ಕಿಚ್ಚ ಸುದೀಪ್ ಅವರ ಅದೊಂದು ಫೋಟೋ ನೋಡಿ ರಮ್ಯಾ ಏನಂದ್ರು ಗೊತ್ತಾ?

ಕಿಚ್ಚ ಸುದೀಪ್ ಅವರ ಅದೊಂದು ಫೋಟೋ ನೋಡಿ ರಮ್ಯಾ ಏನಂದ್ರು ಗೊತ್ತಾ?

ಮೋಹಕ ತಾರೆ ರಮ್ಯಾ ಸಿನಿಮಾ ಮತ್ತು ರಾಜಕೀಯ ಈ ಎರಡರಿಂದಲೂ ಸದ್ದು ಗದ್ದಲ್ಲ ಮಾಡ್ತಿಲ್ಲ.. ಒಂದ್ ಲೆಕ್ಕಕ್ಕೆ ತಾತ್ಕಾಲಿಕ ನಿವೃತ್ತಿ ಎನ್ನಬಹುದು..ಆದ್ರೆ ಸಿನಿಮಾ ಮಾಡದಿದ್ದರೂ, ರಾಜಕೀಯಕ್ಕೆ ಹೋಗದಿದ್ದರೂ ಸೋಶಿಯಲ್ ಮೀಡಿಯಾದಿಂದ ಸದ್ದು ಗದ್ದಲ್ಲ ಮಾಡ್ತಿದ್ದಾರೆ.. ಕಿಚ್ಚ ಸುದೀಪ್ ಅವರ ಆ ಒಂದು ವಿಚಾರಕ್ಕೆ​​​ ಮೋಹಕ ತಾರೆ ರಮ್ಯಾ ಫುಲ್ ಫಿದಾ ಆಗಿದ್ದಾರೆ.. ಸುದೀಪ್​ ಅವರ ಆ ಒಂದು ವಿಚಾರ ಅಂದ್ರೆ ಯಾವೊಂದು ವಿಚಾರ..?

blank

ಸ್ಯಾಂಡಲ್​ವುಡ್​​ನ ಬೆಸ್ಟ್ ಫಿಲ್ಮ್ ಪೇರ್​ಗಳಲ್ಲೊಂದು ಕಿಚ್ಚ ಸುದೀಪ್ ಮತ್ತು ರಮ್ಯಾ.. ಜಸ್ಟ್ ಮಾತ್ ಮಾತಲ್ಲಿ, ಕಿಚ್ಚ ಹುಚ್ಚ ಹಾಗೂ ಮುಸ್ಸಂಜೆ ಮಾತು ಸಿನಿಮಾಗಳಲ್ಲಿ ಸುದೀಪ್ ಮತ್ತು ರಮ್ಯಾ ಒಟ್ಟಾಗಿ ಕಂಗೊಳಿಸಿದ್ದಾರೆ. ಸುದೀಪ್ ಅವರ ಸಿನಿಮಾ ಕಂಡಾಗ, ಸುದೀಪ್ ಅವರ ಬರ್ತ್​ಡೇ ಬಂದಾಗ ರಮ್ಯಾ ಟ್ವೀಟ್ ಸಂದೇಶದ ಮೂಲಕ ಶುಭಾಶಯಗಳನ್ನ ತಿಳಿಸುತ್ತಿರುತ್ತಾರೆ. ರಮ್ಯಾ ಅವರ ಬರ್ತ್​ಡೇಗೂ ಸುದೀಪ್ ಬೆಸ್ಟ್ ವಿಶಸ್ ಅನ್ನ ಟ್ವೀಟಿಸುತ್ತಾರೆ.. ಇವತ್ತಿಗೂ ರಮ್ಯಾ ಮತ್ತು ಸುದೀಪ್ ಅವರ ನಡುವೆ ಉತ್ತಮ ಫ್ರೆಂಡ್​ಶಿಪ್ ಇದೆ..
ಅಭಿಮಾನಿಗಳಿಗೆ ಅಭಿನಯ ಚಕ್ರವರ್ತಿ ಸುದೀಪ್ ಏನ್ ಮಾಡಿದ್ರೂ ಅಚ್ಚು ಮೆಚ್ಚು.. ಹಂಗೆ ಕಿಚ್ಚ ಸುದೀಪ್ ಅವರು ಚಿತ್ರರಂಗದ ಮಂದಿಗೆ ಒಂದ್ ಒಂದು ವಿಚಾರಕ್ಕೆ ಒಬ್ಬೊಬರಿಗೆ ಅಚ್ಚು ಮೆಚ್ಚು.. ಆದ್ರೆ ಮೋಹಕ ತಾರೆ ರಮ್ಯಾ ಅವರಿಗೆ ಆ ಒಂದು ವಿಚಾರಕ್ಕೆ ಸುದೀಪ್ ಅವರು ಸಖತ್ ಅಚ್ಚು ಮೆಚ್ಚಾಗಿದ್ದಾರಂತೆ.

