ಗುಡಿಸಲು ಕಟ್ಟಲು ವೇಸ್ಟ್ ಬ್ಯಾನರ್ ಕೊಡಿ ಎಂದ ಅಜ್ಜ-ಅಜ್ಜಿಗೆ 2 ಲಕ್ಷದ ಮನೆಯನ್ನೇ ನಿರ್ಮಿಸಿಕೊಟ್ಟ ಕಾರ್ಪೊರೇಟರ್

ಗುಡಿಸಲು ಕಟ್ಟಲು ವೇಸ್ಟ್ ಬ್ಯಾನರ್ ಕೊಡಿ ಎಂದ ಅಜ್ಜ-ಅಜ್ಜಿಗೆ 2 ಲಕ್ಷದ ಮನೆಯನ್ನೇ ನಿರ್ಮಿಸಿಕೊಟ್ಟ ಕಾರ್ಪೊರೇಟರ್

ದಾವಣಗೆರೆ: ನಗರದ ಶೇಖರಪ್ಪ ಬಡಾವಣೆ ವಾರ್ಡ್ ನಂ 19 ರಲ್ಲಿ ಪಾಲಿಕೆ ಸದಸ್ಯರೋರ್ವರು ವಯಸ್ಸಾದ ಅಜ್ಜ ಅಜ್ಜಿಗೆ ಮನೆಯನ್ನ ಗಿಫ್ಟ್ ನೀಡಿದ ಮಾನವೀಯ ಘಟನೆ ನಡೆದಿದೆ. ಕಳೆದ 15 ವರ್ಷಗಳಿಂದ ಅಜ್ಜ ಅಜ್ಜಿ ಮನೆಯಿಲ್ಲದೇ ಪರದಾಡುತ್ತಿದ್ದರು. ಇದ್ದ ಮಕ್ಕಳು ತೀರಿಹೋದ ನಂತರ ಸೊಸೆಯಂದಿರು ಅಜ್ಜ ಅಜ್ಜಿಯನ್ನ ಮನೆಯಿಂದ ಹೊರಹಾಕಿದ್ದರು ಎನ್ನಲಾಗಿದೆ.

ಹೀಗಾಗಿ ಕಾರ್ಪೊರೇಟರ್ ಬಳಿ ಗುಡಿಸಲು ನಿರ್ಮಿಸಲು ವೇಸ್ಟ್ ಬ್ಯಾನರ್ ಕೊಡಿ ಎಂದು ಅಜ್ಜಿ ಕೇಳಿದ್ದರಂತೆ. ಈ ವೇಳೆ ಅಜ್ಜಿ ವಾಸವಿರೋ ಗುಡಿಸಲಿಗೆ ಭೇಟಿ ನೀಡಿದ್ದ ಸ್ಥಳೀಯ ಕಾರ್ಪೋರೇಟರ್ ಶಿವಪ್ರಕಾಶ್.. ಅಜ್ಜಿಯ ಕಷ್ಟ ನೋಡಿ ಮನೆ ನಿರ್ಮಿಸಿಕೊಡುವ ಭರವಸೆ ನೀಡಿದ್ದರು. ಇದೀಗ ಎರಡು ಲಕ್ಷದ ಮನೆ ನಿರ್ಮಿಸಿಕೊಟ್ಟು ಕಾರ್ಪೋರೇಟರ್ ಮಾನವೀಯತೆ ಮೆರೆದಿದ್ದಾರೆ. ಪಾಲಿಕೆ ಸದಸ್ಯನ ಕಾರ್ಯ ವೈಖರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Source: newsfirstlive.com Source link