ಅಕ್ರಮ ಗಣಿ ಮಾಲೀಕರೇ ಸಕ್ರಮ ಗಣಿ ಮಾಲೀಕರಿಗೆ ಬೆದರಿಕೆ ಹಾಕುತ್ತಿದ್ದಾರೆ- ಸುಮಲತಾ ಅಂಬರೀಶ್

ಅಕ್ರಮ ಗಣಿ ಮಾಲೀಕರೇ ಸಕ್ರಮ ಗಣಿ ಮಾಲೀಕರಿಗೆ ಬೆದರಿಕೆ ಹಾಕುತ್ತಿದ್ದಾರೆ- ಸುಮಲತಾ ಅಂಬರೀಶ್

ಮಂಡ್ಯ: ಜಿಲ್ಲೆಯಲ್ಲಿ ಅಕ್ರಮದ ಜೊತೆಗೆ ಸಕ್ರಮ ಗಣಿಗಾರಿಕೆ ಸ್ಥಗಿತಗೊಂಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ.. ಅಕ್ರಮ ಗಣಿ ಮಾಲೀಕರೇ ಸಕ್ರಮ ಗಣಿ ಮಾಲೀಕರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಮಂಡ್ಯದಲ್ಲಿ ಸಂಸದೆ ಸುಮಲತಾ ಅಂಬರೀಶ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಸಕ್ರಮವಾಗಿರುವ ಗಣಿಗಾರಿಕೆಯನ್ನು ಯಾರಿಂದಲೂ ಸಹ ನಿಲ್ಲಿಸೋಕೆ ಆಗುವುದಿಲ್ಲ.. ನನಗೆ ಈ ಬಗ್ಗೆ ಒಂದು‌ ಮಾಹಿತಿ ಬಂದಿದೆ.. ಅಕ್ರಮ ಗಣಿ ಮಾಲೀಕರು ಸಕ್ರಮವಾಗಿ ಇರುವ ಮಾಲೀಕರಿಗೆ ಬೆದರಿಕೆ ಹಾಕಿದ್ದಾರೆ. ನಮ್ಮ ಗಣಿಗಾರಿಕೆ ಪ್ರಾರಂಭವಾಗುವವರೆಗೆ ನೀವು ಗಣಿಗಾರಿಕೆ ನಡೆಸಬಾರದು.. ನಮ್ಮನ್ನು ಗಣಿಗಾರಿಕೆ ಮಾಡಲು‌ ಬಿಡುತ್ತಿಲ್ಲ ಎಂದರೆ ನೀವು ಮಾಡಬಾರದು. ಹೀಗೆ ಅಕ್ರಮ ಗಣಿಗಾರಿಕೆ ಮಾಲೀಕರು ಸಕ್ರಮ ಇರುವವರಿಗೆ ಬೆದರಿಕೆ ಹಾಕಿದ್ದಾರೆ. ಈ ಕಾರಣಕ್ಕೆ ಸಕ್ರಮ ಗಣಿಗಾರಿಕೆಗಳು ಸ್ಥಗಿತಗೊಂಡಿವೆ. ಈ ರೀತಿಯ ಮಾಹಿತಿ ನನಗೆ ಬಂದಿದೆ ಎಂದಿದ್ದಾರೆ.

