ಎದೆ ತುಂಬಿ ಹಾಡುವೆನು ಸೂರ್ಯಕಾಂತ್​ ಕರೆಗೆ ಓಗೊಟ್ಟ ಸಿಎಂ.. ಊರಿಗೆ ಬಂತು ಬಸ್​

ಎದೆ ತುಂಬಿ ಹಾಡುವೆನು ಸೂರ್ಯಕಾಂತ್​ ಕರೆಗೆ ಓಗೊಟ್ಟ ಸಿಎಂ.. ಊರಿಗೆ ಬಂತು ಬಸ್​

ರಿಯಾಲಿಟಿ ಶೋಗಳ ಮೂಲಕ ಅದೆಷ್ಟೋ ಬಡ ಪ್ರತಿಭೆಗಳು ಬೆಳಕಿಗೆ ಬಂದಿವೆ..ಅದ್ರಲ್ಲೂ ಮುಖ್ಯವಾಗಿ ಸಂಗೀತ ಲೋಕದಲ್ಲಿ ಮಿನುಗುವ ತಾರೆಗಳಾಗಿದ್ದು, ಈ ಸಾಲಿಗೆ ಹೊಸ ಸೇರ್ಪಡೆಯಾದವರು ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಮೂಲಕ ಮನೆ ಮಾತಾಗಿರುವ ಕಲಬುರ್ಗಿಯ ಸೂರ್ಯಕಾಂತ್​.

blank

ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಲಿಂಗದಹಳ್ಳಿ ಎಂಬ ಕುಗ್ರಾಮದಿಂದ ಬಂದ ಸೂರ್ಯಕಾಂತ್​ಗೆ ಮಾತು ಕೈ ಕೊಟ್ಟರು ಸಂಗೀತ ಕೈಹಿಡಿದಿದೆ.. ಎಸ್​ಪಿಬಿ ಅವರ ಪರಂಪರೆಯ ಎದೆ ತುಂಬಿ ಹಾಡುವೆನು ಕಾರ್ಯಕ್ರಮ ಮಾಡಿರುವ ಇಂಪ್ಯಾಕ್ಟ್​ ಅಷ್ಟಿಷ್ಟಲ್ಲ..ಒಂದು ಪುಟ್ಟ ಗ್ರಾಮಕ್ಕೆ ದಾರಿ ದೀಪವಾಗಿದೆ.

blank

ಹೌದು, ಗಡಿಲಿಂಗದಹಳ್ಳಿಗೆ ಎಷ್ಟೋ ವರ್ಷಗಳಿಂದ ಬಸ್​ ವ್ಯವಸ್ಥೆನೇ ಇರಲಿಲ್ಲ. ಈ ಕುರಿತು ಸಾಕಷ್ಟು ಬಾರಿ ಪ್ರತಿಭಟನೆ ಮಾಡಿದ್ರು ಕೂಡ ಯಾವುದೇ ಪ್ರಯೋಜನವಾಗಿರಲಿಲ್ಲ. ಆದ್ರೆ ಸೂರ್ಯಕಾಂತ್​ ಎದೆ ತುಂಬಿ ಹಾಡುವೆನು ವೇದಿಕೆ ಮೇಲೆ ಅಳಲು ತೋಡಿಕೊಂಡಿದ್ದರು.
ಈ ಬಗ್ಗೆ ಮಾಹಿತಿ ಪಡೆದುಕೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಕ್ಷಣ ಕಾರ್ಯಪ್ರವತ್ತರಾಗಿ ಚಿಂಚೋಳಿಯಿಂದ ಗಡಿಲಿಂಗದಹಳ್ಳಿಗೆ ಬಸ್ ಸೇವೆ​ ಕಲ್ಪಿಸಿದ್ದಾರೆ.

ಸವಾಲುಗಳ ಸರಮಾಲೆಯಲ್ಲಿಯೂ ಕೂಡ ತಮ್ಮ ಅದ್ಭುತವಾದ ಗಾಯನದ ಮೂಲಕ ಸರ್ಕಾರದವರೆಗೂ ಮುಟ್ಟಿರುವ ಸೂರ್ಯಕಾಂತ್​ ಎಷ್ಟೋ ಪ್ರತಿಭೆಗಳಿಗೆ ಸ್ಫೂರ್ತಿದಾಯಕವಾಗಿ ಬೆಳೆಯುತ್ತಿದ್ದು, ಅವರ ಗಾನ ಸುಧೆ ಹೀಗೆ ಮುಂದುವರೆಯಲಿ.. ನಮ್ಮ ಕಡೆಯಿಂದ ಆಲ್​ ದಿ ಬೆಸ್ಟ್​.

Source: newsfirstlive.com Source link