ತಟ್ಟೆಗೆ ಸಾಸ್ ಹಾಕಿದ್ದಕ್ಕೆ RJ ಮೇಘನಾ ಕುಟುಂಬದಿಂದ ಗಲಾಟೆ ಆರೋಪ.. ಪಬ್​ನಲ್ಲಿ ನಡೆದಿದ್ದೇನು..?

ತಟ್ಟೆಗೆ ಸಾಸ್ ಹಾಕಿದ್ದಕ್ಕೆ RJ ಮೇಘನಾ ಕುಟುಂಬದಿಂದ ಗಲಾಟೆ ಆರೋಪ.. ಪಬ್​ನಲ್ಲಿ ನಡೆದಿದ್ದೇನು..?

ಹುಬ್ಬಳ್ಳಿ: ತಟ್ಟೆಯಲ್ಲಿ ಸಾಸ್ ಹಾಕಿದ್ದಕ್ಕೆ ಪಬ್​ನಲ್ಲಿ RJ ಮೇಘನಾ ಕುಟುಂಬದಿಂದ ಗಲಾಟೆ ನಡೆದಿದೆ ಎನ್ನಲಾಗಿದೆ. ಹುಬ್ಬಳ್ಳಿಯ ಐಸ್ ಕ್ಯೂಬ್ ಪಬ್ ನಲ್ಲಿ ಮೊನ್ನೆ ರಾತ್ರಿ ಘಟನೆ ನಡೆದಿದ್ದು ರಾತ್ರಿ ಪಾರ್ಟಿ ಮಾಡಿ ಸ್ನೇಹಿತರು ಮನೆಯವರ ಜೊತೆ ಊಟಕ್ಕೆ ತೆರಳಿದಾಗ ಗಲಾಟೆ ನಡೆದಿದೆ ಎನ್ನಲಾಗಿದೆ.

ಶ್ರೀನಿವಾಸ್, ಲಾವಣ್ಯ, ಶರಣ್ಯ ಶೈಲೇಶ್ ಎಂಬುವವರು ಬೆಂಗಳೂರಿನಿಂದ ಬಂದು ಪಕ್ಕದ ಟೇಬಲ್ ನಲ್ಲೇ ಕುಳಿತಿದ್ದರು. ಒಂದೇ ಕಡೆ ಕೆಲಸ ಮಾಡಿದ್ದರಿಂದ ಸಲುಗೆಯಲ್ಲೇ ಒಂದೇ ಟೇಬಲ್​ನಲ್ಲಿ ಎಲ್ಲರೂ ಊಟ ಮಾಡಿದ್ದರು. ಶ್ರೀನಿವಾಸ್ ಎನ್ನುವ ವ್ಯಕ್ತಿ ಕೃತಿಕಾ ಎಂಬುವವರ ಪ್ಲೇಟ್​ಗೆ ಸಾಸ್ ಹಾಕಿದ ಹಿನ್ನೆಲೆ.. ಮಾತಿಗೆ ಮಾತು ಬೆಳೆದು ಬಾಟಲಿಯಿಂದ ಶ್ರೀನಿವಾಸ್ ಕಡೆಯವರಿಂದ ಪ್ರವೀಣ್ ಗೆ ಹಲ್ಲೆ ನಡೆದಿದೆ ಎನ್ನಲಾಗಿದೆ.ಆರ್ ಜೆ ಮೇಘಾ, ಪ್ರವೀಣ, ಕೃತಿಕಾ, ಹರ್ಷ, ಶ್ರೀನಿವಾಸ, ಶರಣ್ಯ, ಶೈಲೇಶ್, ಮಧ್ಯೆಗಲಾಟೆ ನಡೆದಿದೆ ಎಂದು ಹೇಳಲಾಗಿದೆ.

ಕುಡಿದ ನಸೆಯಲ್ಲಿ ಬೀರ್ ಬಾಟಲಿ ತೂರಾಡಿಕೊಂಡು ಪಬ್​ನಲ್ಲಿ ಗಲಾಟೆ ಮಾಡಿದ್ದು ಗಲಾಟೆಯಲ್ಲಿ ಪ್ರವೀಣ್ ಸೇರಿದಂತೆ ಮೇಘಾಗೆ ಗಾಯವಾಗಿದೆ ಎಂಬ ಮಾಹಿತಿ ಇದೆ. ಹುಬ್ಬಳ್ಳಿಯ ಗೋಕುಲ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ. ಸದ್ಯ ಸಿಸಿ ಕ್ಯಾಮರಾ ದೃಶ್ಯಗಳ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Source: newsfirstlive.com Source link