ಫಾರಿನ್​​ ಶೂಟ್​ನಲ್ಲಿದ್ದಾಗ ಕಳೆದುಹೋದ ‘ಕೋಟಿಗೊಬ್ಬ’ನ ಸ್ವತ್ತು ಮತ್ತೆ ಸಿಕ್ತು.. ಹಾಗಾದ್ರೆ ಏನದು..?

ಫಾರಿನ್​​ ಶೂಟ್​ನಲ್ಲಿದ್ದಾಗ ಕಳೆದುಹೋದ ‘ಕೋಟಿಗೊಬ್ಬ’ನ ಸ್ವತ್ತು ಮತ್ತೆ ಸಿಕ್ತು.. ಹಾಗಾದ್ರೆ ಏನದು..?

ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬನ ಒಂದು ಸ್ವತ್ತು ಕಳೆದು ಹೋಗಿತ್ತು.. ಈಗ ಮತ್ತೆ ಸಿಕ್ಕಿದೆ.. ಯಾವುದು ಕೋಟಿಗೊಬ್ಬನ ಆ ಸ್ವತ್ತು ? ಏನು ಕಳೆದು ಹೋಗಿತ್ತು ? ಏನು ಸಮಾಚಾರ ?.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಅಭಿಮಾನಿ ಪಾಳ್ಯದಲ್ಲಿ ಒಂದು ಕುತೂಹಲದ ಸಿನಿಮಾ ಕೋಟಿಗೊಬ್ಬ-3.. ಇಷ್ಟೊತ್ತಿಗಾಗ್ಲೇ ಕೋಟಿಗೊಬ್ಬ-3 ಬಂದು ನಾಲ್ಕನೇ ಸೀಕ್ವೆನ್ಸ್​​ಗೆ ಪ್ಲಾನ್ ಆದ್ರು ಆಗಬೇಕಿತ್ತು.. ಆದ್ರೆ ಏನ್ ಮಾಡೋದು ಇದು ಕೊರೊನಾ ಕಾಲ.. ಈಗ ವಿಷಯವೇನಪ್ಪ ಅಂದರೆ ಮೂರನೇ ಕೋಟಿಗೊಬ್ಬನ ಕಳೆದು ಹೋಗಿದ್ದ ಸ್ವತ್ತು ಮತ್ತೆ ಸಿಕ್ಕಿದೆ..

ಅರೇ ಕೋಟಿಗೊಬ್ಬನ ಸ್ವತ್ತು ಅದೇನು ಕಳೆದು ಹೋಗಿತ್ತು. ಒಂದು ವರ್ಷದ ಹಿಂದೆ ಕೋಟಿಗೊಬ್ಬ 3 ಸಿನಿಮಾ ಆ್ಯಕ್ಷನ್ ಟೀಸರ್ ಒಂದು ಹೊರಬಂದಿತ್ತು.. ಫಾರೀನ್​​ನಲ್ಲಿ ಶೂಟಿಂಗ್ ಮಾಡೋಕೆ ಹೋದಾಗ ಅಲ್ಲೇನೋ ಲೋಕೇಷನ್ ಪ್ರಾಬ್ಲಂ ಆಗಿ ಚಿತ್ರತಂಡ ಸಮಸ್ಯೆ ಎದುರಿಸಿತ್ತು.. ಕೆ-3 ಸಿನಿಮಾದ ಆ್ಯಕ್ಷನ್ ಟೀಸರ್ ಒಂದು ಕಣ್ಮರೆಯಾಗಿತ್ತು.. ಈಗ ಮತ್ತೆ ಕೆ-3 ಸಿನಿಮಾದ ಆ್ಯಕ್ಷನ್ ಟೀಸರ್ ಬಿಡುಗಡೆಯಾಗಿದ್ದು , ಇನ್ನೇನು ಕೆಲವೇ ದಿನಗಳಲ್ಲಿ ನಿಮ್ಮಮುಂದೆ ಬರ್ತಿವಿ ಅನ್ನೋ ಸೂಚನೆ ಕೊಡ್ತಿದೆ.

