ಬೆಂಗಳೂರಲ್ಲಿ ಸೆಪ್ಟೆಂಬರ್ 27 ರ ಮಧ್ಯರಾತ್ರಿವರೆಗೂ ನೈಟ್ ಕರ್ಫ್ಯೂ ವಿಸ್ತರಣೆ- ಕಮಲ್​ಪಂತ್ ಆದೇಶ

ಬೆಂಗಳೂರಲ್ಲಿ ಸೆಪ್ಟೆಂಬರ್ 27 ರ ಮಧ್ಯರಾತ್ರಿವರೆಗೂ ನೈಟ್ ಕರ್ಫ್ಯೂ ವಿಸ್ತರಣೆ- ಕಮಲ್​ಪಂತ್ ಆದೇಶ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನೈಟ್ ಕರ್ಫ್ಯೂ ವಿಸ್ತರಣೆ ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್​ರಿಂದ ಆದೇಶ ಹೊರಡಿಸಿದ್ದಾರೆ.

ಸೆಪ್ಟೆಂಬರ್ 27 ರ ಮಧ್ಯರಾತ್ರಿ ವರೆಗೂ ನೈಟ್ ಕರ್ಫ್ಯೂ ವಿಸ್ತರಣೆಯಾಗಲಿದೆ. ರಾತ್ರಿ 9 ಗಂಟೆಗೆ ನೈಟ್ ಕರ್ಫ್ಯೂ ಪ್ರಾರಂಭವಾಗಲಿದ್ದು ಬೆಳಿಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿರಲಿದೆ. ನೈಟ್ ಕರ್ಫ್ಯೂ ಜೊತೆಗೆ 144 ಸೆಕ್ಷನ್ ಸಹ ಜಾರಿ ಮಾಡಿ ಕಮೀಷನರ್ ಆದೇಶಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ 4 ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ.. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣದಲ್ಲಿ ಮಾತ್ರ 144 ಸೆಕ್ಷನ್ ಜಾರಿಯಲ್ಲಿರುತ್ತೆ.. ಉಳಿದಂತೆ ಕರ್ಫ್ಯೂ ವೇಳೆ ಅನವಶ್ಯಕವಾಗಿ ಓಡಾಡಿದ್ರೆ ಕ್ರಮದ ಎಚ್ಚರಿಕೆ ನೀಡಲಾಗಿದೆ.

Source: newsfirstlive.com Source link