ಅಭಿವೃದ್ಧಿ ಕೆಲಸಗಳ ಬಗ್ಗೆ ಜೆಡಿಎಸ್ ಶಾಸಕರು ಮಾತನಾಡಲಿ

ವೈಯಕ್ತಿಕ ಟೀಕೆ ಬದಲು ಅಭಿವೃದ್ಧಿ ಕೆಲಸಗಳ ಬಗ್ಗೆ ಜೆಡಿಎಸ್ ಶಾಸಕರು ಮಾತನಾಡಲಿ ಎಂದು ಜೆಡಿಎಸ್ ಶಾಸಕರಿಗೆ ಸುಮಲತಾ ಟಾಂಗ್ ಕೊಟ್ಟಿದ್ದಾರೆ. ಜೆಡಿಎಸ್ ಶಾಸಕರು ಅಧಿವೇಶನದಲ್ಲಿ ಏನು ಬೇಕಾದ್ರು ಮಾತನಾಡಲಿ.. ಮಂಡ್ಯದ ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚೆ ಮಾಡಿದ್ರೆ ಅದನ್ನು ಸ್ವಾಗತಿಸುತ್ತೇನೆ. ಮಂಡ್ಯದಲ್ಲಿ ದೊಡ್ಡ ದೊಡ್ಡ ಸಮಸ್ಯೆಗಳಿವೆ.. ಕೊರೊನಾ ಸಂಕಷ್ಟಗಳು, ಜನರ ಸಂಕಷ್ಟಗಳ ಬಗ್ಗೆ ಚರ್ಚೆ ಮಾಡಲಿ.. ಅದನ್ನು ಬಿಟ್ಟು ವೈಯಕ್ತಿವಾಗಿ ನನ್ನ ವಿಚಾರಗಳನ್ನು ಚರ್ಚೆ ಮಾಡುವುದು ಅವರಿಗೆ ಬಿಟ್ಟಿದ್ದು. ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಮೊದಲು ಚರ್ಚಿಸಿ.. ಅದನ್ನು ಬಿಟ್ಟು ಲೆಟರ್‌ನಲ್ಲಿ ಸುಮಲತಾ, ಅಂಬರೀಶ್, ಅಮರನಾಥ್ ಅಂತಾ ಇದೆ ಅಂತಾ.. ಲೆಟರ್ ಕೆಳಗಡೆ ಯಾರ ಸಹಿ ಇದೆ, ಈ ಸಲಾ ಬೇರೆ ತರ ಸಹಿ ಮಾಡಿದ್ದಾರೆ.. ಬೇರೆ ಯಾರೋ ಇವಾಗ ಸಹಿ ಮಾಡಿದ್ದಾರೆ.. ಈ ರೀತಿಯ ವಿಚಾರಗಳನ್ನು ಅಲ್ಲ ಚರ್ಚೆ ಮಾಡೋದು. ಸದನದಲ್ಲಿ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕು ಎಂದು ಹೇಳಿದ್ದಾರೆ.

ಮೈಶುಗರ್ ಪುನರಾರಂಭ ವಿಚಾರವಾಗಿ ಪ್ರತಿಕ್ರಿಯಿಸಿ.. ಈಗಾಗಲೇ ಈ ಬಗ್ಗೆ ಸಕ್ಕರೆ ಸಚಿವರನ್ನು ನಾನು ಭೇಟಿಯಾಗಿದ್ದೇನೆ. ಈ ವೇಳೆ ನಾನು ಸರ್ಕಾರವಾದರು ಓ ಎನ್​ ಎಂಗಾದ್ರು ನೀಡಿ.. ಆದಷ್ಟು ಬೇಗ ಕಾರ್ಖಾನೆ ಪ್ರಾರಂಭ ಮಾಡಿ ಎಂದಿದ್ದೆ. ಕಾರ್ಖಾನೆ ಆರಂಭವಾಗದೇ ರೈತರಿಗೆ ತೊಂದರೆಯಾಗುತ್ತಿದೆ. ಎರಡು ವರ್ಷಗಳ ಕಾಲ ತಾಳ್ಮೆಯಿಂದ ನಾವು ಕೇಳಿದ್ದೇವೆ. ಈಗ ರೈತರಿಗೆ ಇನ್ನೂ ತಾಳ್ಮೆಯಿಂದ ಇರಿ ಎಂದು ಹೇಳಲು ಸಾಧ್ಯವಿಲ್ಲ. ರೈತರು ಪ್ರತಿಭಟನೆ ಮಾಡುತ್ತಿದ್ದಾರೆ ಎಂದರೆ ಅದು ಸರಿ.

ರೈತರ ತಾಳ್ಮೆಯನ್ನು ಸರ್ಕಾರ ಪರೀಕ್ಷೆ ಮಾಡುತ್ತಿದೆ

ರೈತರ ತಾಳ್ಮೆಯನ್ನು ಸರ್ಕಾರ ಪರೀಕ್ಷೆ ಮಾಡುತ್ತಿದೆ. ಸರ್ಕಾರ ಕೂಡಲೇ ಯಾವ ರೀತಿಯಲ್ಲಿ ಕಾರ್ಖಾನೆ ಆರಂಭಿಸುತ್ತದೆ ಎನ್ನುವುದನ್ನು ಹೇಳಬೇಕು. ಇದರ ಹಿಂದೆ ಬಲವಾದ ರಾಜಕೀಯ ಪ್ರಭಾವ ಇರುವ ಕಾರಣ ಇಷ್ಟು ವರ್ಷ ಕಾರ್ಖಾನೆ ಆರಂಭವಾಗಿಲ್ಲ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ರೈತರ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದಿದ್ದಾರೆ.

Source: newsfirstlive.com Source link