blank

ಕೋಟಿಗೊಬ್ಬ 3 ಚಿತ್ರದ ಟೀಸರ್ ಮತ್ತು  ಎರಡು ಹಾಡುಗಳು ಮತ್ತು ಈಗಾಗಲೇ ಕನ್ನಡಿಗರ ಮನೆ ಮನಕ್ಕೆ ತಲುಪಿವೆ. ಅದರಲ್ಲೂ ಪಟಾಕಿ ಪೋರಿಯೋ ಸಾಂಗ್ ಪಡ್ಡೆಗಳಿಗೆ ಫೇವರೀಟ್ ಆಗಿದ್ರೆ.. ವಿಕಟ ಕವಿ ಯೋಗರಾಜ್ ಭಟ್ರು ಬರೆದಿರುವ ನೀ ಕೋಟಿಯಲಿ ಒಬ್ಬನೆ ಮೆಲೋಡಿ ಸಾಂಗ್ ಹದಿ ಹರೆಯದ ಹೃದಯಗಳಲ್ಲಿ ಸಹಿ ಹಾಕಿದೆ..ಟೀಸರ್ ಹಾಗೂ ಎರಡು ಹಾಡುಗಳ ಕೇಳಿ ಇಷ್ಟ ಪಟ್ಟಿದ್ದ ಕಿಚ್ಚನ ಅಭಿಮಾನಿ ಬಳಗ ಮತ್ತೆ ಯಾವಾಗ ಕೋಟಿಗೊಬ್ಬ ಮಾಸ್ ಕಂಟೆಂಟ್ ನ ನೋಡ್ತಿವೋ ಅಂತ ಬಕ ಪಕ್ಷಿಗಳಂತೆ ಕಾಯ್ತಿದ್ರು.. ಅಭಿಮಾನಿಗಳ ಬಯಕೆ ಅರಿತ ಕೆ-3 ಚಿತ್ರತಂಡ  ಕೊನೆಗೂ ಕಿಚ್ಚನ ಮಾಸ್ ಅವತಾರವನ್ನ ದರ್ಶನ ಮಾಡಿಸಿದ್ದಾರೆ..

ಕೋಟಿಗೊಬ್ಬ 3 ಆಗಸ್ಟ್ ಗೆ ರಿಲೀಸ್, ಇಲ್ಲ ಗಣೇಶ ಹಬ್ಬ ಪಕ್ಕಾ ರಿಲೀಸ್ ಅಂತ ಹೇಳಿ.. ಕೊರೊನ ಕಾರಣದಿಂದ ಸಿನಿಮಾ ರಿಲೀಸ್ ಆಗದೆ ಅಭಿಮಾನಿಗಳ ನಿರಾಸೆ ಮೂಡಿಸಿದ್ದ ಕೆ-3 ಟೀಂ.. ಈಗ ಸಿನಿಮಾ ಬದಲು ಮಾಸ್ ಟೀಸರ್​ ಲಾಂಚ್ ಮಾಡಿ ಅಭಿಮಾನಿಗಳಿಗೆ ಸರ್ಪೈಸ್ ನೀಡಿದೆ..

ಅಕ್ಟೋಬರ್ 13ನೇ ತಾರೀಕಿನ ಮೇಲೆ ಕಣ್ಣಿಟ್ಟಿರೋ ಕೋಟಿಗೊಬ್ಬ-3 ಸಿನಿಮಾದ ನಿರ್ಮಾಪಕ ಸೂರಪ್ಪ ಬಾಬು ಒಂದು ವೇಳೆ 100 ಪರ್ಸೆಂಟ್ ಸೀಟು ಭರ್ತಿಗೆ ಅವಕಾಶ ಸಿಕ್ಕರೆ ಖಂಡಿತ ಪ್ರೇಕ್ಷಕರ ಮುಂದೆ ಬರಲಿದ್ದಾರೆ.. ನೆನಪಿರಲಿ ಕೋಟಿಗೊಬ್ಬ-3 ಸಿನಿಮಾ ಕನ್ನಡದ ಜೊತೆ ತೆಲುಗು ಭಾಷೆಯಲ್ಲಿಯೂ ತೆರೆಕಾಣಲಿದೆ..

Source: newsfirstlive.com Source link