‘ಅಣ್ಣ ನಿನ್ನ ಬಿಟ್ಟು ಬದುಕುವುದು ಕಷ್ಟವಾಗುತ್ತಿದೆ’ ಚಿರು ಸರ್ಜಾ ನೆನೆದು ಭಾವುಕರಾದ ಧ್ರುವ ಸರ್ಜಾ

‘ಅಣ್ಣ ನಿನ್ನ ಬಿಟ್ಟು ಬದುಕುವುದು ಕಷ್ಟವಾಗುತ್ತಿದೆ’ ಚಿರು ಸರ್ಜಾ ನೆನೆದು ಭಾವುಕರಾದ ಧ್ರುವ ಸರ್ಜಾ

ಚಿರಂಜೀವಿ ಸರ್ಜಾ. ಸರ್ಜಾ ಕುಟುಂಬಕ್ಕೆ ಮತ್ತು ಅವರ ಅಭಿಮಾನಿಗಳಿಗೆ ಮರೆಯಲಾಗದ ನೆನಪು.. ಚಿತ್ರರಂಗದಲ್ಲಿ ರಾಮ ಲಕ್ಷ್ಮಣರಂತೆ ಇದ್ದರು.. ಭಜರಂಗಿ ಭಕ್ತರಾದ ಚಿರು-ಧ್ರುವ. ಅದ್ರೆ ಅದ್ಯಾವ ಮಸಣಿ ಕಣ್ ಈ ಸಹೋದರ ಮೇಲೆ ಬಿತ್ತೋ ಗೊತ್ತಿಲ್ಲ. ಕಳೆದ ವರ್ಷ ಚಿರು ಇಹ ಲೋಕವನ್ನು ತ್ಯಜಿಸಿದ್ರು. ಚಿರು ಅಗಲಿ ಒಂದು ವರ್ಷ ಕಳೆದೋಗಿದ್ರೂ, ಚಿರು ನೆನಪು ಮಾತ್ರ ಧ್ರುವ ಸರ್ಜಾ ಹೃದಯದಲ್ಲಿ ಇನ್ನೂ ಮಾಸಿಲ್ಲ.. ಅದಕ್ಕೆ ಸಾಕ್ಷಿ ಎಂಬಂತೆ ಧ್ರುವ ಸರ್ಜಾ ತನ್ನ ನೆಚ್ಚಿನ ಅಣ್ಣನ ನೆನೆದು ಭಾವುಕರಾಗಿದ್ದಾರೆ.

ಸ್ಯಾಂಡಲ್ ವುಡ್ ನ ಯುವಸಾಮ್ರಾಟ ಚಿರಂಜೀವಿ ಸರ್ಜಾ ಅವರು ಅವರನ್ನ ಪ್ರೀತಿಸುವ ಹೃದಯಗಳ ಬಿಟ್ಟು ಬಾರದೂರಿಗೆ ಪಯಣಿಸಿ ವರ್ಷ ಕಳೆಯಿತು.. ಚಿರು ಇಲ್ಲದ ನೋವು ಅವರ ಅಭಿಮಾನಿ ಬಳಗಕ್ಕೆ ಎಷ್ಟು ನೋವಾಗಿದೆಯೋ ಅದಕ್ಕೆ ನೂರು ಪಟ್ಟು ನೋವು ಚಿರು ಕುಟುಂಬಕ್ಕೆ ಇದೆ.. ಪುತ್ರ ಶೋಕ ನಿರಂತರಂ ಅನ್ನೋ ಗಾದೆ ಮಾತಿನಂತೆ, ಚಿರು ಇಲ್ಲದ ನೋವು ಅವರ ತಂದೆ ತಾಯಿಯನ್ನು ಇನ್ನೂ ಕಾಡ್ತಿದೆ. ಅದೇ ರೀತಿ ತನ್ನ ಜೀವಕ್ಕೆ ಜೀವವಾಗಿದ್ದ ಅಣ್ಣನ ಅಗಲಿಕೆಯ ನೋವು ಧ್ರುವ ಸರ್ಜಾ ಅವರನ್ನು ಬಿಡದೇ ಕಾಡ್ತಿದೆ.. ಅದಕ್ಕೆ ಸಾಕ್ಷಿ ಎಂಬಂತೆ ಚಿರು ಬಾರದೂರಿನ ಕಡೆ ಹೋಗಿ ವರಷ ಕಳೆದಿದ್ರೂ ಹರುಷವನ್ನೇ ಕಾಣದ ಧ್ರುವ, ಪ್ರೀತಿಯ ಅಣ್ಣನ ನೆನೆದು ಭಾವುಕರಾಗಿದ್ದಾರೆ.

