ಗುಜರಾತ್ ನೂತನ ಸಿಎಂ ಭೂಪೇಂದ್ರ ಪಟೇಲ್​ಗೆ ಶುಭ ಕೋರಿದ ಬಸವರಾಜ ಬೊಮ್ಮಾಯಿ

ಗುಜರಾತ್ ನೂತನ ಸಿಎಂ ಭೂಪೇಂದ್ರ ಪಟೇಲ್​ಗೆ ಶುಭ ಕೋರಿದ ಬಸವರಾಜ ಬೊಮ್ಮಾಯಿ

ಗಾಂಧಿನಗರ: ಗುಜರಾತಿನ 17ನೇ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ ಭೂಪೇಂದ್ರ ಪಟೇಲ್ ಅವರಿಗೆ‌ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಭ ಕೋರಿದರು.

ಗಾಂಧಿನಗರದ ರಾಜಭವನದಲ್ಲಿ ನೂತನ ಸಿಎಂ ಪಟೇಲ್ ಅವರನ್ನು ಇಂದು ಮಧ್ಯಾಹ್ನ ಭೇಟಿ ಮಾಡಿದರು. ವಿಶೇಷ ವಿಮಾನದ ಮೂಲಕ ಗಾಂಧಿನಗರಕ್ಕೆ ತೆರಳಿದ ಸಿಎಂ ಬೊಮ್ಮಾಯಿ, ಹೊಸ ಜವಾಬ್ದಾರಿಯನ್ನು ಸಮರ್ಥವಾಗಿ ಎದುರಿಸುವಂತೆ ಶುಭ ಕೋರಿದರು.
ಬೆಂಗಳೂರಿನಿಂದ ಮುಖ್ಯಮಂತ್ರಿಗಳೊಂದಿಗೆ ತೆರಳಿದ್ದ ಸಚಿವರಾದ ಆರ್ ಅಶೋಕ್, ಮುರುಗೇಶ್ ನಿರಾಣಿ, ಡಾ. ಕೆ ಸುಧಾಕರ್ ಅವರೂ ಕೂಡ ನೂತನ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರಿಗೆ ಶುಭಾಶಯ ಕೋರಿದ್ದಾರೆ.

blank

ಇದೇ ಸಂದರ್ಭದಲ್ಲಿ ಕೇಂದ್ರ ಗೃಹ ಅಚಿವ ಅಮಿತ್ ಶಾ, ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಲ್ಹಾದ ಜೋಶಿ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ ಅವರನ್ನು ಸಿಎಂ ಭೇಟಿ ಮಾಡಿ ಚರ್ಚೆ ನಡೆಸಿದರು.

Source: newsfirstlive.com Source link