರಂಜನೆ ನೀಡಲು ಭರ್ಜರಿ ಪ್ಲಾನ್ ಮಾಡ್ಕೊಂಡಿದ್ದಾರೆ.

blank

ಹೇಳಿ ಹೋಗು ಕಾರಣ ಧಾರವಾಹಿಯಲ್ಲಿ ಪಾಪ್ಯುಲರ್‌ ಪ್ರತಿಭೆಗಳ ಸಂಗಮವೇ ಆಗ್ತಿದೆ. ಒಂದು ಕಡೆ ರವಿ ಬೆಳಗೆರೆ, ಇನ್ನೊಂದು ಕಡೆ ಖ್ಯಾತ ನಿರ್ದೇಶಕರಾದ ಅನಿಲ್ ಕೋರಮಂಗಲ ಹಾಗೂ ಹಲವು ಸೀರಿಯಲ್‌ಗಳ ಮೂಲಕ ಜನರಿಗೆ ಮನರಂಜನೆ ನೀಡಿ ಗುರುತಿಸಿಕೊಂಡಿರೋ ರಕ್ಷಾ ಹಾಗೂ ಸೂರಜ್‌ ಒಟ್ಟಾಗಿದ್ದಾರೆ.

ಈ ಬಗ್ಗೆ ನಮ್ಮ ಜೊತೆ ಮಾತನಾಡಿದ ನಟಿ ರಕ್ಷಾ, ನಾನು ಪ್ರಾರ್ಥನಾ ರೋಲ್ ಮಾಡ್ತಿದ್ದೇನೆ. ಮನೆಯಿಂದ ಹೊರಬಂದು ಜೀವನ ಕಟ್ಟಿಕೊಳ್ಳುವ ಪಾತ್ರವಿದು. ಆ ಸಮಯದಲ್ಲಿ ಹಿಮವಂತ್‌ ನನಗೆ ಹೆಲ್ಪ್ ಮಾಡ್ತಾನೆ. ಆತನಿಗೆ ನನ್ನ ಮೇಲೆ ಪ್ರೇಮಾಂಕುರವಾಗುತ್ತೆ. ಆದ್ರೆ, ನನಗೆ ಆತ ಸ್ನೇಹಿತನಾಗಿರ್ತಾನೆ. ಇದೇ ಕಥೆ ಸಾಗುತ್ತದೆ. ಕೋರಮಂಗಲ ಅನಿಲ್ ಅವರ ನಿರ್ದೇಶನ ಅದ್ಭುತವಾಗಿದೆ. ಒಳ್ಳೆ ಟೀಮ್ ಇದೆ. ಸದ್ಯ ಸಕಲೇಶಪುರದಲ್ಲಿ ಶೂಟಿಂಗ್ ಮಾಡ್ತಿದ್ದೇವೆ. ಸದ್ಯದಲ್ಲಿಯೇ ಸೀರಿಯಲ್ ಲಾಂಚ್ ಆಗ್ಲಿದೆ ಅಂತಾ ಹೇಳಿದ್ರು.

ಪ್ರೊಮೋದ ಕ್ವಾಲಿಟಿ ನೋಡ್ತಿದ್ರೆ ಸೀರಿಯಲ್‌ ಚೆನ್ನಾಗಿ ಮೂಡಿಬರುವ ಭರವಸೆಯಂತೂ ಸಿಕ್ತಿದೆ. ಈ ಮೂಲಕ ಸ್ಟಾರ್ ಸುವರ್ಣದಲ್ಲಿ ಇನ್ನೊಂದು ಧಾರವಾಹಿ ಲಾಂಚ್ ಆಗಲು ಅಣಿಯಾಗಿದೆ. ನಮ್ಮ ಕಡೆಯಿಂದ ಹೇಳಿ ಹೋಗು ಕಾರಣ ತಂಡಕ್ಕೆ ಆಲ್‌ ದಿ ಬೆಸ್ಟ್‌.

Source: newsfirstlive.com Source link