ಗ್ರಾಮಕ್ಕೆ ಶೌಚಾಲಯ ಇಲ್ಲವೆಂದು ಗ್ರಾ. ಪಂಚಾಯಿತಿ ಅಧ್ಯಕ್ಷರನ್ನೇ ಕಚೇರಿಯೊಳಗೆ ಕೂಡಿಹಾಕಿದ ಗ್ರಾಮಸ್ಥರು

ಗ್ರಾಮಕ್ಕೆ ಶೌಚಾಲಯ ಇಲ್ಲವೆಂದು ಗ್ರಾ. ಪಂಚಾಯಿತಿ ಅಧ್ಯಕ್ಷರನ್ನೇ ಕಚೇರಿಯೊಳಗೆ ಕೂಡಿಹಾಕಿದ ಗ್ರಾಮಸ್ಥರು

ಬಳ್ಳಾರಿ: ಗ್ರಾಮಕ್ಕೆ ಶೌಚಾಲಯ ಇಲ್ಲ ಅಂತ ಗ್ರಾಮ ಪಂಚಾಯತಿ ಅಧ್ಯಕ್ಷರನ್ನ ಗ್ರಾಮಸ್ಥರು ಕೂಡಿಹಾಕಿದ ಘಟನೆ ಸಂಡೂರು ತಾಲೂಕಿನ ವಿಠಲಾಪುರ ಗ್ರಾಮದಲ್ಲಿ ನಡೆದಿದೆ.

ವಾರ್ಡ್ ನಂ 02 ರಲ್ಲಿ ಶೌಚಾಲಯ ನಿರ್ಮಿಸಿಲ್ಲ ಅಂತ ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನು ಗ್ರಾಮಸ್ಥರು ಗ್ರಾಮ ಪಂಚಾಯಿತಿ ಒಳಗೆ ಇರಿಸಿ ಕೂಡಿಹಾಕಿದ್ದಾರೆ. ಗ್ರಾಮಸ್ಥರು ಶೌಚಾಲಯ ನಿರ್ಮಿಸುವಂತೆ ಹಲವು ದಿನಗಳಿಂದ ಒತ್ತಾಯಿಸಿದ್ದರಂತೆ. ಆದರೆ ಜನರ ಮನವಿಗೆ ಸ್ಪಂದಿಸಿದ ಅಧ್ಯಕ್ಷರನ್ನು ಗ್ರಾಮ ಪಂಚಾಯತಿ ಒಳಗೆ ಹಾಕಿ ಬೀಗ ಹಾಕಿದ್ದಾರೆ.

ಇದನ್ನೂ ಓದಿ: ಗುಡಿಸಲು ಕಟ್ಟಲು ವೇಸ್ಟ್ ಬ್ಯಾನರ್ ಕೊಡಿ ಎಂದ ಅಜ್ಜ-ಅಜ್ಜಿಗೆ 2 ಲಕ್ಷದ ಮನೆಯನ್ನೇ ನಿರ್ಮಿಸಿಕೊಟ್ಟ ಕಾರ್ಪೊರೇಟರ್

ಮನೆಗೊಂದು ಶೌಚಾಲಯ ನಿರ್ಮಾಣಕ್ಕೆ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತೆ.. ವಿಠಲಾಪುರ ಗ್ರಾಮದಲ್ಲಿ ಶೌಚಾಲಯ ನಿರ್ಮಾಣ ಆಗ್ತಿಲ್ಲ ಅಂತ ಜನರು ಆಕ್ರೋಶ ಹೊರಹಾಕಿದ್ದಾರೆ. ಡ್ರೈನೇಜ್ ವ್ಯವಸ್ಥೆ ಹಾಗೂ ಶೌಚಾಲಯಕ್ಕಾಗಿ ಪ್ರತಿಭಟನೆ ಮಾಡಿದ್ದಾರೆ. ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಂಗಳಮ್ಮ, ಸದಸ್ಯ ಮಾಂತೇಶ ನನ್ನ ಕೂಡಿಹಾಕಿದ್ದಾರೆ.

Source: newsfirstlive.com Source link