ದಿಗ್ಗಜ ಆಟಗಾರರನ್ನು ಕೋಚ್​ ಆಗಿ ನೇಮಿಸಿದ ಪಾಕಿಸ್ತಾನ ಕ್ರಿಕೆಟ್ ಬೋರ್ಡ್

ದಿಗ್ಗಜ ಆಟಗಾರರನ್ನು ಕೋಚ್​ ಆಗಿ ನೇಮಿಸಿದ ಪಾಕಿಸ್ತಾನ ಕ್ರಿಕೆಟ್ ಬೋರ್ಡ್

ಐಸಿಸಿ ಟಿ-20 ವಿಶ್ವಕಪ್​ಗೆ ಇನ್ನೇನು ಕೆಲವೇ ಕೆಲವು ದಿನಗಳು ಬಾಕಿ ಇವೆ. ಅಕ್ಟೋಬರ್ 17 ರಿಂದ ನಡೆಯಲಿರೋ ಟಿ-20 ವಿಶ್ವಕಪ್​ಗೆ ಎಲ್ಲಾ ತಂಡಗಳ ಭರ್ಜರಿಯಾಗಿ ತಯಾರಿ ನಡೆಸಿಕೊಳ್ತಿವೆ. ಇದರ ನಡುವೆ ಪಾಕಿಸ್ತಾನ ಕ್ರಿಕೆಟ್​ ತಂಡಕ್ಕೆ ಹೊಸ ಹುರುಪು ಬಂದಿದೆ. ಆಸ್ಟ್ರೇಲಿಯಾದ ಮಾಜಿ ಆಟಗಾರ ಮ್ಯಾಥೀವ್​ ಹೇಡನ್​ ಹಾಗೂ ದಕ್ಷಿಣ ಆಫ್ರಿಕಾದ ಮಾಜಿ ವೇಗಿ ವರ್ನೋನ್​ ಪೀಲಾಂಡರ್ ಹೊಸ ಕೋಚ್ ಆಗಿ ಆಯ್ಕೆ ಗೊಂಡಿದ್ದಾರೆ.

ಈಗಷ್ಟೇ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಚೇರ್ಮನ್​ ಪಟ್ಟ ಅಲಂಕರಿಸಿದ ರಮೀಜ್ ರಾಜಾ ತಂಡಕ್ಕೆ ಬೂಸ್ಟ್ ನೀಡಿದ್ದಾರೆ. ತಾವು ಚೇರ್ಮನ್ ಆಗಿ ಕೆಲವೇ ಕೆಲವು ಗಂಟೆಗಳಲ್ಲಿ ಪಾಕ್ ತಂಡಕ್ಕೆ ಹೊಸ ಕೋಚ್​ಗಳನ್ನ ನೇಮಕ ಮಾಡಿದ್ದಾರೆ. ಮಿಸ್ಬಾ ಉಲ್​-ಹಕ್ ಹಾಗೂ ವಕಾರ್ ಯೂನಿಸ್ ಸ್ಥಾನವನ್ನ ಆಸ್ಟ್ರೇಲಿಯಾದ ಮ್ಯಾಥೀವ್​ ಹೇಡನ್​ ಹಾಗೂ ದಕ್ಷಿಣ ಆಫ್ರಿಕಾದ ವರ್ನೋನ್​ ಪೀಲಾಂಡರ್ ಗಿಟ್ಟಿಸಿಕೊಂಡಿದ್ದಾರೆ.

ಇದನನ್ನೂ ಓದಿ: ಧವನ್​ ಕರಿಯರ್​ಗೆ ಬಿತ್ತಾ ಬ್ರೇಕ್​.? ಶಿಖರ್​ ಸ್ಥಾನಕ್ಕಾಗಿ ಇಬ್ಬರ ನಡುವೆ ನಡೆಯುತ್ತಿದೆ ತೀವ್ರ ಪೈಪೋಟಿ

ಅಂದಹಾಗೇ 20 ವಿಶ್ವಕಪ್​ಗೆ ಪಾಕ್ ತಂಡ ಬ್ಯಾಟಿಂಗ್ ಕೂಚ್​ ಆಗಿ ಮ್ಯಾಥೀವ್​ ಹೇಡನ್ ಹಾಗೂ ಬೌಲಿಂಗ್ ಕೋಚ್ ಆಗಿ ವರ್ನೋನ್​ ಪೀಲಾಂಡರ್​ನನ್ನ ನೇಮಕ ಮಾಡಲಾಗಿದೆ.

ಇಂದು ಸುದ್ದಿಗೋಷ್ಠಿ ನಡೆಸಿದ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಚೇರ್ಮನ್​ ರಮೀಜ್ ರಾಜಾ ಹೊಸ ಕೋಚ್​ಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ಇದರ ಬಗ್ಗೆ ಮಾತನಾಡಿದ ರಮೀಜ್ ರಾಜಾ, 2021ರ ಟಿ-20 ವಿಶ್ವಕಪ್​ಗೆ ಹೊಸ ಹುರುಪಿನಿಂದ ಪಾಕಿಸ್ತಾನ ಕಣಕ್ಕಿಳಿಯಲಿದೆ. ಹೊಸ ಕೋಚ್​ಗಳು ಈ ಬಾರಿ ಪಾಕಿಸ್ತಾನ ತಂಡವನ್ನ ಮುನ್ನಡೆಸಲಿದ್ದಾರೆ. ಮ್ಯಾಥೀವ್​ ಹೇಡನ್​ ಹಾಗೂ ವರ್ನೋನ್​ ಪೀಲಾಂಡರ್ ಬಗ್ಗೆ ನನಗೆ ಚನ್ನಾಗಿ ಗೊತ್ತಿದೆ. ಅವರು ನಮ್ಮ ತಂಡವನ್ನ ಉನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋಗ್ತಾರೆ. ಎಂತಹ ಒತ್ತಡವಿದ್ರೂ ಪಾಕ್​ ತಂಡ ಸಲಿಸಾಗಿ ಆಡುವ ವಿಶ್ವಾಸವಿದೆ ಅಂತ ಹೇಳಿದ್ದಾರೆ.

ಕಳೆದ ವಾರವಷ್ಟೇ ಪಾಕಿಸ್ತಾನ ಬ್ಯಾಟಿಂಗ್ ಕೋಚ್ ಆಗಿದ್ದ ಮಿಸ್ಬಾ ಉಲ್​ – ಹಕ್ ಹಾಗೂ ಪಾಕ್​ ಬೌಲಿಂಗ್ ಕೋಚ್ ಆಗಿದ್ದ ವಕಾರ್ ಯೂನಿಸ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು. ಆದರೆ ಒಂದೇ ಒಂದು ವಾರದಲ್ಲೇ ಪಿಸಿಬಿ ಹೊಸ ಚೇರ್ಮನ್​ ರಮೀಜ್ ರಾಜಾ ಪಾಕ್​ ತಂಡಕ್ಕೆ ನೂತನ ಕೋಚ್​ಗಳನ್ನ ನೇಮಕ ಮಾಡಿದ್ದಾರೆ..

Source: newsfirstlive.com Source link