ಇದನ್ನೂ ಓದಿ:ಬ್ಲಾಂಕೇಟ್​​​ನಿಂದಲೇ ಮಾನ ಮುಚ್ಚಿಕೊಂಡು.. ಆ ಅನುಭವದ ಬಗ್ಗೆ.. ಆ ಪ್ರೊಡ್ಯೂಸರ್ ಬಗ್ಗೆ ಹೇಳಿದ್ದೇನು ಈ ನಟಿ?

blank

ಕಿಚ್ಚ ಸುದೀಪ್ ಅವರ ಆ ಒಂದು ಇಮೇಜ್​​ಗೆ ರಮ್ಯಾ ಕ್ಲೀನ್ ಬೋಲ್ಡ್ ಆಗಿದ್ದಾರೆ.. ಕೊರೊನಾ ಸೋಂಕಿಗೆ ಕಿಚ್ಚ ಸುದೀಪ್ ತುತ್ತಾಗಿದ್ದರು, ಕೊರೊನಾವನ್ನ ಗೆದ್ದು ಕನ್ನಡಿಗರ ಮುಂದೆ ಬಿಗ್ ಬಾಸ್ ಅಗಿ ಮುಂದೆ ಬಂದಿದ್ರು.. ಈಗ ಮತ್ತೆ ಶೂಟಿಂಗ್ ಕಡೆ ಮುಖ ಮಾಡಿರೋ ಪೈಲ್ವಾನ್ ಜೀಮ್​​​ನಲ್ಲಿ ಬೆವರು ಹರಿಸುತ್ತಿದ್ದಾರೆ.. ಬಹು ದಿನಗಳ ನಂತರ ಜೀಮ್​​ನಲ್ಲಿ ಮೈ ಮುರಿಯುತ್ತಿದ್ದೇನೆ ಎಂದು ಸುದೀಪ್ ಹಾಕಿದ್ದ ಇಮೇಜ್ ಸಂದೇಶಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.. ಅಭಿಮಾನಿಗಳಂತೆ ರಮ್ಯಾ ಅವರು ಫಿದಾ ಆಗಿದ್ದಾರೆ..

ಸುದೀಪ್ ಅವರ ಬಾಡಿ ಬಿಲ್ಡಿಂಗ್ ಇಮೇಜ್​​ಗೆ ರಮ್ಯಾ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.. ಮೆಚ್ಚುಗೆ ಮಾತುಗಳನ್ನ ಸೋಶಿಯಲ್ ಮೀಡಿಯಾ ಸಂದೇಶದಲ್ಲಿ ಸಾರಿದ್ದಾರೆ.. ರಮ್ಯಾ ಅವರ ಪ್ರತಿಕ್ರಿಯೆಗೆ ಅಭಿಮಾನಿಗಳು ಮತ್ತೆ ಸುದೀಪ್ ಅವರ ಜೊತೆ ಸಿನಿಮಾ ಮಾಡಿ ಮೇಡಂ ಅಂತ ಕಾಮೆಂಟ್ ಹಾಕುತ್ತಿದ್ದಾರೆ.. ಒಟ್ಟಿನಲ್ಲಿ ರಮ್ಯಾ ಅವರು ಸೂಪರು, ಸುದೀಪ್ ಅವರು ಸೂಪರು.. ಏನಂತೀರಿ..

Source: newsfirstlive.com Source link