ಮನೆಗೆ ದಾರಿಕೊಡದೇ ಮಾನಸಿಕ ಕಿರುಕುಳ; ದಯಾಮರಣಕ್ಕೆ ಅರ್ಜಿ ಸಲ್ಲಿಸಲು ಮುಂದಾದ ಕುಟುಂಬ

ಮನೆಗೆ ದಾರಿಕೊಡದೇ ಮಾನಸಿಕ ಕಿರುಕುಳ; ದಯಾಮರಣಕ್ಕೆ ಅರ್ಜಿ ಸಲ್ಲಿಸಲು ಮುಂದಾದ ಕುಟುಂಬ

ರಾಮನಗರ: ಮನೆಗೆ ದಾರಿ ಕೊಡದೆ ಮಾನಸಿಕ ಕಿರುಕುಳ ಕೊಡುತ್ತಿದ್ದಾರೆ ಎಂದು ಆರೋಪಿಸಿ ಕುಟುಂಬವೊಂದು ಸಾಮೂಹಿಕ ದಯಾಮರಣಕ್ಕೆ ಅರ್ಜಿ ಸಲ್ಲಿಸಲು ಮುಂದಾಗಿದೆ.

ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮತ್ತಿಗುಂಟೆ ಗ್ರಾಮದ ವಿಶ್ವನಾಥ್‌.. ಗ್ರಾಮದಲ್ಲಿ 28 ವರ್ಷಗಳ ಹಿಂದೆಯೇ ಜಮೀನು ಖರೀದಿಸಿ ಹಲವು ವರ್ಷಗಳಿಂದ ವಾಸಿಸುತ್ತಿದ್ದೇವೆ. ಆದರೆ ಪಕ್ಕದವರು ಹಲವು ವರ್ಷಗಳಿಂದ ಓಡಾಡಲು ಜಾಗ ಕೊಡದೆ ಸತಾಯಿಸುತ್ತಿದ್ದಾರೆ. ಅಲ್ಲದೇ ಕೊಲೆ ಬೆದರಿಕೆ ಕೂಡ ಹಾಕಿದ್ದಾರೆ. ಆದ್ದರಿಂದ ಮನನೊಂದು ಹೆಂಡತಿ ಇಬ್ಬರು ಮಕ್ಕಳು, ತಂದೆ-ತಾಯಿ ಜೊತೆ ದಯಾಮರಣಕ್ಕೆ ಮುಂದಾಗುತ್ತಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ: ‘ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ‘ ಹಾಡಿಗೆ ಭರ್ಜರಿ ಸ್ಟೆಪ್​ ಹಾಕಿದ ದಾವಣಗೆರೆ ತಹಶೀಲ್ದಾರ್​

ನಾಳೆ ರಾಷ್ಟ್ರಪತಿ, ಸುಪ್ರೀಂ ಕೋರ್ಟ್ ಹಾಗೂ ಮಾನವ ಹಕ್ಕು ಆಯೋಗಕ್ಕೆ ಅನುಮತಿಗೆ ಕೊಡುವಂತೆ ಕೋರಿ ಅರ್ಜಿ ಸಲ್ಲಿಸಲಿದ್ದೇನೆ. ನಾವು 28 ವರ್ಷಗಳ ಹಿಂದೆಯೇ ಜಾಗ ಖರೀದಿಸಿ ಮನೆ ಕಟ್ಟಿಕೊಂಡಿದ್ದೇನೆ. ಹಾಗೆಯೇ ಮನೆ ದಾಖಲೆಗಳು ಅಧಿಕೃತವಾಗಿ ಇದ್ದರೂ ರಸ್ತೆ, ಚರಂಡಿಗೆ ಜಾಗ ಕೊಡದೆ ಸುತ್ತಲೂ ಬೇಲಿ ಹಾಕಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಈ ಹಿಂದೆ ಜಗಳವಾಗಿದ್ದ ಸಂದರ್ಭದಲ್ಲಿ ದೊಡ್ಡ ಮುದುವಾಡಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಂದ ರಸ್ತೆ ನಿರ್ಮಿಸುವುದಾಗಿ ಸಂಧಾನ ಮಾಡಲಾಗಿತ್ತು. ಅದಾದ ಬಳಿಕ ಮನೆ ಎದುರು ತಾತ್ಕಾಲಿಕವಾಗಿ ಕಳಪೆ ಗುಣಮಟ್ಟದ ರಸ್ತೆ ಮಾಡಿದ್ದಾರೆ. ಮಳೆ ಬಂದರೆ ಮನೆಗೆ ನೀರು ಹರಿಯುತ್ತದೆ. ಇವೆಲ್ಲವುದರಿಂದ ಮನನೊಂದು ನಾವು ಗ್ರಾಮ ತೊರೆದಿದ್ದೇವೆ ಎಂದು ಆಳಲು ತೋಡಿಕೊಂಡಿದ್ದಾರೆ.

Source: newsfirstlive.com Source link