blank

ಇದನ್ನೂ ಓದಿ: ಬಾಲಿವುಡ್​ನಲ್ಲೇ ದುಬಾರಿ ಕಾರ್ ಖರೀದಿಸಿದ ಮೊದಲ ನಟಿ ಕೃತಿ, ಕಾರಿನ ಬೆಲೆ ಎಷ್ಟು?

ಹೌದು ಧ್ರುವ ಸರ್ಜಾ ಕಳೆದ ಒಂದು ವರ್ಷದಿಂದ ಅಣ್ಣ ಇಲ್ಲದ ನೋವಿನಲ್ಲೇ ದಿನಕಳೆಯುತ್ತಿದ್ದಾರೆ. ಚಿರು ಇಲ್ಲದ ನೋವನ್ನು ಕಂಟ್ರೋಲ್ ಮಾಡಲು ಧ್ರುವ ಎಷ್ಟೇ ಪ್ರಯತ್ನ ಪಟ್ಟರೂ, ಚಿರು ಜೊತೆಗೆ ಕಳೆದ ಸುಂದರ ಕ್ಷಣಗಳು ಧ್ರುವ ಅವರನ್ನು ಕಾಡುತ್ತಲೇ ಇವೆ.. ಅಷ್ಟೇ ಅಲ್ಲ ಅಣ್ಣನ ಜೊತೆಗಿನ ಆ ನೆನಪುಗಳಿಂದ ಧ್ರುವ ಇನ್ನು ಹೊರಬಂದಿಲ್ಲ. ನಿನ್ನೆ ಸಡನ್ ಆಗಿ ಧ್ರುವ ತನ್ನ ಅಣ್ಣನ ನೆನೆದು ಭಾವುಕರಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ‘ ಅಣ್ಣ ನಿನ್ನ ಬಿಟ್ಟು ಬದುಕುವುದು ಕಷ್ಟವಾಗುತ್ತಿದೆ’ ಎಂದು ಪೋಸ್ಟ್ ಹಾಕಿದ್ದಾರೆ.. ಅಲ್ಲದೆ ತನ್ನ ಅಣ್ಣನ ಜೊತೆಗಿನ ಸುಂದರ ಕ್ಷಣಗಳ ನೆನಪಿಸಿ ಕೊಂಡು ಒಂದು ವಿಡಿಯೋವನ್ನು ಶೇರ್ ಮಾಡಿ ಭಾವುಕರಾಗಿದ್ದಾರೆ.

blank

ಧ್ರುವ ಸರ್ಜಾ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಆ ವಿಡಿಯೋ ನೋಡಿದ್ರೆ.. ಎಂತ ಕಲ್ಲು ಹೃದಯವೂ ಕರಗಿ ಕಣ್ಣೀರಾಗೋದು ಗ್ಯಾರಂಟಿ.. ಅಷ್ಟೇ ಅಲ್ಲ ಯಾಕಪ್ಪ ದೇವರೆ ಸಂತೋಷವಾಗಿದ್ದ ಸಹೋದರರ ಮೇಲೆ  ವಕ್ರದೃಷ್ಟಿ ಬೀರಿದೆ ಅಂತ ದೇವರಿಗೂ ಶಾಪ ಹಾಕ್ತಾರೆ. ಒಟ್ಟಿನಲ್ಲಿ ಚಿರು ಇಲ್ಲದೆ ಒಂದು ವರ್ಷ ಕಳೆದಿರುವ ಧ್ರುವ ಈಗ ತನ್ನ ಅಣ್ಣನ ಹುಟ್ಟು ಹಬ್ಬದ ದಿನ ಹತ್ತಿರ ಬರ್ತಿದ್ದಂತೆ, ತನ್ನ ಅಣ್ಣನ ಜೊತೆಗಿನ  ನೆನಪಲ್ಲೇ ಕಾಲ ಕಳೆಯುತ್ತಿದ್ದಾರೆ.

Source: newsfirstlive.com Source link