ವಿದ್ಯಾರ್ಥಿಗಳಿಂದ ಹೈಡ್ರಾಮಾ.. ಪರೀಕ್ಷೆ ಮುಂದೂಡುವಂತೆ ಸೀಮೆ ಎಣ್ಣೆ ಹಿಡಿದು ಆತ್ಮಹತ್ಯೆ ಬೆದರಿಕೆ

ವಿದ್ಯಾರ್ಥಿಗಳಿಂದ ಹೈಡ್ರಾಮಾ.. ಪರೀಕ್ಷೆ ಮುಂದೂಡುವಂತೆ ಸೀಮೆ ಎಣ್ಣೆ ಹಿಡಿದು ಆತ್ಮಹತ್ಯೆ ಬೆದರಿಕೆ

ಬೆಳಗಾವಿ: ಜಿಲ್ಲೆಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಇವತ್ತಿನಿಂದ ನಡೆಯುತ್ತಿರುವ ವಿವಿ ಪರೀಕ್ಷೆಗಳನ್ನ ಮುಂದೂಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.

ಎಂಬಿಎ, ಕ್ರಿಮಿನಾಲಾಜಿ, ಸೇರಿದಂತೆ ವಿವಿಧ ಸ್ನಾತಕೋತ್ತರ ವಿವಿ ಪರೀಕ್ಷೆ ನಡೆದಿದ್ದವು.. ಕೊರೊನಾ ಹಾಗೂ ಮಳೆ ಹಿನ್ನೆಲೆಯಲ್ಲಿ ಬಸ್ ಅನಾನುಕೂಲವಾಗುತ್ತಿದೆ.. ಹೀಗಾಗಿ ವಿವಿ ಪರೀಕ್ಷೆಗಳನ್ನ ಮುಂದೂಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ವಿವಿ ಆಡಳಿತ ಮಂಡಳಿ ಇದಕ್ಕೆ ಒಪ್ಪಿರಲಿಲ್ಲ.. ಹೀಗಾಗಿ ವಿವಿ ಕುಲಪತಿಗಳ ಮುಂದೆ ಸೀಮೆ ಎಣ್ಣೆ ಹಿಡಿದು ಆತ್ಮಹತ್ಯೆ ಬೆದರಿಕೆ ಹಾಕಿದ ಘಟನೆ ನಡೆದಿದೆ.

ಬೆಳಿಗ್ಗೆಯಿಂದ ಪರೀಕ್ಷೆಗೆ ಗೈರಾಗಿ ವಿದ್ಯಾರ್ಥಿಗಳು ಸಾಮೂಹಿಕವಾಗಿ ಪ್ರತಿಭಟನೆಗಿಳಿದಿದ್ದರು. ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದು ವಿವಿ ಪರೀಕ್ಷೆ ಮುಂದೂಡಿದೆ. ಇದೇ ಸೆಪ್ಟೆಂಬರ್ 17 ರಿಂದ ಪರೀಕ್ಷೆ ನಡೆಸಲು ವಿವಿ ನಿರ್ಧಾರ ಮಾಡಿದೆ. ಸದ್ಯ ಪ್ರತಿಭಟನೆಯಿಂದ ಹವಿದ್ಯಾರ್ಥಿಗಳು ಹಿಂದೆ ಸರಿದಿದ್ದಾರೆ.

Source: newsfirstlive.com Source link