ಜನರನ್ನ ಎಚ್ಚರಿಸಲು ಮತ್ತೆ ಬರುತ್ತಿದೆ ಕ್ರೈಂ ಲೋಕದ ‘ಶಾಂತಂ ಪಾಪಂ’

ಜನರನ್ನ ಎಚ್ಚರಿಸಲು ಮತ್ತೆ ಬರುತ್ತಿದೆ ಕ್ರೈಂ ಲೋಕದ ‘ಶಾಂತಂ ಪಾಪಂ’

ಕ್ರೈಂ ಲೋಕದ ಬೆಚ್ಚಿಬೀಳಿಸುವ ಕಥೆಗಳನ್ನ ಇಟ್ಟುಕೊಂಡು ಪ್ರಸಾರವಾಗುತ್ತಿದ್ದ ಶಾಂತಂ ಪಾಪಂ ಎಂಬ ಸೀರಿಸ್​ ಬಗ್ಗೆ ನಿಮಗೆ ಗೊತ್ತಿರಬಹುದು.. ಇಲ್ಲಿ ತೋರಿಸುವ ಪ್ರತಿ ಕಥೆಗಳೂ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ಕಹಿ ಸತ್ಯಗಳು. ಹೀಗಾಗಿಯೇ ಈ ಸಿರೀಸ್​​ಗೆ ವೀಕ್ಷಕರು ಫುಲ್​ ಮಾರ್ಕ್ಸ್​ ಕೊಟ್ಟಿದ್ದಾರೆ..

ಈಗಾಗಲೇ ಹಲವು ಸೀಸನ್​ಗಳನ್ನು ಕಂಪ್ಲೀಟ್ ಮಾಡಿರುವ ಶಾಂತಂ ಪಾಪಂ ಮತ್ತೊಮ್ಮೆ ಜನರನ್ನ ಎಚ್ಚರಿಸಲು ಬರುತ್ತಿದೆ. ಹೌದು, ಇದೇ ಸೆಪ್ಟೆಂಬರ್ 20 ರಂದು ಶಾಂತಂ ಪಾಪಂ ಸೀರಿಯಲ್ ಬರುತ್ತಿದ್ದು, ದಿನಕ್ಕೊಂದು ಕ್ರೈಮ್ ಸ್ಟೋರಿಯನ್ನ ತೆರೆ ಮೇಲೆ ತರಲಿದೆ.

ಈಗಾಗಲೇ ಕಲರ್ಸ್ ಕನ್ನಡ ಅಧಿಕೃತ ಪ್ರೊಮೋ ರಿಲೀಸ್ ಮಾಡಿದ್ದು, ಪಾಪದ ಕತೆಗಳು ಪಾಠ ಕಲಿಸೋ ಕತೆಗಳು ಎಂಬ ಅಡಿಬರಹವಿರುವ ಸೀರಿಸ್​ನ ಬಹುತೇಕ ಕತೆಗಳು ನೈಜ ಘಟನೆಗಳನ್ನು ಆಧರಿಸಿದ್ದಾಗಿವೆ. ಯಾವುದೇ ರೀತಿಯ ದೃಶ್ಯ ವೈಭವಿಕರಣವಿಲ್ಲದೇ ಅಪರಾಧ ಜಗತ್ತಿನ ಹಿಂದಿರುವ ಮನಸ್ಥಿತಿ, ಆ ಪರಿಸ್ಥಿತಿ ಹೇಗಿರುತ್ತೆ.. ಅದು ಉಂಟು ಮಾಡುವ ಅನಾಹುತಗಳ ಎಂಥದ್ದು ಎಂಬುವುದರ ಮೇಲೆ ಬೆಳಕು ಚೆಲ್ಲುವ ಅಪರೂಪದ ಕಾರ್ಯಕ್ರಮ ಇದು..

ಇನ್ನೊಂದು ವಿಶೇಷತೆ ಅಂದ್ರೆ ಅದೆಷ್ಟು ಅದ್ಭುತ ಪ್ರತಿಭೆಗಳು ಈ ಕಾರ್ಯಕ್ರಮದ ಮೂಲಕ ಬೆಳಕಿಗೆ ಬಂದಿವೆ.. ಮಾನವೀಯ ನೆಲೆಯಲ್ಲಿ ಅಪರಾಧಗಳನ್ನು ನೋಡುವಂತೆ ಮಾಡುವ ಪ್ರಯತ್ನ ಇದಾಗಿದ್ದು, ಹೊಸ ನಟ-ನಟಿಯರು, ರಿಯಲ್ ಲೊಕೇಷನ್‌ಗಳು, ಸಹಜ ಮೇಕಪ್ ಮೂಲಕ ವೀಕ್ಷಕರ ಮನಸ್ಸು ಗೆದ್ದಿರುವ ಶಾಂತಂ ಪಾಪಂ ಸೆಪ್ಟೆಂಬರ್ 20 ರ ಸೋಮವಾರದಿಂದ ರಾತ್ರಿ 10.30ಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ..

Source: newsfirstlive.com Source link